
ಡಿಸೆಂಬರ್ 4ರಂದು ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘ ಮಹಿಳಾ ನೌಕರರ ಸಮ್ಮೇಳನ

ಋತುಚಕ್ರ ರಜೆ ಘೋಷಣೆ ಮುಖ್ಯಮಂತ್ರಿ, ಸಂಪುಟ ಸಚಿವರಿಗೆ ಅಭಿನಂದನಾ ಸಮಾರಂಭ
All Karnataka Women Employees Association Women Employees Conference on December 4th
ಬೆಂಗಳೂರು: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ(ರಿ)ವತಿಯಿಂದ ಡಿಸೆಂಬರ್ 4ರಂದು ಮಹಿಳಾ ಸಮ್ಮೇಳನ ಮತ್ತು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿರುವ ರಾಜ್ಯದ ಸರ್ಕಾರ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಪುಟ ಸಚಿವರಿಗೆ ಅಭಿನಂದನಾ ಸಮಾರಂಭ ಹಾಗೂ ಸಂಘ ಉದ್ದೇಶಗಳು ಮತ್ತು ಸ್ಥಾಪನೆಯಾಗಿ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾಧ್ಯಮಗೋಷ್ಟಿ.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು,ರಾಜ್ಯ ಗೌರವಾಧ್ಯಕ್ಷರಾದ ಶ್ರೀಮತಿ ಗೀತಮಣಿ , ಉಪಾಧ್ಯಕ್ಷೆ ಮಲ್ಲಿಕಾ ಎಂ.ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಶಶಿಕಲಾ, ರಾಜ್ಯ ಖಜಾಂಚಿ ಡಾ||ವೀಣಾ ಕೃಷ್ಣಮೂರ್ತಿರವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ *ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು* ಮಾತನಾಡಿ ಮಹಿಳೆಯರು ಅಬಲೆಯಲ್ಲ, ಸಬಲೆಯಾಗಿದ್ದಾಳೆ. ಇಂದು ಸಮಾಜದಲ್ಲಿ ಪುರುಷರಷ್ಟೆ ಸರಿಸಮಾನವಾಗಿ ಕಾರ್ಯ ನಿರ್ವಹಿಸಿ ದಿಟ್ಟ ಮಹಿಳೆ ಎಂದು ರೂಪಿಸಿದ್ದಾಳೆ ಅದರು ಸರ್ಕಾರದಲ್ಲಿ ಮಹಿಳಾ ನೌಕರರು ಹಲವಾರು ಮಹಿಳೆಯರು ಸಂಕಷ್ಟ ಎದುರಿಸಿದ್ದಾರೆ ಸಮಸ್ಯೆಗಳ ನಿವಾರಣೆ ಮತ್ತು ಮಹಿಳಾ ನೌಕರರ ಪರ ಗಟ್ಟಿಯಾಗಿ ನಿಲ್ಲಲು ನಮ್ಮ ಸಂಘದ ಉದ್ದೇಶವಾಗಿದೆ.
ಮಹಿಳಾ ನೌಕರರಿಗೆ ಸಮಸ್ಯೆಯಾದಲ್ಲಿ ಕಾನೂನು ನೆರವು ನೀಡುವುದು, ಅವರ ಹಕ್ಕುಗಳ ರಕ್ಷಣೆ ಮಾಡುವುದು.
ಸೇವಾ ನಿಯಮಗಳನ್ನು ಕುರಿತು ಅರಿವು ಮೂಡಿಸುವುದು. ಮಹಿಳಾ ನೌಕರರ ಬ್ಯಾಂಕ್ ಮತ್ತು ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪನೆ ಮಾಡುವುದು.
ನಮ್ಮ ಸಂಘದ ವತಿಯಿಂದ ರಾಜ್ಯೋತ್ಸವ, ಶಿಕ್ಷಕರ ದಿನಾಚರಣೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಗಣರಾಜ್ಯೋತ್ಸವ ತಾಯಂದಿರ ದಿನ ರಾಷ್ಟ್ರೀಯ ಹಬ್ಬಗಳನ್ನು ಅಚರಿಸುವುದು.
ಮಹಿಳಾ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ ತರಾಸಣೆ ರಕ್ತದಾನ ಶಿಬಿರ ಆಯೋಜನೆ ಮಾಡುವುದು. ಪ್ರತಿ ವರ್ಷ ಮಹಿಳಾ ನೌಕರರು ಮತ್ತು ಅವರ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳ ಆಯೋಜನೆ.
ಮಹಿಳಾ ನೌಕರರಿಗೆ ಪ್ರವಾಸ ಕಾರ್ಯಕ್ರಮ.ಉತ್ತಮ ಮಹಿಳಾ ನೌಕರರನ್ನು ಗುರುತಿಸಿ ಗೌರವ ಸನ್ಮಾನ. ಮಹಿಳಾ ನೌಕರರ ಪ್ರತಿಭಾವಂತ ಮಕ್ಕಳಿಗೆ ಧನಸಹಾಯ.
