Distribution of fruits to mentally retarded children on the occasion of Iqbal Ansari’s birthday: Manju Handinala
ಗAಗಾವತಿ: ಇಕ್ಬಾಲ್ ಅನ್ಸಾರಿಯವರ ಜನ್ಮದಿನದ ಅಂಗವಾಗಿ ಜೂನ್-೧೭ ರಂದು ನಗರದ ಬುದ್ಧಿಮಾಂದ್ಯ ಮಕ್ಕಳಿಗೆ ಇಕ್ಬಾಲ್ ಅನ್ಸಾರಿ ಅಭಿಮಾನಿಗಳು ಹಣ್ಣು ಹಂಪಲು ಹಾಗೂ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.
ನಂತರ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮಂಜು ಹಂಚಿನಾಳ ಮಾತನಾಡಿ. ಈ ಕ್ಷೇತ್ರದ ಜನ ಮೆಚ್ಚಿದ ನಾಯಕ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಸರ್ವ ಜನಾಂಗದವರೊAದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಯಕ, ಅವರು ಎಲ್ಲಾ ಶ್ರಮಿಕರ ಮತ್ತು ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸಿದವರು. ಇದರಿಂದಾಗಿ ಅವರಿಗೆ ರಾಜಕೀಯವಾಗಿ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಗುರುತಿಸಿಕೊಳ್ಳಲು ಅನುವಾಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ನಗರಸಭೆ ಮಾಜಿ ಸದಸ್ಯರು ಹಾಗೂ ವಕೀಲರು ಹುಸೇನಪ್ಪ ಹಂಚಿನಾಳ ಮಾತನಾಡಿ ಇಕ್ಬಾಲ್ ಅನ್ಸಾರಿ ಅವರ ಜನ್ಮದಿನದ ಶುಭಾಶಯಗಳು, ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಲು ಅವರಿಗೆ ದೇವರ ಶಕ್ತಿ ನೀಡಲಿ ಎಂದು ಬೇಡಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ಒಂದೆ ಜಾತಿಗೆ, ಧರ್ಮಕ್ಕೆ ಸೀಮಿತರಲ್ಲ ಎಲ್ಲಾ ಜನಾಂಗಕ್ಕೆ ಸೇರಿದ ನಾಯಕರು ಎಂದರು. ಇವತ್ತು ಗಂಗಾವತಿ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದರೆ ಇದಕ್ಕೆ ಇಕ್ಬಾಲ್ ಅನ್ಸಾರಿ ಅವರೇ ಕಾರಣ. ಇಕ್ಬಾಲ್ ಅನ್ಸಾರಿಯವರು ಗಂಗಾವತಿ ಕ್ಷೇತ್ರವನ್ನು ಹೈಟೆಕ್ ನಗರವನ್ನಾಗಿ ಮಾಡಬೇಕೆಂಬುದು ಅವರ ದೊಡ್ಡ ಆಸೆಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಿವರಾಜ್ ಚಲುವಾದಿ ಮಾತನಾಡಿ, ಮಾಜಿ ಸಚಿವ ಹಾಗೂ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಸರ್ವಜನಾಂಗದ ನಾಯಕ ಇಕ್ಬಾಲ್ ಅನ್ಸಾರಿಯವರಿಗೆ ಜನ್ಮದಿನದ ಶುಭಾಶಯಗಳು ಮತ್ತು ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ತ್ಯಾಗ ಬಲಿದಾನದ ಸಂಕೇತ ಹಬ್ಬವಾದ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
.ಈ ಸಂದರ್ಭದಲ್ಲಿ ಪ್ರಜ್ವಲ್, ಹನುಮಂತ, ಗೋಪಿ, ಮಲ್ಲಿಕಾರ್ಜುನ ಹಂಚಿನಾಳ, ಶಬ್ಬೀರ, ಹುಲ್ಲೇಶ ಮುಂಡಾಸ್ತು, ಮಾರತಿ ತಡಕಲಾ, ಬಸವರಾಜ, ಹನುಮಂತ ಗುಗ್ರಿ, ದುರಗೇಶ ಗುಗ್ರಿ ಇತರರು ಇದ್ದರು.