CPI demands reservation of land for the landless in Gangavathi.

ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸುವಂತೆ ಸಿಪಿಐ ಆಗ್ರಹ.


ಗಂಗಾವತಿ: ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ಮತ್ತು ವಸತಿ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ಸಾವಿರಾರು ಬಡ ಕುಟುಂಬಗಳಿಗೆ ಅಗತ್ಯ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಿ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಸಮಿತಿ ವತಿಯಿಂದ ಗಂಗಾವತಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿಯ ಪ್ರಮುಖ ಮುಖ್ಯಾಂಶಗಳು:
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ನಗರ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ, ನಿವೇಶನಗಳಿಗಾಗಿ ಕಾಯ್ದಿರಿಸಿ ಅರ್ಹ ಬಡ ಕುಟುಂಬಗಳಿಗೆ ಹಂಚಿಕೆ ಮಾಡಬೇಕು.
ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಪರಿಶೀಲಿಸಿ ತೆರವುಗೊಳಿಸುವುದು ಮತ್ತು ಬಡವರಿಗೆ ಜಾಗ ಸಿದ್ಧಪಡಿಸುವುದು.
ಅಂಗವಿಕಲರು, ವಿಧವೆಯರು ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಕಳೆದ ಕೆಲವು ತಿಂಗಳಿಂದ ಬಾಕಿ ಇರುವ ಮಾಸಿಕ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವುದು.
ಸಪ್ಟಂಬರ್ 1 ರಂದು ದೆಹಲಿಗೆ 1 ಲಕ್ಷ ಜನರೊಂದಿಗೆ ತೆರಳಿ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವಿದ್ದು, ಇದರಲ್ಲಿ ನಿವೇಶನ ರಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಿಪಿಐ ರಾಜ್ಯ ಕಾರ್ಯದರ್ಶಿ ಶಾಮ ಸುಂದರ್ ರವರು ಮನವಿ ಮಾಡಿದರು.
ಈ ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎ.ಹುಲುಗಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಎಲ್ ತಿಮ್ಮಣ್ಣ. ಶೇಖಮ್ಮ, ಗಂಗಮ್ಮ, ಲಕ್ಷ್ಮಣ ನಾಯಕ, ಕಂಠಪ್ಪ. ಮಲಯ ಎರಡೋಣಿ. ಮಂಜುನಾಥ ತಾಯಮ್ಮ , ರಿಜ್ವಾನ್ ಬೇಗಂ. ಫರೀದಾ ಬೇಗಂ.ಶೇಕಪ್ಪ.ಗುಂಡಪ್ಪ. ಮಂಜುನಾಥ ನೂರಜಹಾನ್ ಬೇಗಂ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ನಿವೇಶನ ರಹಿತರು ಉಪಸ್ಥಿತರಿದ್ದರು.





