ಉದುರಿದ ಕೂದಲು ಬರಿಸುವುದಾಗಿ ವಂಚನೆ :  ಆಸ್ಪತ್ರೆಯ ವಿರುದ್ಧ ಗುರು ಗಂಗನ್ನವರ ದೂರು

H.Mallikarjun
H.Mallikarjun - Kalyanasiri
1 Min Read
Fraudulent claim of restoring lost hair: Guru Gangannavara files complaint against hospital.

ಉದುರಿದ ಕೂದಲು ಬರಿಸುವುದಾಗಿ ವಂಚನೆ :  ಆಸ್ಪತ್ರೆಯ ವಿರುದ್ಧ ಗುರು ಗಂಗನ್ನವರ ದೂರು

ಜಾಹೀರಾತು


ಮೂಡಲಗಿ – ಕಳೆದು ಹೋದ ಕೂದಲನ್ನು ಮತ್ತೆ ಬರಿಸುವುದಾಗಿ ಹೇಳಿ ನಕಲಿ ಔಷಧ ಕೊಡುತ್ತಿರುವ ತಾಲೂಕಿನ ಕಲ್ಲೋಳಿಯ ‘ Hairline Healers’ ಎಂಬ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ಗಂಗನ್ನವರ ಅವರು ತಹಶೀಲ್ದಾರ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಡಾ. ಆಕರ್ಷ ಹೆಬ್ಬಾಳ ಅವರ ನೇತೃತ್ವದ ಈ ಆಸ್ಪತ್ರೆಯಲ್ಲಿ ಕೂದಲು ಬೆಳೆಯಲು ಆಯುರ್ವೇದಿಕ ಔಷಧ ನೀಡಲಾಗುತ್ತದೆ ಅವುಗಳಿಗೆ ಸಾವಿರಾರು ರೂ. ಹಣ ತೆಗೆದುಕೊಳ್ಳಲಾಗುತ್ತದೆ ಆದರೆ ಅವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸ್ವತಃ ನಾನೇ ಈ ಆಸ್ಪತ್ರೆಯಿಂದ ಮೋಸ ಹೋಗಿದ್ದು ಬೇರೆ ಗ್ರಾಹಕರು ಮೋಸ ಹೋಗದಂತೆ ಸದರಿ ಹೆಬ್ಬಾಳ ಆಸ್ಪತ್ರೆಯ ವಿರುದ್ಧ ಕ್ರಮ ಜರುಗಿಸಿ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಬೇಕು ಎಂದು ಗುರು ಗಂಗನ್ನವರ ಆಗ್ರಹಿಸಿದ್ದಾರೆ.

Total Views: 0
Share This Article