Breaking News

ಕೊಲೆ,ದರೋಡೆ,ಅವಘಡ,ಅತ್ಯಾಚಾರ, ಎಲ್ಲಾ ಸಂದರ್ಭಕ್ಕೊಸಾಮಾನ್ಯ ಸಂಖ್ಯೆ ತುರ್ತಿನ ಆಪದ್ಬಾಂಧವ 112 ಕರೆ.

For murder, robbery, accident, rape, common number emergency call 112.

ಜಾಹೀರಾತು

ಗಂಗಾವತಿ.20 ಗಂಗಾವತಿ ನಗರದಲ್ಲಿ ಪೊಲೀಸ್ ‌ಇಲಾಖೆಯಿಂದ ಸಾರ್ವಜನಿಕರಿಗೆ 112 ಬಗ್ಗೆ ಮಾಹಿತಿಯನ್ನು ನೀಡಲಾಯಿತು,
ಸಹಾಯವಾಣಿಯನ್ನು, 112 ತುರ್ತು ಸಹಾಯವಾಣಿಯೊಂದಿಗೆ ವಿಲೀನಗೊಳಿಸಲಾಗಿದ್ದು, ಈ ಹಿಂದೆ ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ಆಂಬುಲೆನ್ಸ್ ಸೇವೆಗೆ ಬೇರೆ ಬೇರೆ ನಂಬರ್‌ಗೆ ಕರೆ ಮಾಡಬೇಕಿತ್ತು ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುತ್ತಿದ್ದರು. ಈ ಗೊಂದಲಕ್ಕೆ ಕಡಿವಾಣ ಹಾಕುವ ಸಲುವಾಗಿ ಒಂದು ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ಅನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ
112 ಕಾರ‍್ಯ: ಒಂದು ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ಅನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಈ ಹಿಂದೆ ತುರ್ತು ಸಮಯದಲ್ಲಿ ಪೊಲೀಸ್‌ ಇಲಾಖೆ, ಅಗ್ನಿಶಾಮಕ ಮತ್ತು ಆಂಬುಲೆನ್ಸ್‌ ಸೇವೆಗೆ ಬೇರೆ ನಂಬರ್‌ಗೆ ಕರೆ ಮಾಡಬೇಕಿತ್ತು. ಇದರಿಂದ ಸಾರ್ವಜನಿಕರು ಸಹ ಗೊಂದಲಕ್ಕೆ ಒಳಗಾಗುತ್ತಿದ್ದರು. ಹಾಗಾಗಿ ಈ ಗೊಂದಲಕ್ಕೆ ಕಡಿವಾಣ ಹಾಕುವ ಸಲುವಾಗಿ ಈ ಮೂರು ಇಲಾಖೆಯ ಸೇವೆಗೆ 112 ಸಂಖ್ಯೆಯನ್ನು ಜಾರಿಗೆ ತರಲಾಗಿದೆ ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯಕ್ಕಾಗಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಾದ ಇಸ್ಪೀಟ್ ಜೂಜಾಟ, ಮಟ್ಕಾ ಜೂಜಾಟ ಅಕ್ರಮ ಮಧ್ಯ ಮಾರಾಟ, ಅಕ್ರಮ ಮರಳು ಸಾಗಾಣಿಕೆ ಹಾಗೂ ಇತರೇ ಯಾವುದೇ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ 112 ವಾಹನಕ್ಕೆ ಕರೆಮಾಡಲು 112 ಸಿಬ್ಬಂದಿ ನಗರದ ಶ್ರೀ ಕೃಷ್ಣದೇವರಾಯ ಸರ್ಕಲ್ ಹತ್ತಿರ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿದರು
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು ಕಾರಣ ಎಲ್ಲಾ ದ್ವಿಚಕ್ರ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ನ್ನು ಧರಿಸಲು ಇದೆ ವೇಳೆಯಲ್ಲಿ ಸಾರ್ವಜನಿಕರಿಗೆ 112 ಸಿಬ್ಬಂದಿ ಹೆಡ್ ಕಾನ್ ಸ್ಟೇಬಲ್ ಹನುಮಂತಪ್ಪ ನರಗುಂದ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಬಸವರಾಜ ವಾಲೇಕರ್,ಹಾಗೂ ಸಾರ್ವಜನಿಕರು ಸೇರಿದಂತೆ ಇತರರು ಇದ್ದರು

About Mallikarjun

Check Also

ಪ್ರಾಥಮಿಕ ಶಾಲಾ ಮಕ್ಕಳಿಗೆ ಗಣಿತ ಸ್ಪರ್ಧಾ ಚಟುವಟಿಕೆ

Math competition activity for primary school children ತಿಪಟೂರು: ಶಿಕ್ಷಣ ಫೌಂಡೇಶನ್‌ನ ಮಾರ್ಗದರ್ಶನದೊಂದಿಗೆ ಗಣಿತ ಕಲಿಕಾ ಆಂದೋಲನದ ಮೂಲಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.