ಮೂಡಲಗಿಯಲ್ಲಿ ಮಹಿಳಾ ದಿನಾಚರಣೆ – ವಿಭೂತಿ ಪೂಜೆ ವಿಶೇಷ ಆಕರ್ಷಣೆ

Women's Day celebration in Mudalagi - Vibhuti Puja is a special attraction

ಮೂಡಲಗಿಯಲ್ಲಿ ಮಹಿಳಾ ದಿನಾಚರಣೆ – ವಿಭೂತಿ ಪೂಜೆ ವಿಶೇಷ ಆಕರ್ಷಣೆ

ಜಾಹೀರಾತು

ಮೂಡಲಗಿ :ಪಂಚಮಸಾಲಿ ಸಮುದಾಯದ ವತಿಯಿಂದ ಮಹಿಳಾ ದಿನಾಚರಣೆಯನ್ನು ಶ್ರೀ ಮಹಾಲಕ್ಷ್ಮಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಮೂಡಲಗಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಭಾರತಿ ಮದಭಾವಿ, ಮಾತುಶ್ರೀ ಡಾ. ಕಾವ್ಯಶ್ರೀ ಅಮ್ಮನವರು ಹಾಗೂ ಪೂಜಾ ಪಾರ್ಸಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತಿ ಮದಭಾವಿ ಅವರು ಪಂಚಮಸಾಲಿ ಸಮುದಾಯದ ಉಗಮ ಹಾಗೂ ಲಿಂಗಪೂಜೆಯ ಮಹತ್ವವನ್ನು ವಿವರಿಸಿ, ಮಕ್ಕಳಿಗೆ ಸಬಲ ಜೀವನ ನಡೆಸುವಂತೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಕಾವ್ಯಶ್ರೀ ಅಮ್ಮನವರು ಮಹಿಳಾ ಸಬಲೀಕರಣದ ಅಗತ್ಯತೆಯ ಕುರಿತು ಮಾತನಾಡಿದರು. ಬಳಿಕ ಅಮ್ಮಜಿ ಅವರಿಂದ ಮಲ್ಲಯ್ಯನ ಹಾಡಿನೊಂದಿಗೆ ವಿಭೂತಿ ಪೂಜೆ ನೆರವೇರಿಸಲಾಯಿತು ಹಾಗೂ ಎಲ್ಲರಿಗೂ ವಿಭೂತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ವಿದ್ಯಾ ಡವಳೇಶ್ವರ್ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮಿ ಫಿರೋಜಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಶಶಿರೇಖಾ ಬೆಳ್ಳಕ್ಕಿ ಅವರು ನಿರೂಪಿಸಿದರು. ಶಿವಲೀಲಾ ಚಂಡಿಕಿ ಅವರು ಸ್ವಾಗತಿಸಿದರು. ಶ್ರೀದೇವಿ ಮಗದುಮ್ ಅವರು ಪ್ರಾಸ್ತಾವಿಕ ನುಡಿ ಹೇಳಿದರು.
ಈ ಸಂದರ್ಭದಲ್ಲಿ ಸುಶೀಲಾ ಕೌಜಲಗಿ, ಜ್ಯೋತಿ ಅಂದಾನಿ, ಮಾದೇವಿ ಕುದರಿ, ರಾಜಶ್ರೀ ಅಡಿಬಟ್ಟಿ, ಜ್ಯೋತಿ ಪಾಲಬಾಂವಿ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.

Leave a Reply

Your email address will not be published. Required fields are marked *