Breaking News

ಮನುಷ್ಯಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಹಬ್ಬಗಳ ಪಾತ್ರ ಹಿರಿದು : ಡಾ.ರಹಮತ್ ತರೀಕೆರೆ

Role of festivals in strengthening human relations : Dr. Rahmat Tarikere


ಜಾಹೀರಾತು

ಕೊಪ್ಪಳ : ಭಾರತ ಅದರಲ್ಲೂ ಕರ್ನಾಟಕದಲ್ಲಿ ಮೊಹರಂ ಆಚರಣೆಯು ಧರ್ಮ, ರಾಜಕೀಯ ಎಲೆಗಳನ್ನು ಮೀರಿ ಬೆಳೆದು ನಿಂತು ಒಂದು ಜನತೆಯ ಧರ್ಮವಾಗಿ ಮಾರ್ಪಟ್ಟಿರುವುದು ಮನುಷ್ಯ ಸಂಬಂಧಗಳ ಬೆಸುಗೆಯಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯ ಭಾವೈಕ್ಯತೆಗಳನ್ನು ಕಾದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ರಹಮತ್ ತರಕೇರಿ ಹೇಳಿದರು.

ಅವರು ಬಿನ್ನಾಳ ಗ್ರಾಮದ ಮೊಹರಂ ಸಾಂಸ್ಕೃತಿಕ ಸಂಭ್ರಮದ ಕತ್ತಲ್ ರಾತ್ರಿಯಂದು ಏರ್ಪಡಿಸಿದ್ದ ಗೀಗೀಪದಗಳ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕಳಕಪ್ಪ ಕಂಬಳಿ, ಚನ್ನಯ್ಯ ಹೀರೇಮಠ, ಮಲ್ಲಯ್ಯ ಪೂಜಾರ, ಸಿದ್ದಲಿಂಗಯ್ಯ ಹಿರೇಮಠ, ಗ್ರಾಮ ಪಂಚಾಯತಿ ಸದಸ್ಯೆ ದ್ರಾಕ್ಷಾಯಿಣಿ ಸಂಗಪ್ಪ ತಹಶೀಲ್ದಾರ್. ಚೆನ್ನವ್ವ ವೀರಪ್ಪ ಮುತ್ತಾಳ, ಕಮಲಾಕ್ಷಿ ಪತ್ರೆಪ್ಪ ಕಂಬಳಿ, ಮಹ್ಮದಸಾಬ ಕರಿಮಸಾಬ ವಾಲಿಕಾರ, ಶಂಕರಪ್ಪ ಕಂಬಳಿ, ಶರಣಪ್ಪ ಹಾದಿಮನಿ, ಜಗದೀಶ್ ಚಟ್ಟಿ, ಖಾಸಿಂಸಾಬ ವಾಲಿಕಾರ, ಫಕೀರಸಾಬ ಮ್ಯಾಗಳಮನಿ,ಮಾಬುಸಾಬ ಕಡೆಮನಿ, ರಾಜಾಸಾಬ್ ಮ್ಯಾಗಳಮನಿ ಇತರರು ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ. ಜೀವನಸಾಬ್ ವಾಲಿಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಬೆಳಗಾವಿ ಜಿಲ್ಲೆಯ ಅಥಣಿಯ ಲಕ್ಷ್ಮೀಬಾಯಿ ಹಾಗೂ ಪರಶುರಾಮ್ ಬಡಿಗೇರ್ ಸಂಗಡಿಗರು ಗೀಗೀ ಪದಗಳ ಗಾಯನ ಹಾಗೂ ಕುಕನೂರು ತಾಲೂಕಿನ ಇಟಗಿಯ ಬಾಬುಸಾಬ್ ಮತ್ತು ಸಂಗಡಿಗರು ರಿವಾಯಿತಿ ಪದಗಳಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

About Mallikarjun

Check Also

ಗಿಣಿಗೇರ ಮುಖಾಂತರ ಕೊಪ್ಪಳಕ್ಕೆ ಹೋಗುವ ಮೇಲ್ ಸೇತುವೆ ಮೇಲೆ ವಿದ್ಯುತ್ ದೀಪ ಅಳವಡಿಸಲು ಮನವಿ.

Request to install electric lights on the overhead bridge leading to Koppal via Ginigera. ಕೊಪ್ಪಳ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.