ಜಂಟಿ ನಿರ್ದೇಶಕರ ಮೇಲಿನ ಆರೋಪ ಸತ್ಯಕ್ಕೆ ದೂರ – ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ.

The allegations against the Joint Director are far from the truth - former Zilla Panchayat member Shantappa.




ಜಂಟಿ ನಿರ್ದೇಶಕರ ಮೇಲಿನ ಆರೋಪ ಸತ್ಯಕ್ಕೆ ದೂರ – ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ.

ಜಾಹೀರಾತು

ತಿಪಟೂರು : ಜಂಟಿ ನಿರ್ದೇಶಕರ ಮೇಲಿನ ಆರೋಪ ಸತ್ಯಕ್ಕೆ ದೂರ – ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಕೃಷ್ಣಪ್ಪನವರ ಮೇಲೆ ಮಾಡಿರುವ ಆರೋಪ ಸತ್ಯ ಕ್ಕೆ ದೂರವಾಗಿದ್ದು ಪ್ರಾಮಾಣಿಕ ಅಧಿಕಾರಿಯ ಮೇಲೆ ಮೃತ ಪಾವಗಡದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಹಾಗೂ ಕುಟುಂಬ ಮಾಡಿರುವ ಆರೋಪ ನಿರಾಧಾರ ವಾಗಿದೆ.ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಮಾಧ್ಯಮಕ್ಕೆ ತಿಳಿಸಿದರು..

ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಘೋಷ್ಟಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು
ಸಮಾಜ ಕಲ್ಯಾಣ ಇಲಾಖೆಗೆ ಜಂಟಿ ನಿರ್ದೇಶಕರಾಗಿ ಬಂದ ದಿನದಿಂದಲೂ ನಾವು ಕೃಷ್ಣಪ್ಪನವರನ್ನು ಕಂಡಿದ್ದೇವೆ. ಬಡತನದಿಂದ ವಿದ್ಯಾಭ್ಯಾಸ ಮಾಡಿ ಅನೇಕ ಉದ್ದೆಗಳನ್ನು ಅಲಂಕರಿಸಿ ಈ ಹಂತಕ್ಕೆ ಬಂದಿರುವ ಅಧಿಕಾರಿ ಕೃಷ್ಣಪ್ಪ ಬಡಮಕ್ಕಳಿಗೆ ಅನ್ಯಾಯವಾದರೆ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಇಂತಹ ಅಧಿಕಾರಿಯ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಮಲ್ಲಿಕಾರ್ಜುನಯ್ಯ ರವರ ಘಟನೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಯಾವುದೋ ವೈಯಕ್ತಿಕ ಉದ್ದೇಶಗಳಿಗಾಗಿ ಇಂತಹ ಆರೋಪಗಳನ್ನು ಮಾಡಿರುವುದು ತಪ್ಪು ಎಂದು ಇದೆ ವೇಳೆ ಅವರು ಆರೋಪಿಸಿದರು.

ಅಂಬೇಡ್ಕರ್ ಸೇವಾ ಸಮಿತಿಯ ತಿಪಟೂರು ಉಪ ವಿಭಾಗದ ಅಧ್ಯಕ್ಷರಾದ ರಾಘವೇಂದ್ರ ಯಗಚಿಗಟ್ಟೆ ಮಾತನಾಡಿ, ಮೃತ ಅಧಿಕಾರಿ ಮಲ್ಲಿಕಾರ್ಜುನ ರವರ ಕುಟುಂಬದ ಹಿನ್ನೆಲೆಯಲ್ಲಿ ಈಗ ತನ್ನ ಮಗನಿಗೆ ಸರ್ಕಾರಿ ಕೆಲಸ ಸಿಗಲಿ ಎಂದು ಈ ಕೃತ್ಯ ಮಾಡಿಕೊಂಡಿರುವ ಬಗ್ಗೆ ನಮಗೆ ಅನುಮಾನ ವಿದ್ದು ಅದಕ್ಕಾಗಿ ಜೆಡಿ ಕೃಷ್ಣಪ್ಪನವರ ಹೆಸರನ್ನು ದುರುಪಯೋಗ ಮಾಡಿಕೊಂಡು ಉದ್ದೇಶ ಪೂರ್ವಕವಾಗಿ ಸುಳ್ಳು ಆರೋಪ ಮಾಡಿರುವುದು ಸರಿಯಲ್ಲ ಎಂದರು.

