National Doctor’s Day

ಗಂಗಾವತಿ.31 ರೋಗದ ಚಿಕಿತ್ಸೆ ನೀಡುವುದರ ಜೋತೆಗೆ ರೋಗ ತಡಗಟ್ಟುವ ವೈದ್ಯರೆ ಆದರ್ಶ ವೈದ್ಯರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಬೆಂಗಳೂರು ಡಾ.ಜಿ.ಎನ್.ಶ್ರೀನಿವಾಸ ಹೇಳಿದರು.
ಅವರು ಗಂಗಾವತಿ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚಾರಣೆ ಪ್ರಯುಕ್ತ ಆಯೋಜಿಸಿದ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.
ವೈದ್ಯರ ವೃತ್ತಿ ಗೌರವಯುತವಾಗಿದ್ದು, ಆದರ್ಶ ವೈದ್ಯರು ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವಿಕೆಗೆ ಗಮನ ನೀಡುತ್ತಾರೆ. ವೈದ್ಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಅವಲಂಬಿಸದೇ ಪುಸ್ತಕಗಳನ್ನು ಓದಿ, ವೈದ್ಯ ಉಪನ್ಯಾಸಕರಿಂದ ಆಸ್ಪತ್ರೆಯಲ್ಲಿ ಮಾಹಿತಿ ಸಂಗ್ರಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರಲ್ಲದೆ, ವೈದ್ಯಕೀಯ ವೃತ್ತಿಯಲ್ಲಿ ಭಾರತ ರತ್ನ ಡಾ.ಬಿ.ಸಿ.ರಾಯ್ ರವರ ಹಾಗೆ ಸೇವೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ನಮ್ಮದಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಶಿ.ಸವಡಿ ಮಾತನಾಡಿ, ಜನರ ಆರೋಗ್ಯ ಕಾಪಾಡಿ ಆರೈಕೆ ಮೂಲಕ ಜೀವ ಉಳಿಸುವ ವೈದ್ಯ ವೃತ್ತಿ ಪವಿತ್ರವಾದುದು ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು,ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರ ಸಂಘದ ರಾಜ್ಯಾಧ್ಯಕ್ಷರಾದ ಡಾ.ವಿವೇಕ್ ದೊರೆ,ಡಾ.ಮೇಟಿ,ರಾಯಚೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು,ವಿಜಯನಗರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್,ಡಾ.ಪ್ರಕಾಶ ನೀಲಗುಂದ್, ಡಾ.ರಮೇಶಬಸಬಾಬು,ಡಾ.ಬಸರೆಡ್ಡಿ,ತಾಲೂಕು ವೈದ್ಯಾಧಿಕಾರಿಗಳಾದ ಡಾ.ಗೌರಿ ಶಂಕರ್,ಸೇರಿದಂತೆ ಇತರರು ಇದ್ದರು
Kalyanasiri Kannada News Live 24×7 | News Karnataka
