Breaking News

ಕರಡಿ ಉಪಟಳ : ಜನ ಜೀವನ ಆತಂಕ,

IMG 20240709 WA0237 300x171

ಕನಕಗಿರಿ: ಸಮೀಪದ ಪರಾಪುರ ಗ್ರಾಮದ ರೈತ ಶಂಕ್ರಪ್ಪ ಕುರಿ ಎಂಬುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಕರಡಿ ಶನಿವಾರ ನಸುಕಿನ ಜಾವ ನೀರ್ಲೂಟಿ ರಸ್ತೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದು ಜನ ಆತಂಕ ಪಡುವಂತಾಗಿದೆ.

ಜಾಹೀರಾತು

ಇಂಗಳದಾಳ, ಪರಾಪುರ, ರಾಂಪುರ, ಬಸರಿಹಾಳ, ಪ್ರವಾಸಿ ಮಂದಿರದ ರಸ್ತೆಯಲ್ಲಿ ಕಳೆದ ಹದಿನೈದು ದಿನಗಳಿಂದಲೂ ಓಡಾಡುತ್ತಿರುವ ಕರಡಿಯನ್ನು ಸಾಕಷ್ಟು ಜನ ನೋಡಿ ಭಯ ಭೀತರಾಗಿದ್ದು ಯಾವ ಸಮಯದಲ್ಲಿ ನಮ್ಮ ಮೇಲೆ ದಾಳಿ ಮಾಡುವದೋ ಎನ್ನುವ ಆತಂಕದಲ್ಲಿ ಜನ ಜೀವನ ನಡೆಸುವಂತಾಗಿದೆ.

ನೀರ್ಲೂಟಿ ಗ್ರಾಮದ ರಸ್ತೆಯಲ್ಲಿರುವ ನೀಲಕಂಠಗೌಡ ಪಾಟೀಲ ಅವರ ಹೊಲದಲ್ಲಿ ಲೇಔಟ್ ಕಾಮಗಾರಿ ನಡೆಯುತ್ತಿದ್ದು ವಿಜಯಪುರ, ಬಾಗಲಕೋಟೆ, ರಾಯಚೂರು ಮೂಲದ ಕಾರ್ಮಿಕರು ವಾಸವಾಗಿದ್ದಾರೆ, ನಸುಕಿನ ಜಾವ ಕರಡಿ ಕಂಡ ಮಹಿಳೆಯೊಬ್ಬರು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೆ ಎಚ್ಚೆತ ಅಲ್ಲಿನ‌ ನಿವಾಸಿಗಳು ಕೈಯಲ್ಲಿ ಕಟ್ಟಿಗೆ ಕಬ್ಬಿಣದ ಸರಳು‌ ಹಿಡಿದುಕೊಂಡು ಬೆನ್ನತ್ತಿದ್ದರೂ ಕರಡಿ ಸಿಗಲಿಲ್ಲ, ಕೆಲವರು ತಮ್ಮ ಮೊಬೈಲ್ ನಲ್ಲಿ ಕರಡಿ ಓಡಾಟದ ವಿಡಿಯೋ ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದಲೂ ಕರಡಿ ಈ ಭಾಗದಲ್ಲಿ ಓಡಾಡುತ್ತಿರುವದರಿಂದ ರಾತ್ರಿ ಇಡೀ, ನಾಯಿಗಳು ಬೋಗಳುತ್ತಾ ಓಡಾಡುತ್ತವೆ.

ಶನಿವಾರ ನಸುಕಿನ ಜಾವ ಮಹಿಳೆಯೊಬ್ಬರು ಕಣ್ಣಾರೆ ಕಂಡಿದ್ದು ಆತಂಕ‌ಮೂಡಿಸಿದೆ ಎಂದು ಕಾರ್ಮಿಕ ಮಂಜುನಾಥ ತಿಳಿಸಿದರು.

ಅರಣ್ಯ ಇಲಾಖೆಯವರು ಆದಷ್ಟು ತೀವ್ರ ಗತಿಯಲ್ಲಿ ಕರಡಿಯನ್ನು ಬಂಧಿಸಬೇಕು ಎನ್ನುವದು ಅಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.

ವರದಿ : ಪಂಚಯ್ಯ ಹಿರೇಮಠ ಕೊಪ್ಪಳ,,,,

About Mallikarjun

Check Also

screenshot 2025 10 16 19 20 27 64 e307a3f9df9f380ebaf106e1dc980bb6.jpg

ಸರ್ವೋದಯ ಪಕ್ಷದ ಕಾರ್ಯಾಧ್ಯಕ್ಷರಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇಮಕ

MLA Darshan Puttannaiah appointed as Sarvodaya Party working president ಬೆಂಗಳೂರು,ಅ.೧೬;ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಮೈಸೂರಿನ ಕರುಣಾಕರ.ಬಿ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.