Breaking News

ರಾಜ್ಯ ಯುವಒಕ್ಕೂಟಕ್ಕೆ ಗೊಂಡಬಾಳವಿಭಾಗೀಯ ಸಂಚಾಲಕ

ಕೊಪ್ಪಳ : ನಗರದ ಯುವ ಸಂಘಟಕ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಅವರನ್ನು ಪ್ರತಿಷ್ಠಿತ ರಾಜ್ಯಮಟ್ಟದ ಏಕೈಕ ಯುವ ಸಂಘಟನೆಯಾದ ಕರ್ನಾಟಕ ರಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಕಲಬುರಗಿ ವಿಭಾಗೀಯ ಸಂಚಾಲಕ (ಅಧ್ಯಕ್ಷ)ರನ್ನಾಗಿ ನೇಮಿಸಿ ರಾಜ್ಯ ಅಧ್ಯಕ್ಷ ಡಾ. ಎಸ್. ಬಾಲಾಜಿ ಆದೇಶ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಯುವ ಸಂಘಗಳಿಗೆ ಅತ್ಯಂತ ಮಹತ್ವ ಇತ್ತು ಆದರೆ ಇಗ ಅವುಗಳು ಅಳಿವಿನ ಅಂಚಿಗೆ ತಲುಪಿದ್ದು, ಜಾತ್ಯಾತೀತವಾಗಿ ಗ್ರಾಮವನ್ನು ಕಟ್ಟುವ ಯುವಜನರನ್ನು ಪ್ರೋತ್ಸಾಹಿಸುವ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಕಾರ್ಯ ಮಾಡುತ್ತಿದ್ದವು ಆದರೆ ಈಗ ಅವು ಸಂಪೂರ್ಣವಾಗಿ ಇಲ್ಲವಾಗಿದ್ದು, ಮತ್ತೆ ಯುವ ಸಂಘಗಳ ಪುನಶ್ಚೇತನಕ್ಕೆ ಶ್ರಮಿಸಲು ವಿಭಾಗೀಯ ಮಟ್ಟದಲ್ಲಿ ಸಂಚಾಲಕರನ್ನು ನೇಮಿಸಲಾಗಿದೆ.
ಕಲಬುರಗಿ ವಿಭಾಗದಲ್ಲಿ ಬರುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ ಕಾರ್ಯಮಾಡಲು ಅಲ್ಲಿನ ಜಿಲ್ಲಾ ಸಂಘಗಳನ್ನು ಮತ್ತೆ ಸಶಕ್ತಗೊಳಿಸಲು ಕ್ರಮವಹಿಸಿಉವಂತೆ ಸೂಚಿಸಲಾಗಿದೆ.
ಇವರ ಜೊತೆಗೆ ಸುರೇಶ ಎನ್. ಋಗ್ವೇದಿ (ಮೈಸೂರು ವಿಭಾಗ), ವೀರಭದ್ರಸ್ವಾಮಿ (ಬೆಂಗಳೂರು ವಿಭಾಗ) ಮತ್ತು ಅಶೋಕ ಚವ್ಹಾಣ ಬೆಳಗಾವಿ ವಿಭಾಗಕ್ಕೆ ನೇಮಿಸಲಾಗಿದೆ.
ನೂತನ ವಿಭಾಗೀಯ ಸಂಚಾಲಕರಾದ ಮಂಜುನಾಥ ಗೊಂಡಬಾಳ ಅವರು ಪ್ರತಿ ಗ್ರಾಮಕ್ಕೊಂದು ಉತ್ತಮ ಸಂಘ ರಚನೆ, ತಾಲೂಕು, ಜಿಲ್ಲಾ ಮತ್ತು ವಿಭಾಗಮಟ್ಟದಲ್ಲಿ ಯುವಜನ ಮೇಳಗಳ ಆಯೋಜನೆ ಜೊತೆಗೆ ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವ, ಯುವ ಸಂಘಗಳಿಗೆ ಸರಕಾರದ ಸೌಲಭ್ಯ ಒದಗಿಸುವ ಜೊತೆಗೆ ಒಕ್ಕೂಟದ ಜಿಲ್ಲಾ ಮತ್ತು ವಿಭಾಗೀಯ ಕಛೇರಿ ತೆರೆಯುವ ನಿಟ್ಟಿನಲ್ಲಿ ಸಂಘಟನೆ ಮಾಡುವದಾಗಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *