Bi-monthly Workshop of Monsoon Agriculture Department




ಕಲ್ಯಾಣ ಸಿರಿ
ಗಂಗಾವತಿ : ಮುಂಗಾರು ಹಂಗಾಮಿನ ಕೃಷಿ ಇಲಾಖೆಯ ದ್ವೆಮಾಸಿಕ ಕಾರ್ಯಾಗಾರ ಕೃಷಿ ಇಲಾಖೆ ಕೊಪ್ಪಳ ವತಿಯಿಂದ ಜಿಲ್ಲೆಯಲ್ಲಿನ ಪ್ರಸ್ತುತ ಕೃಷಿ ಬೆಳೆಗಳ ಸಮಗ್ರ ಮಾಹಿತಿ, ಮಳೆಯ ಪ್ರಮಾಣ, ಬಿತ್ತನೆ ಕ್ಷೇತ್ರ, ರೋಗ ಮತ್ತು ಕೀಟಗಳ ನಿಯಂತ್ರಣ, ಮಣ್ಣಿನ ಫಲವತ್ತತೆಯನ್ನು ಹೆಚ್ಚುಸುವಿಕೆ ಮತ್ತು ಬೆಳೆ ಸಮೀಕ್ಷೆ ಮುಂತಾದ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಲು ಮತ್ತು ವಿವಿಧ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡು ರೈತ ಸಮುದಾಯಕ್ಕೆ ಮಾಹಿತಿಯನ್ನು ತಿಳಿಸಲು ದಿನಾಂಕ ೧೮-೦೭-೨೦೨೪ ರಿಂದ ೧೯-೦೭-೨೦೨೪ ರವರೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಗಂಗಾವತಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ದ್ವೆಮಾಸಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀ.ಟಿ.ಎಸ್ ರುದ್ರೇಶಪ್ಪರವರು ವಹಿಸಿಕೊಂಡಿದ್ದರು ಹಾಗೂ ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಕುಲಪತಿಗಳಾದ ಡಾ. ಎಮ್. ಹನುಮಂತಪ್ಪರವರು ಉದ್ಘಾಟಿಸಿದರು ಹಾಗೂ ಕಾರ್ಯಾಗಾರದಲ್ಲಿ ಕೊಪ್ಪಳ ಜಿಲ್ಲೆಯ ಉಪ ಕೃಷಿ ನಿರ್ದೇಶಕರಾದ ಸಹದೇವ ಯರಗೊಪ್ಪರವರು, ಕೃಷಿ ವಿವಿ ರಾಯಚೂರಿನ ಸಹವಿಸ್ತಾರಣಾ ನಿರ್ದೇಶಕರಾದ ಡಾ.ಎ.ಆರ್. ಕುರುಬರ್ ರವರು, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿಯ ಮುಖ್ಯಸ್ಥರಾದ ಡಾ. ರಾಘವೇಂದ್ರ ಎಲಿಗಾರರವರು, ಕೃಷಿ ವಿಜ್ಞಾನಿಗಳಾದ ಡಾ. ಪರಮೇಶ, ಡಾ. ಮಹಾಂತ ಶಿವಯೋಗಿ, ಡಾ. ಸುಜಯ ಉರುಳಿ. ಡಾ.ಜ್ಯೋತಿ, ಡಾ. ಕವಿತಾ ಉಳ್ಳಿಕಾಶಿ, ಡಾ. ರೇವತಿ, ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳು, ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಉಪಸ್ಥತರಿದ್ದರು. ಮುಂದಿನ ಎರಡು ತಿಂಗಳಲ್ಲಿ ಕೀಟರೋಗ ಪರಿವೀಕ್ಷಣಾ ತಂಡದೊAದಿಗೆ ತೆರಳಿ ರೈತರಿಗೆ ತಿಳುವಳಿಕೆ ನೀಡಲು ನಿರ್ಧರಿಸಲಾಯಿತು.