ಬೀದಿ ಬದಿಯ ವ್ಯಾಪಾರಸ್ಥರನ್ನು ಒಕ್ಕಲಿ ಬೀಸುವುದನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Protest condemning the lynching of street vendors and demanding an alternative system.

ಬೀದಿ ಬದಿಯ ವ್ಯಾಪಾರಸ್ಥರನ್ನು ಒಕ್ಕಲಿ ಬೀಸುವುದನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ.

ಜಾಹೀರಾತು


ಗಂಗಾವತಿ. ನಗರದಲ್ಲಿ ಹಲವು ದಶಕಗಳಿಂದ ತಮ್ಮ ಜೀವನ ಉಪಯೋಗಕ್ಕಾಗಿ ಬೀದಿ ವ್ಯಾಪಾರಿಗಳು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುವುದರ ಮೂಲಕ ತಮ್ಮ ಜೀವನ ನಿರ್ವಹಣೆಯನ್ನು ನಡೆಸುತ್ತಿದ್ದರು ಆದರೆ ಇದ್ದಕ್ಕಿದ್ದಂತೆ ನಗರಸಭೆ ಸರ್ಕಾರದ ಆದೇಶದ ಅನ್ವಯ ಬೀದಿ ಬದಿಯ ವ್ಯಾಪಾರಸ್ಥರನ್ನು ಒಕ್ಕಲಿಬ್ಬಿಸುವುದರ ಜೊತೆಗೆ ಅವರ ಬದುಕಿನ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವುದನ್ನು ಖಂಡಿಸಿ ಹಾಗೂ ಬೀದಿ ವ್ಯಾಪಾರಿಗಳ ಜೀವ ನೊಪಾಯ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014ರ ಅನ್ವಯ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸಿಐಟಿಯು ಎ ಐ ಸಿ ಸಿ ಟಿ ಯು ಕೆ ಡಿ ಎಸ್ ಎಸ್ ಭೀಮವಾದ ಸಂಘಟನೆಗಳು ಮಂಗಳವಾರದಂದು ಶ್ರೀ ಕೃಷ್ಣದೇವರಾಯ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರುಗಳಾದ ನಿರುಪಾದಿ ಬೆಣಕಲ್ ಸಿಕೆ ಮರಿಸ್ವಾಮಿ , ವಿಜಯ ದೊರೆರಾಜ ಮತ್ತಿತರರು ಮಾತನಾಡಿ ಗಂಗಾವತಿಯ ನಗರ ಪ್ರದೇಶದಲ್ಲಿ ಸುಮಾರು 16 00 ಬೀದಿ ವ್ಯಾಪಾರಸ್ಥರನ್ನು ಹೊಂದಿದ್ದು ತಮ್ಮ ಜೀವನ ಉಪಯೋಗಕ್ಕಾಗಿ ಹಣ್ಣು ತರಕಾರಿ ಗೋಡಂಗಡಿ. ಹಾಗೂ ಸಣ್ಣ ಪುಟ್ಟ ತಳ್ಳುವ ಬಂಡಿಯ ಮೂಲಕ ತಮ್ಮ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದರು ಆದರೆ ಫುಡ್ ಪಾತ್ ತೆರವಿನ ನೆಪದಲ್ಲಿ ನಗರ ಸಭೆಯ ನಾಲ್ಕು ದಿಕ್ಕಿನ ಭಾಗದಲ್ಲಿ ಬೀದಿ ವ್ಯಾಪಾರಸ್ಥರನ್ನು ಒಕ್ಕಲ್ಬುಸುವುದರ ಮೂಲಕ ಅವರ ಬದುಕಿಗೆ ಕೊಡಲಿ ಪೆಟ್ಟನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ್ ರೆಡ್ಡಿ ಅವರು ಬಿಡಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದರ ಮೂಲಕ ಬದುಕು ಕಟ್ಟಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು ಒಂದು ಕುಟುಂಬದ ನಿರ್ವಹಣೆ ಸುಲಭ ಮಾತಲ್ಲ ದುಬಾರಿ ಬೆಳೆ ಏರಿಕೆ ಮಧ್ಯೆ ಜೀವನ ನಡೆಸುವುದು ಕಷ್ಟದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಮಟ್ಟದಲ್ಲಿ ಗಮನಿಸಿದಾಗ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಯನ್ನು ರಚಿಸಲಾಗಿದೆ ಬೀದಿ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಎಲ್ಲಾ ನಿರ್ಧಾರಗಳನ್ನು ಈ ಸಮಿತಿಯು ನಿರ್ಧರಿಸಬೇಕಾಗುತ್ತದೆ ಇವೆಲ್ಲವನ್ನೂ ಕಡೆಗಣಿಸಿ ಇದ್ದಕ್ಕಿದ್ದಂತೆ ಒಕ್ಕಲಿಬ್ಬುವುದು ಕಾನೂನುಬಾಹಿರವಾಗಿದೆ ಎಂದು ಗಂಭೀರವಾದ ಆರೋಪ ಮಾಡಿದರು ಬಳಿಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹೋಗಿ ಪ್ರತಿಭಟಿಸಿ ನಗರಸಭೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು

Total Views: 0
Share This Article