Breaking News

ಮಕ್ಕಳ ಸಂರಾಕ್ಷಣಾ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

Awareness Program on Child Protection Act

ಗಂಗಾವತಿ.27 ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಾಲೂಕು ಆಡಳಿತ ತಾಲೂಕು ಪಂಚಾಯತ್ ಜಿಲ್ಲಾ ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮತ್ತು ಭ್ರೈಟ್ ಇಂಡಿಯಾ ಸೋಸೈಟಿ ಇವರ ಸಂಯೋಗದೊಂದಿಗೆ ಇಂದು ಶ್ರೀ ಚನ್ನಮಲ್ಲಿಕಾರ್ಜುನ ಸಭಾಂಗಣದಲ್ಲಿ ಮಕ್ಕಳ ಸಂರಾಕ್ಷಣಾ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಲಾಯಿತು
ನಂತರ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಅವರು 18 ರ ಒಳಗಿನ ಬಾಲಕಿ 21 ರ ಒಳಗಿನ ಪುರುಷರನ ಮದುವೆಯ ಯೋಚನೆ ಬಿಟ್ಟು ಬಿಡಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಬಾಲ್ಯ ವಿವಾಹ ತಡೆಗಟ್ಟಿ ಮಕ್ಕಳ ಬಾಳು ಬೆಳಗಿಸಬೇಕು ಚಿಕ್ಕ ವಯಸ್ಸಿನಲ್ಲ ಮದುವೆ ಮಾಡಿದರೆ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ,ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಗರ್ಭಪಾತದ ಸಾಧ್ಯತೆ ಹೆಚ್ಚು ಹಾಗೂ ತಾಯಂದಿರ ಶಿಶು ಮರಣ ಮತ್ತು ಮಕ್ಕಳ ಮರಣ ಸಾಧ್ಯತೆ ಇರುತ್ತದೆ. ಎಳೆಯ ವಯಸ್ಸಿನಲ್ಲಿಯೇ ವಿಧವೆಯಾಗುವ ಸಾಧ್ಯತೆ ಅಧಿಕವಾಗಿದೆ ಬಾಲಕಿಯು ಮಾನಸಿಕ ಕಳೆದುಕೊಳ್ಳುವ ಬಹುದಾಗಿದೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಶಿಕ್ಷಣದಿಂದ ವಂತಿತರಾಗಿ ಬಡತನ ಅನಕ್ಷರತೆ ನಿರುದ್ಯೋಗ ಹೆಚ್ಚಾಗುತ್ತದೆ ಎಂದು ಸಲಹೆಯನ್ನು ನೀಡಿದರು
ನಂತರ ಮಾತನಾಡಿದ ತಾಲೂಕು ವೈದ್ಯಾಧಿಕಾರಿಗಳಾದ ಶರಣಪ್ಪ ಚಕ್ಕೋತಿ ಅವರು ನಮ್ಮ ಗಂಗಾವತಿ ‌ನಗರದಲ್ಲಿ ಎಲ್ಲಾ ನಮ್ಮ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಈಗಾಗಲೇ ಬಾಲ್ಯವಿವಾಹ ಮತ್ತು ಬಾಲ‌ ಕಾರ್ಮಿಕ ಪದ್ದತಿ ಬಗ್ಗೆ ಪ್ರತಿಯೊಂದು ವಾರ್ಡ್ ನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಮನವರಿಕೆಯನ್ನು ಮಾಡಿದ್ದಾರೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಈ ಒಂದು ತರಬೇತಿಯನ್ನು ಸಂಪೂರ್ಣವಾಗಿ ಪಡೆದುಕೊಂಡರು ತಮ್ಮ ತಮ್ಮ ವಾರ್ಡ್ ನಲ್ಲಿ ಸಾರ್ವಜನಿಕರಿಗೆ ಮನ ಹೊಲಸುವ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ‌ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೋಟಗಾರ್, ಶಿಕ್ಷಣ ಸಂಯೋಜಕರಾದ ರಾಘವೇಂದ್ರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಶ್ರೀನಿವಾಸ ನಾಯಕ್,ಹಿಂದುಳಿದ ವರ್ಗದ ಕಲ್ಯಾಣಧಿಕಾರಿ ಉಷಾ ಮುಜುಂದಾರ್,ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ಶರಣಪ್ಪ,ಹಿರಿಯ ಮೇಲ್ವಿಚಾರಣದಿಕಾರಿ ಶರಣಮ್ಮ,ರವಿ ಬಡಿಗೇರ,ಆರೋಗ್ಯ ಸಿಬ್ಬಂದಿ ಮಂಜುಳಾ ಅಂಗನವಾಡಿ ಕಾರ್ಯಕರ್ತರಾದ ಸಾವಿತ್ರಿ ಜೋಶಿ, ಹುಲಿಗೆಮ್ಮ,ಗಿರೀಜಾ,ಶರಣಮ್ಮ ಕಲ್ಮಾಠ,ಮೈಮುದಾಬೇಗಂ,ಕವಿತಾ,ಶೈಲಜಾ, ಮೇರಿ ಆಶಾ ಕಾರ್ಯಕರ್ತರಾದ ವಿಜಯಲಕ್ಷ್ಮಿ ಆಚಾರ್ಯ, ಶರಣಮ್ಮ,ಸುಮಾ,ಜ್ಯೋತಿ, ಮೀನಾಕ್ಷಿ, ಸರೋಜಬಾಯಿ,ಸರಸ್ವತಿ, ಗೌಸೀಯಾ, ರೇಖಾ,ದೀಪಾ,ಈರಮ್ಮ, ನೇತ್ರಾ,ಆಫ್ರೀನಾ,ಜಯಶ್ರೀ ಸೇರಿದಂತೆ ಇತರರು ಇದ್ದರು

ಜಾಹೀರಾತು

About Mallikarjun

Check Also

ಕೃಷಿ ಪಂಡಿತ ಪ್ರಶಸ್ತಿಗೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Application deadline extended for Krishi Pandita Award ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): 2025-26 ನೇ ಸಾಲಿನಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.