ಸಂಘದ ಸದಸ್ಯರಿಗೆ ಗ್ರಂಥಾಲಯ, ರಿಕ್ರಿಯೇಷನ್ ಕ್ಲಬ್, ವಿಶ್ರಾಂತಿ ಕೊಠಡಿ ಸ್ಥಾಪಿಸುವುದು. ಮಹಿಳಾ ನೌಕರರ ಲೈಂಗಿಕ ದೌರ್ಜನ್ಯ ನಡೆದಲ್ಲಿ ಇಲಾಖ ಮುಖ್ಯಸ್ಥರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಕಾನೂನು ನೆರವು.
ನಮ್ಮ ಸಂಘ ಸ್ಥಾಪನೆಯಾಗಿ ಎರಡು ವರ್ಷಗಳಲ್ಲಿ ಕಬ್ಬನ್ ಉದ್ಯಾನವನ ಬಾಲಭವನ ಅವರಣದಲ್ಲಿ ಸಂಘದ ಕಛೇರಿ ಸ್ಥಾಪನೆ, ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಸಂಘದ ಕಛೇರಿ ಸ್ಥಾಪನೆ. ರಾಜ್ಯದಲ್ಲಿ ಇರುವ ಮಹಿಳಾ ಸರ್ಕಾರಿ ನೌಕರರಿಗೆ ಸಂಘದ ಸದಸ್ಯತ್ವ ನೀಡುವುದು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ.
ಎನ್.ಪಿ.ಎಸ್.ಜಾರಿಗೆ ಹೋರಾಟ, ನೌಕರರ ಹೋರಾಟದಲ್ಲಿ ಸಂಘದ ಬೆಂಬಲ. ಮಹಿಳಾ ನೌಕರರಿಗೆ ಋತುಚಕ್ರ ರಜೆ ಮಂಜೂರು ಮಾಡುವಲ್ಲಿ ನಮ್ಮ ಸಂಘವು ಪ್ರಮುಖ ಪಾತ್ರವಹಿಸಿದೆ.
ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಣೆ ಮಾಡುವಲ್ಲಿ ನಮ್ಮ ಸಂಘದ ಹೋರಾಟದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಉತ್ತಮ ಸಹಕಾರ ನೀಡಿದರು.
ಋತುಚಕ್ರ ರಜೆ ಘೋಷಣೆ ಮಾಡಿರುವ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ಸಂಪುಟದ ಎಲ್ಲ ಸಚಿವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಡಿಸೆಂಬರ್ 4ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ. ರಾಜ್ಯಾದ್ಯಂತ ಇರುವ ಮಹಿಳಾ ನೌಕರರು ಭಾಗವಹಿಸಿಲಿದ್ದಾರೆ.
*ಮುಂದಿನ ನಮ್ಮ ಹೋರಾಟದ ಹೆಜ್ಜೆ*
8ನೇ ವೇತನ ಆಯೋಗ ಜಾರಿ, ಎನ್.ಪಿ.ಎಸ್.ರದ್ದತಿ, ಓಪಿಎಸ್.ಜಾರಿ ಮಾಡಬೇಕು ಹಾಗೂ ಮಾತೃತ್ವರಜೆ ಒಂದು ವರ್ಷ ವಿಸ್ತರಣೆ, ಗರ್ಭೀಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಒಂದು ದಿನ ವೇತನ ಸಹಿತ ರಜೆ.
ಮೇರಿ ದೇವಾಸಿಯ ಜನ್ಮದಿನವಾದ ಸೆಪ್ಟೆಂಬರ್ 13ರಂದು ರಜೆ ಘೋಷಿಸುವುದು.
ಮಹಿಳಾ ನೌಕರರಿಗೆ ಹಬ್ಬದ ಮುಂಗಡ 50ಸಾವಿರಕ್ಕೆ ಹೆಚ್ಚಿಸುವುದು. ವಿದೇಶ ಪ್ರವಾಸಕ್ಕೆ ಅರ್ಜಿ ಸಲ್ಲಿಸಿದರಿಗೆ 15ದಿನದಲ್ಲಿ ಮಂಜೂರು ಮಾಡುವುದು.
ಮಹಿಳಾ ನೌಕರರ ಹಿತರಕ್ಷಣೆಗಾಗಿ ನಮ್ಮ ಸಂಘವು ಕಟಿಬದ್ದವಾಗಿ, ಹಗಲಿರುಳು ಶ್ರಮಿಸುತ್ತಿದೆ. ರಾಜ್ಯ ಸರ್ಕಾರಿ ಮಹಿಳಾ ನೌಕರರು ಸಂಘದ ಸದಸ್ಯರಾಗಿ ಸಂಘಟಿತರಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ ಎಂದು ಹೇಳಿದರು.




