
ಪುಣ್ಯಾಮೃತ ಸ್ನಾನಕ್ಕೆ ರಾಜಮಾತೆ ಶ್ರೀಮತಿ ಲಲಿತಾರಾಣಿ ಚಾಲನೆ: ವಿವಿಧ ಸಂಘಟನೆ ನೇತೃತ್ವದಲ್ಲಿ ಕಡಲೆಹಿಟ್ಟು ಹಂಚಿಕೆ
Queen Mother Smt. Lalitharani initiates the holy bath: Chickpeas distributed under the leadership of various organization

ಗAಗಾವತಿ: ಮಕರ ಸಂಕ್ರಮಣದ ಪವಿತ್ರ ಸಂದರ್ಭದಲ್ಲಿ ನದಿಗಳ ಶುದ್ಧತೆ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಶ್ರೀರಂಗದೇವರಾಯಲು ಫೌಂಡೇಶನ್, ವರದಶ್ರೀ ಫೌಂಡೇಶನ್ ಹುಬ್ಬಳ್ಳಿ, ಲಿವ್ ವಿಥ್ ಹುಮ್ಯಾನಿಟಿ ಸಹಯೋಗದಲ್ಲಿ ಪುಣ್ಯಸ್ನಾನ ಘಟ್ಟಕ್ಕೆ ತೆರಳುವ ಪ್ರಮುಖ ಸ್ಥಳ ಹಾಗೂ ರಸ್ತೆಗಳಲ್ಲಿ ಉಚಿತ ಕಡ್ಲೆ ಹಿಟ್ಟಿನ ಪ್ಯಾಕೇಟ್ಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ರಾಜಮಾತೆ ಶ್ರೀರಂಗದೇವರಾಯಲುರವರು ಮಾತನಾಡಿ ಮಕರ ಸಂಕ್ರಾAತಿ ಪ್ರಯುಕ್ತ ಸಾಮಾನ್ಯವಾಗಿ ಸಾರ್ವಜನಿಕರು ಪುಣ್ಯಸ್ನಾನದ ವೇಳೆ ಸೋಪು, ಶಾಂಪೂ ಸೇರಿದಂತೆ ಇನ್ನಿತರ ರಾಸಾಯನಿಕ ಪದಾರ್ಥಗಳನ್ನು ಬಳಸುವುದರಿಂದ ನದಿಗಳು ಕಲುಷಿತಗೊಳ್ಳುವುದಲ್ಲದೇ, ಜಲಚರ ಜೀವಿಗಳಿಗೂ ಹಾನಿಯಾಗುತ್ತಿದೆ. ಆದ್ದರಿಂದ “ವಿಷಮುಕ್ತ ಪುಣ್ಯಸ್ನಾನ ಬಿಡಿ : ಕಡ್ಲೆಹಿಟ್ಟಿನ ಪುಣ್ಯಸ್ನಾನ ಮಾಡಿ” ಎಂಬ ಸಂದೇಶದೊAದಿಗೆ ಜನತೆಗೆ ಪರಿಸರ ಸ್ನೇಹಿ ಪರ್ಯಾಯವನ್ನು ಪರಿಚಯಿಸಲಾಗುತ್ತಿದೆ. ಕಡ್ಲೆಹಿಟ್ಟು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ದೇಹ ಶುದ್ಧತೆಗೆ ಉಪಯುಕ್ತವಾಗುವುದರ ಜೊತೆಗೆ ನದಿ ನೀರನ್ನು ಕಲುಷಿತಗೊಳಿಸದೆ ಪರಿಸರವನ್ನು ಕಾಪಾಡುತ್ತದೆ. ಆದ್ದರಿಂದ ಮಕರ ಸಂಕ್ರಮಣ ದಿನದಂದು ಪುಣ್ಯಸ್ನಾನ ಮಾಡುವ ಭಕ್ತಾದಿಗಳು ಸೋಪು, ಶಾಂಪೂ ಬಳಕೆಯನ್ನು ತ್ಯಜಿಸಿ ಕಡ್ಲೆಹಿಟ್ಟಿನ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
“ನದಿ ನಮ್ಮ ತಾಯಿ ಸಮಾನ. ಪುಣ್ಯದ ಹೆಸರಿನಲ್ಲಿ ನದಿಯನ್ನು ಕಲುಷಿತಗೊಳಿಸುವುದು ಪಾಪಕ್ಕೆ ಸಮ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಆಚರಣೆಗಳಿಗೆ ಕೈಜೋಡಿಸಿ, ಕಡ್ಲೆಹಿಟ್ಟಿನ ಪುಣ್ಯಸ್ನಾನದ ಮೂಲಕ ನದಿಯ ಶುದ್ಧತೆಯನ್ನು ಕಾಪಾಡೋಣ” ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಒಂದು ಪುಣ್ಯ ಕಾರ್ಯದಲ್ಲಿ ಲಿವ್ ವಿಥ್ ಹುಮ್ಯಾನಿಟಿಯ ಸರ್ವಸದಸ್ಯರು ಮುಖ್ಯವಾಗಿ ಯುವಕರು, ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವದು ಸಂತಸ ತಂದಿದೆ ಎಂದರು.
ಪರಿಸರ ಸಂರಕ್ಷಣೆ ಹಾಗೂ ಜಲಜಾಗೃತಿಯ ಉದ್ದೇಶದಿಂದ ನಡೆಯುತ್ತಿರುವ ಈ ಉಚಿತ ಕಡ್ಲೆಹಿಟ್ಟಿನ ವಿತರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ತಿಳಿಸಿದರು.



