Breaking News

ಯಲಬುರ್ಗಾ ಪಟ್ಟಣದಲ್ಲಿ25ನೇಕಾರ್ಗಿಲ್ ವಿಜಯೋತ್ಸವ

25th Kargil Victory Day in Yalaburga town

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಷಳ : ಯಲಬುರ್ಗಾ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವ, ರಜತ ಮಹೋತ್ಸವ ಹಾಗೂ ಹುತಾತ್ಮ ಯೋಧರಿಗೆ ಗೌರವ ನಮನ ಹಾಗೂ ಮಾಜಿ ಯೋಧರ ಸಂಘದ 10ನೇ ವರ್ಷದ ಸಂಘದ ವಾರ್ಷಿಕೋತ್ಸವ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಯೋಧರು ಹಾಗೂ ಪಟ್ಟಣ ಪಂಚಾಯತಿಯವರು, ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಯವರು ಭಾಗವಹಿಸಿದ್ದರು.

ನಂತರದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿ, ವಿದ್ಯಾರ್ಥಿನಿಯರುಜಯ ಘೋಷಣೆಯ ಮೂಲಕ ಪಟ್ಟಣದಲ್ಲಿ ಪೇರಿಯಡ್ ನಡೆಸಿದರು.

ಕಾರ್ಯಕ್ರಮದಲ್ಲಿ ಮುಖಂಡ ಬಸವರಾಜ ಉಳ್ಳಾಗಡ್ಡಿ ಸೇರಿದಂತೆ ಮತ್ತಿತರರು ಕಾರ್ಗಿಲ್ ವಿಜಯೋತ್ಸವ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಶಿವನಗೌಡ್ರ ಬಾನಪ್ಪಗೌಡ್ರ, ಸುಕಮುನಿ ತೋಟದ, ಮಲ್ಲಪ್ಪ ಸರ್ವಿ, ಬಸವರಾಜ ಮುಧೋಳ, ಹನುಮಂತರಾವ್ ದೇಶಪಾಂಡೇ, ಶ್ರೀಶೖಲ್ ಹಿರೇಮಠ, ಗವಿಸಿದ್ದಪ್ಪ ಬನ್ನಿಗೋಳ, ಕಾಲೇಜಿನ ಪ್ರಾಚಾರ್ಯರು ಇನ್ನೀತರ ಮುಖಂಡರು ಅಭಿಮಾನಿ ಬಳಗದವರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *