
In Singanallur village, a pipe burst due to the negligence of JJM officials, causing drinking water to be wasted!

ಸಿಂಗನಲ್ಲೂರು ಗ್ರಾಮದಲ್ಲಿ ಜೆ ಜೆ ಎಮ್ ಅಧಿಕಾರಿಗಳ ಯಡವಟ್ಟು ಒಂದು ಅಡಿಯಲ್ಲಿ ಊತಾಕ್ಕಿದ್ದ ಪೈಪ್ ಒಡೆದು ಕುಡಿವ ನೀರು ಪೋಲು!

ವರದಿ:ಬಂಗಾರಪ್ಪ .ಸಿ.
ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ಸಿಂಗಾನಲ್ಲೂರು ಗ್ರಾಮದ ಒಕ್ಕ ಲಿಗರ ಬೀದಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೇಳೆ ಜೆಜೆಎಂ ಪೈಪ್ ಲೈನ್ ಇರುವೆಡೆಯಲ್ಲಿ ಪೈಪು ಒಡೆದುಹೋಗಿದ್ದು, ಹ ನೀರು ಪೋಲಾಗುತ್ತಿದೆ ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಹನೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರವರು ತಿಳಿಸಿದರು.
ನಂತರ ಮಾತನಾಡಿದ ಅವರು
ಕ್ಷೇತ್ರಾ ವ್ಯಾಪ್ತಿಯಲ್ಲಿನ ಸಿಂಗನೆಲ್ಲೂರು ಗ್ರಾಮದಲ್ಲಿ ನಡೆದ
ಜೆಜೆಎಂ ಯೋಜನೆಯ 20 ಎಂಎಂ ಇಂಜಿನ ಪೈಪ್ ಲೈನ್ ಸಂಪರ್ಕವನ್ನು ಭೂಮಿಯ ಒಳಗಡೆ ಕೇವಲ ಅರ್ದ ,ಒಂದು ಅಡಿಯಲ್ಲಿ ಪೈಪ್ ಗಳನ್ನು ಊತಾಕ್ಕಿದ್ದು ,ಅದರ ಮೆಲ್ಬಾಗಕ್ಕೆ ಪೆಟ್ಟು ತಗುಲಿದ್ದು, ಹಲವು ಕಡೆಗಳಲ್ಲಿ ಪೈಪ್ ಒಡೆದುಹೋಗಿದೆ. ಇದರಿಂದಾಗಿ ಕಾವೇರಿ ಕುಡಿಯುವ ನೀರು ಹೊರಗೆ ಹರಿದು ಪೋಲಾಗುತ್ತಿದೆ. ಮಾತ್ರವಲ್ಲದೇ, ಈ ಪೈಪ್ ಲೈನ್ ವ್ಯಾಪ್ತಿಯಲ್ಲಿರುವ ಸುಮಾರು 150 ಕುಟುಂಬಗಳಿಗೆ ನಿತ್ಯ ಸಮರ್ಪಕ ನೀರು ಪೂರೈಕೆಯಾಗದೆ ಜನರು ಪರದಾಡುತ್ತಿದ್ದಾರೆ.
ಕುಡಿಯುವ ನೀರಿನ ಜೆಜೆಎಂ ಪೈಪ್ ಲೈನ್ ತೀವ್ರ ಸಮಸ್ಯೆಗೊಳಗಾಗಿದ್ದು, ಕೂಡಲೇ ಇದನ್ನು ಸರಿಪಡಿಸುವಂತೆ ಸ್ಥಳೀಯ ನಿವಾಸಿ
ಗಳು ಹಾಗೂ ಮುಖಂಡರು ಸಂಬಂಧಿಸಿದ ಜೆ ಜೆ ಎಮ್ ಗುತ್ತಿಗೆದಾರರಿಗೆ ಮನವಿ ಮಾಡಿದ್ದಾರೆ. ಇತ್ತ ಹನೂರು ಶಾಸಕ ಎಂ.ಆರ್.ಮಂಜುನಾಥ್, ಜಿಪಂ ಸಿಇಒ ಮೋನಾ ರೋತ್, ಸ್ಥಳೀಯ ಗ್ರಾಪಂ ಆಡಳಿತದವರು ಸಹ ಇದೇ ವಿಚಾರವಾಗಿ ಸ್ಥಳ ಪರಿಶೀಲಿಸಿ ಹೋಗಿದ್ದು.
ಆದರೆ, ಪೈಪ್ ಲೈನ್ ದುರಸ್ತಿ ಕಾರ್ಯ 3 ತಿಂಗಳಾದರೂ ಮುಗಿದಿಲ್ಲ , ಪರಿಣಾಮವಾಗಿ ಸಂಬಂಧಿಸಿದ ನಿವಾಸಿಗಳು ಕುಡಿಯುವ ನೀರಿಗಾಗಿ ಒಂದೆಡೆ ಪರದಾಡಿದರೆ, ಮತ್ತೊಂ ದೆಡೆ ಯಾರದೋ ತಪ್ಪಿಗೆ ಬಿರು ಬೇಸಿಗೆಯಲ್ಲಿ ಜೀವ ಜಲ ಪೋಲಾಗುತ್ತಿದ್ದು, ಜನ-ಜಾನು ವಾರುಗಳಿಗೆ ನೀರಿಲ್ಲದೆ ಅನೇಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವ ಈ ಪರಿಸ್ಥಿತಿಯಲ್ಲಿ ಅಧಿಕಾರಿ ಗಳ ಬೇಜವಾಬ್ದಾರಿಂದ ಕುಡಿಯುವ ನೀರು ವ್ಯರ್ಥವಾಗುತ್ತಿರುವುದು, ಸಾರ್ವಜನಿಕ ವಲ ಯದಲ್ಲಿ ತಾಲೂಕು ಆಡಳಿತದ ವೈಖರಿಗೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಕೂಡಲೇ ಕ್ರಮ ವಹಿಸಿ, ನೀರು ಪೋಲಾಗದಂತೆ ತಡೆದು ಅಗತ್ಯವಿರುವ ಗ್ರಾಮಗಳಿಗೆ ಶೀಘ್ರವೇ ಪೂರೈಕೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
