
ಕೊಪ್ಪಳ : ರಾಜ್ಯದಲ್ಲಿ ಪೆಟ್ರೋಲ್ ದರ ೩ ಮತ್ತು ಡೀಸೆಲ್ ದರ ೩.೫ ಹೆಚ್ಚಳವಾಗಿರುದಕ್ಕೆ ಬಿಜೆಪಿ ಚೀರಾಟ ಹಾರಾಟ ಹೋರಾಟ ಮಾಡುತ್ತಿರುವದು ಅತ್ಯಂತ ಹಾಸ್ಯಾಸ್ಪದ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡೆ ಜ್ಯೋತಿ ಎಂ. ಗೊಂಡಬಾಳ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಡಿಕೆಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರಕಾರ ಅತ್ಯಂತ ಜನಪರವಾಗಿ ಕೆಲಸ ಮಾಡುತ್ತಿದ್ದು, ಪೆಟ್ರೋಲ್ ದರ ೩ ಮತ್ತು ಡೀಸೆಲ್ ದರ ೩.೫ ಹೆಚ್ಚಳ ಮಾಡಿರುವದು ದೊಡ್ಡ ಸಂಗತಿಯೇನು ಅಲ್ಲ ಜೊತೆಗೆ ಈಗಲೂ ದರ ಅಕ್ಕಪಕ್ಕದ ರಾಜ್ಯಗಳಿಗಿಂತಲೂ ಕಡಿಮೆ ಇದೆ, ಆದರೆ ಬಿಜೆಪಿಗೆ ಇವೇ ದರಗಳು ಕಳೆದ ೧೦ ವರ್ಷಗಳ ಹಿಂದೆ ಇದ್ದ ದರಕ್ಕೆ ಹೋಲಿಸಿದರೆ ಡಬಲ್ ಆಗಿದ್ದರೂ ಕೇಂದ್ರದ ವಿರುದ್ಧ ಒಂದು ಶಬ್ದ ಮಾತನಾಡಲಿಲ್ಲ, ಬದಲಿಗೆ ಇಲ್ಲಿನ ರಾಜ್ಯದ ತೆರಿಗೆ ಕಡಿಮೆ ಮಾಡಿ ರಾಜ್ಯಕ್ಕೆ ಇನ್ನಷ್ಟು ತೆರಿಗೆ ಸಂಗ್ರಹದಲ್ಲಿ ನಷ್ಟ ಉಂಟು ಮಾಡಿದರು, ಇದೆಲ್ಲಾ ಮೋದಿಶಾ ಮನವೊಲಿಕೆಯ ಭಾಗವಾಗಿತ್ತು. ಆದರೆ ರಾಜ್ಯಕ್ಕೆ ಈಗ ಸಂಪನ್ಮೂಲಗಳ ಅಗತ್ಯವಿದ್ದು, ಜನಪರ ಮತ್ತು ಬಡವರ ಯೋಜನೆಗಳಿಗೆ ಹಣಕಾಸಿನ ಅಗತ್ಯವಿದ್ದು ಸ್ವಲ್ಪ ಹೆಚ್ಚಳ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಇದರ ಕುರಿತು ಹೋರಾಟ ಮಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಿರುವ ಬಿಜೆಪಿ ಮತ್ತು ಜೆಡಿಎಸ್ ಗ್ಯಾಸ್ ಬೆಲೆ ಸಹ ವಿಪರೀತವಾಗಿ ಹೆಚ್ಚಳವಾಗಿದೆ, ಎಲ್ಲಾ ಬೆಲೆ ಏರಿಕೆ ಹಿಂದೆ ಇರುವುದು ಕೇಂದ್ರ ಸರಕಾರ ಎಂಬುದನ್ನು ಮರೆಯಬಾರದು ಎಂದಿದ್ಧಾರೆ. ಇನ್ನು ಈಚೆಗೆ ನೀಡಿದ ಜಿಎಸ್‌ಟಿ ಹಂಚಿಕೆಯಲ್ಲೂ ಮತ್ತೆ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದ್ದು, ಮೊದಲು ಅದನ್ನು ಸರಿ ಮಾಡಿ ಎಂದು ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ದಾರೆ. ಅಲ್ಲದೇ ಗ್ಯಾರಂಟಿ ಯೋಜನೆ ಸದಸ್ಯೆಯಾಗಿರುವ ತಾವು ಸಹ ಕ್ಷೇತ್ರದ ಜನರಿಗೆ ಗ್ಯಾರಂಟಿ ನಿಲ್ಲಿಸದಿರುವ ಕುರಿತು ಭರವಸೆ ನೀಡುವದಾಗಿ ಹೇಳಿದ್ದಾರೆ.
Kalyanasiri Kannada News Live 24×7 | News Karnataka