ಈ ಹಿಂದೆ ಮಲ್ಲಿಕಾರ್ಜುನ ಅವರ ಮೇಲೆ ಎರಡು ಅಪವಾದಗಳಿದ್ದು ಇಲಾಖೆಯ ತನಿಖೆಗೆ ಹೆದರಿ ಈ ಕೃತ್ಯಕ್ಕೆ ಮುಂದಾಗಿರಬಹುದು. ಆದರೆ ಇದಕ್ಕೆ ಕೃಷ್ಣಪ್ಪನವರು ಕಾರಣರಾಗಲು ಸಾಧ್ಯವಿಲ್ಲ. ಇದು ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರವಲ್ಲ. ಕೃಷ್ಣಪ್ಪ ರವರು ತನ್ನ ಕೆಳ ಸಿಬ್ಬಂದಿಗಳಿಗೆ ಯಾವತ್ತೂ ಕೂಡ ಕಿರುಕುಳ ನೀಡಿದ ವ್ಯಕ್ತಿಯಲ್ಲ.
ತನ್ನ ಸಿಬ್ಬಂದಿಯವರನ್ನು ಅಣ್ಣ ತಮ್ಮಂದಿರಂತೆ ಪ್ರೀತಿಸುವ ವ್ಯಕ್ತಿಯಾಗಿದ್ದರು.

ಪಕ್ಷಭೇದ ಹಾಗೂ ಜಾತಿಭೇದವಿಲ್ಲದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಕೃಷ್ಣಪ್ಪನವರ ಮೇಲಿನ ಆರೋಪ ನಿರಾಧಾರ ಎಂಬುದು ಸದ್ಯದಲ್ಲೇ ತಿಳಿಯಲಿದೆ ಎಂದರು.

ಕೃಷ್ಣಪ್ಪ ಅವರು ತುಮಕೂರು ಜಿಲ್ಲೆಗೆ ಮೂರು ವರ್ಷ ಬಂದಾಗಿನಿಂದಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಸೇವಾ ಏಳಿಗೆಗೆ ಶ್ರಮಿಸಿರುತ್ತಾರೆ.
ಇವರ ಅವಧಿಯಲ್ಲಿ ನಾವು ಕಂಡಂತೆ ಇಲಾಖೆಯಲ್ಲಿ ಸರ್ಕಾರದಿಂದ ಮಾಡಲಾದ ಸಂವಿಧಾನ ಜಾಗೃತಿ ಜಾತವನ್ನು ಯಶಸ್ವಿಯಾಗಿ ರಾಜ್ಯದಲ್ಲೇ ಪ್ರಥಮ ಸ್ಥಾನ ತುಮಕೂರು ಜಿಲ್ಲೆಗೆ ಬರಲು ಹಗಲಿರುಳು ಶ್ರಮಿಸಿರುತ್ತಾರೆ.
ಹಾಗು ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ 90 ಕಿಲೋಮೀಟರ್ಗಳ ಮಾನವ ಸರ್ಪಳಿ ನಿರ್ಮಿಸಿ , ಎಲ್ಲಾ ಪ್ರಗತಿಪರ ದಲಿತಪರ ರೈತಪರ ಸಂಘಟನೆ ಉಗ್ಗೋಡಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುನ್ನಡೆಸಿರುತ್ತಾರೆ.
ತುಮಕೂರು ಜಿಲ್ಲೆಯ 10 ತಾಲೂಕುಗಳಿಗೆ ಯಾವುದೇ ಸಿಬ್ಬಂದಿಗೆ ಅನ್ಯಾಯವಾಗದಂತೆ ತಮ್ಮ ಸ್ವಂತ ಕುಟುಂಬದಂತೆ ಪ್ರತಿಯೊಬ್ಬರಿಗೂ ಯಾವುದೇ ಸಮಸ್ಯೆ ಆಗದಂತೆ ಇಲ್ಲಿಯವರೆಗೆ ಕಾರ್ಯನಿರ್ವಹಿಸಿರುತ್ತಾರೆ. ಜಿಲ್ಲೆಯ ಎಲ್ಲ ದಲಿತ ಮುಖಂಡರ ನೆಚ್ಚಿನ ಅಧಿಕಾರಿಯಾಗಿದ್ದು ಎಲ್ಲರ ಸಮಸ್ಯೆಗಳನ್ನು ತಾವೇ ಖುದ್ದಾಗಿ ಆಲಿಸಿ ಸ್ವಲ್ಪ ಸಮಯದಲ್ಲಿಯೇ ಕೆಲ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿತ್ವ ಉಳ್ಳವರಾಗಿದ್ದು ಒಟ್ಟಾರೆಯಾಗಿ ಹೇಳಬೇಕೆಂದರೆ ಮಲ್ಲಿಕಾರ್ಜುನಯ್ಯನವರು ಯಾವುದೋ ಮಾನಸಿಕ ಖಿನ್ನತೆಗೆ ಅಥವಾ ಕುಟುಂಬ ಸಮಸ್ಯೆಗೆ ಈ ರೀತಿ ಅನಾಹುತ ಮಾಡಿಕೊಂಡಿದ್ದು ಈ ಅನಾವುತಕ್ಕೆ ಜಂಟಿ ನಿರ್ದೇಶಕರು ನೇರವಾಗಿ ಕಾರಣರಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಮುಖಂಡರಾದ ಪೆದ್ದೇಹಳ್ಳಿ ನರಸಿಂಹಯ್ಯ ಕುಪ್ಪಾಳು ರಂಗಸ್ವಾಮಿ ಮತ್ತಿಘಟ್ಟ ಶಿವಕುಮಾರ್ ಮಾರನಗೆರೆ ರಮೇಶ್ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *