
ಗಂಗಾವತಿ: ರಾಜ್ಯ ಸರ್ಕಾರ ಜೂನ್-೧೫ ರಂದು ಪೆಟ್ರೋಲ್, ಡೀಸೆಲ್‌ಗೆ ತೆರಿಗೆ ಹೆಚ್ಚಿಸಿ ಬೆಲೆ ಹೆಚ್ಚಳ ಮಾಡಿದ್ದು, ಕೂಡಲೇ ಬೆಲೆ ಹೆಚ್ಚಳ ನೀತಿಯನ್ನು ಹಿಂಪಡೆಯಲು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ರಾಜ್ಯ ಸರ್ಕಾರನ್ನು ಒತ್ತಾಯಿಸುತ್ತದೆ ಎಂದು ಲಿಬರೇಷನ್‌ನ ರಾಜ್ಯ ಸ್ಥಾಯಿ ಸಮಿತಿ ಸದಸ್ಯರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವು ಬಿಜೆಪಿ, ಸಂಘ ಪರಿವಾರ ಆರ್.ಎಸ್.ಎಸ್ ರವರು ನಮ್ಮನ್ನು ಕಾಂಗ್ರೆಸ್‌ನವರು ಎಂದು ಹೇಳಿಕೆ ಕೊಡುವುದು ಸರಿಯಲ್ಲ. ನಾನು ೧೯೬೫ ರಿಂದ ಕಮ್ಯುನಿಸ್ಟ್ ಪಾರ್ಟಿ ಸದಸ್ಯನಾಗಿದ್ದು, ನಾನೆಂದೂ ಕಾಂಗ್ರೆಸ್‌ಗೆ ಬೆಂಬಲಿಸಿಲ್ಲ. ಕಾಂಗ್ರೆಸ್ ಪಕ್ಷ ನನ್ನನ್ನು ಅನೇಕ ಪ್ರಕರಣಗಳಲ್ಲಿ ಬಂಧಿಸಿ ವರ್ಷಗಟ್ಟಲೇ ಜೈಲಿನಲ್ಲಿಟ್ಟಿದ್ದು ಗೊತ್ತಿದ್ದರೂ ಸಹ ನಾನು ಕಾಂಗ್ರೆಸ್ ಎಂದು ಹೇಳುವವರನ್ನು ನಾನು ವಿರೋಧಿಸುತ್ತೇನೆ. ನಾನೆಂದಿಗೂ ಕ್ರಾಂತಿಕಾರಿ ಕಮ್ಯುನಿಸ್ಟ್ನೆ ಹೊರತು ಆಳುವ, ಕೇಳುವ ಪಕ್ಷವನ್ನು ಬೆಂಬಲಿಸುವವನಲ್ಲ.
ರಾಜ್ಯವನ್ನಾಳುವ ಕಾಂಗ್ರೆಸ್ ಪಕ್ಷ ಈಗ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ದರಗಳನ್ನು ಹೆಚ್ಚಿಸಿರುವುದರಿಂದ ಅಗತ್ಯ ದಿನಬಳಕೆ ವಸ್ತುಗಳ ಬೆಲೆಗಳಲ್ಲಿಯೂ ಏರುಪೇರು ಉಂಟಾಗುವುದು ಇದರಿಂದ ಬಡವರು, ಕೂಲಿಕಾರ್ಮಿಕರು, ಕೆಳಮಧ್ಯಮವರ್ಗದವರು ಬದುಕುವುದು ಕಷ್ಟವಾಗುತ್ತದೆ, ಕೂಡಲೇ ಬೆಲೆ ಏರಿಕೆ ಕ್ರಮವನ್ನು ಹಿಂಪಡೆಯಬೇಕೆAದು ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Kalyanasiri Kannada News Live 24×7 | News Karnataka
