Rudrabhisheka for the idol of Lord Vanibhadreshwara and the offering of *Bagina* to the Tungabhadra canal on September 6.

ಸೆ. 6ರಂದು ವಾಣಿಭದ್ರೇಶ್ವರ ಸ್ವಾಮಿ ಮೂರ್ತಿಗೆ ರುದ್ರಾಭಿಷೇಕ ತುಂಗಭದ್ರಾ ಕಾಲುವೆಗೆ ಬಾಗಿನ ಅರ್ಪಣೆ

ಗಂಗಾವತಿ: ತುಂಗಭದ್ರಾ ಸೇವಾ ಸಮಿತಿ ವತಿಯಿಂದ ಸೆಪ್ಟೆಂಬರ್ 6ರಂದು, ಭಾನುವಾರ, ಶ್ರೀ ವಾಣಿಭದ್ರೇಶ್ವರ ಸ್ವಾಮಿ ಮೂರ್ತಿಗೆ ರುದ್ರಾಭಿಷೇಕ ಹಾಗೂ ತುಂಗಭದ್ರಾ ಕಾಲುವೆಗೆ ಬಾಗಿನ ಅರ್ಪಿಸುವ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರದ್ಧಾ-ಭಕ್ತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನೆರವೇರಿಸಿ, ತುಂಗಭದ್ರಾ ಕಾಲುವೆಗೆ ಬಾಗಿನ ಅರ್ಪಿಸಲಾಗುವುದು. ನಾಡಿನ ಜನರ ಸುಖ-ಸಮೃದ್ಧಿ, ಉತ್ತಮ ಮಳೆ ಹಾಗೂ ರೈತರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತುಂಗಭದ್ರಾ ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಪ್ರಮುಖರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತುಂಗಭದ್ರಾ ಸೇವಾ ಸಮಿತಿಯ ಪ್ರಮುಖರಾದ ಮಾಂತೇಶ್ ಸ್ವಾಮಿ ಶಾಸ್ತ್ರಿಮಠ, ವಕೀಲರಾದ ಮಲ್ಲಿಕಾರ್ಜುನ್ ಮುಸಾಲಿ, ಹನುಮೇಶ್ ವಕೀಲರು, ಸೋಮನಾಥ ಪಟ್ಟಣಶೆಟ್ಟಿ ವಕೀಲರು, ಶರಭಯ್ಯ ಸ್ವಾಮಿ, ವೀರೇಶ್ ಆನೆಗೊಂದಿ, ಅನಿಲ್ ಕುಮಾರ್, ಚನ್ನಬಸವ ಕಲ್ಮಠ, ರೋಹಿತ್ ಹಾಗೂ ವಿನಯ್ ಕಂಪ್ಲಿ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

