Our constituency ranks first in the district in dairy farming, says MLA MR Manjunath.
ಹೈನುಗಾರಿಕೆಯಲ್ಲಿ ನಮ್ಮ ಕ್ಷೇತ್ರವು ಜಿಲ್ಲೆಯಲ್ಲೆ ಪ್ರಥಮ ಸ್ಥಾನದಲ್ಲಿದೆ ಶಾಸಕ ಎಮ್ ಆರ್ ಮಂಜುನಾಥ್ .

ವರದಿ :ಬಂಗಾರಪ್ಪ ಸಿ .
ಹನೂರು : ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಕೃಷಿ ಮತ್ತು ಹೈನುಗಾರಿಕೆ ಬಿಟ್ಟು ಬೇರೆ ಏನು ಮಾಡಲು ಅವಕಾಶ ಕಡಿಮೆ, ಹೈನುಗಾರಿಕೆ ಸಹ ಮಾಡಲು ಆಗದೆ ಬೇರೆ ಬೇರೆ ಕಡೆ ಗುಳೆ ಹೋಗುತ್ತಿದ್ದಾರೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಚಾಮುಲ್ ಉಪ ಕಛೇರಿ ಆವರಣದಲ್ಲಿ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ – 2025 ಸಮಾರೋಪ ಸಮಾರಂಭದ ಪ್ರಯುಕ್ತ ಹನೂರು ಕ್ಷೇತ್ರ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು..
ದಿನಕ್ಕೆ 96 ಸಾವಿರ ಲೀ ಉತ್ಪಾದನೆ ಆಗುತ್ತಿರುವ ಹಾಲನ್ನು 2 ಲಕ್ಷ ಕ್ಕೆ ಹೆಚ್ಚಿಸಬೇಕು ಇದಕ್ಕೆ ಬೇಕಾದ ಸಹಕಾರವನ್ನು ನೀಡಲಾಗುವುದು. ಈ ಉಪ ಕಛೇರಿಯನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಕರೆಯಬೇಕು, ಸರ್ಕಾರದಿಂದ ಬರುವ ಪ್ರತಿಯೊಂದು ಸೌಲಭ್ಯಗಳ ಮಾಹಿತಿಯನ್ನು ಎಲ್ಲಾ ಹಾಲು ಉತ್ಪಾದಕರ ಸಂಘಗಳು ತಿಳಿಸುವ ಕಾರ್ಯವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಈ ಕ್ಷೇತ್ರದಲ್ಲಿ ಏನು ನನಗೆ ಅವಕಾಶ ಕೊಟ್ಟಿದ್ದೀರಾ ಅದರ ಪ್ರತಿ ಫಲವಾಗಿ ನಿಮ್ಮ ಋಣ ತೀರಿಸಲು ಶ್ರಮಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ನಾವು ಪ್ರಥಮ ಸ್ಥಾನದಲ್ಲಿದ್ದೇವೆ,ಇನ್ನೂ ಹೆಚ್ಚಿನ ಉತ್ಪಾದನೆಗೆ ತಮ್ಮ ಸಂಘಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕಲ್ಪಿಸಲು ಕ್ರಮವಹಿಸಲಾಗುವುದು.
ಇದೇ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಚಾಮುಲ್ ನಿರ್ದೇಶಕರುಗಳಾದ ಮಹಾದೇವಸ್ವಾಮಿ ( ಉದ್ದನೂರು ಪ್ರಸಾದ್), ಶಾಹುಲ್ ಅಹಮದ್(ತಾರೀಖ್), ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ವ್ಯವಸ್ಥಾಪಕ ನಿರ್ದೇಶಕ ಕೆ ರಾಜಕುಮಾರ್, ಪ್ರಭಾರ ವ್ಯವಸ್ಥಾಪಕ ಶರತ್ ಕುಮಾರ್, ವಿಸ್ತರಣಾಧಿಕಾರಿಗಳಾದ ವೆಂಕಟೇಶ್, ರಘು, ಸೋಮಶೇಖರ್, ಶ್ರೀನಿವಾಸ್ ಪ್ರಸಾದ್, ಚಾಮರಾಜನಗರ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪ, ವಿವಿಧ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಕರು ಸೇರಿದಂತೆ ಇನ್ನಿತರರು ಹಾಜರಿದ್ದರು..
Kalyanasiri Kannada News Live 24×7 | News Karnataka
