MLA M.R. Manjunath watched Indira's canteen food

ಶಾಸಕ ಎಮ್ ಆರ್ ಮಂಜುನಾಥ್ ಇಂದಿರ ಕ್ಯಾಂಟಿನ್ ಆಹಾರ ಸೇವಿಸಿ ವೀಕ್ಷಿಸಿದರು

ವರದಿ: ಬಂಗಾರಪ್ಪ .ಸಿ .
ಹನೂರು : ಪಟ್ಟಣದ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್ ಗೆ ಶಾಸಕರಾದ ಎಂ.ಆರ್ ಮಂಜುನಾಥ್ ದಿಢೀರ್ ಬೇಟಿ ನೀಡಿ ಆಹಾರ ಸೇವಿಸುವ ಮೂಲಕ ಗುಣಮಟ್ಟವನ್ನು ಪರಿಶೀಲನೆ ಮಾಡಿದರು.
ನಂತರ ಮಾತನಾಡಿದ ಅವರು ಮುಖ್ಯ ರಸ್ತೆಯಲ್ಲಿರುವ ಪುಟ್ಭಾತ್ ಅಂಗಡಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು ಹಾಗೂ ಇಂದಿರಾ ಕ್ಯಾಂಟಿನ್ ನಲ್ಲಿ ಬಳಕೆ ಆಗುತ್ತಿರುವ ತಾಜಾ ತರಕಾರಿಗಳು ಮತ್ತು ಉತ್ತಮ ಗುಣಮಟ್ಟದಲ್ಲಿ ಆಹಾರ ತಯಾರಿಸಿ ಸಾರ್ವಜನಿಕರಿಗೆ ನೀಡಬೇಕು ,
ಅಲ್ಲದೆ ದಿನನಿತ್ಯದ ವಹಿವಾಟಿನ ಬಗ್ಗೆ ಮಾಹಿತಿ ಪಡೆದ ಶಾಸಕರು ಬೆಳಗ್ಗೆ ಮತ್ತು ಮಧ್ಯಾಹ್ನ ಹೆಚ್ಚು ಸಾರ್ವಜನಿಕರು ಊಟ ಮಾಡುತ್ತಾರೆ. ರಾತ್ರಿ ವೇಳೆ ಕಡಿಮೆ ಜನ ಬರುತ್ತಾರೆ. ಎಂದು ಕ್ಯಾಂಟಿನ್ ಸಿಬ್ಬಂದಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ರಾತ್ರಿ ವೇಳೆ ಕಡಿಮೆ ಆಹಾರ ತಯಾರಿಸಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಹೆಚ್ಚು ಆಹಾರ ತಯಾರಿಸಿ ಸಾರ್ವಜನಿಕರಿಗೆ ನೀಡಲು ತಿಳಿಸಿದರು.
ಶುಚಿತ್ವ ಕಾಪಾಡಿ ಒತ್ತು ನೀಡಲು ಸಲಹೆ . ಕ್ಯಾಂಟಿನ್ ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಬೇಳೆ ಸಾಂಬರ್ , ಅನ್ನವನ್ನು ಊಟ ಮಾಡಿದ ನಂತರ ಅಲ್ಲಿನ ಸಿಬ್ಬಂಧಿಗಳಿಗೆ ಶುಚಿತ್ವದಿಂದ ಕಾಪಾಡಬೇಕು. ಜೊತೆಗೆ ತಾಜಾ ತರಕಾರಿಗಳನ್ನು ಹಾಕುವ ಮೂಲಕ ಪ್ರತಿ ದಿನ ನನಗೆ ಪೋಟೋಗಳನ್ನು ಕಳುಹಿಸಬೇಕು ಎಂದರು.
ಪುಟ್ಬಾತ್ ಗಳಲ್ಲಿ ತಳ್ಳುವ ಗಾಡಿ ನಿಲ್ಲಿಸಬಾರದು : ದಿನನಿತ್ಯ ಪಟ್ಟಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಹನೂರು ಪ್ರಮುಖ ಕೇಂದ್ರಸ್ಥಾನವಾದ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಇರುವ ಟೀ ಅಂಗಡಿ ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳು ವ್ಯಾಪಾರ ಮುಗಿಸಿ ನಂತರ ಗಡಿಗಳನ್ನು ವಾಪಸ್ಸು ತೆಗದುಕೊಂಡು ಹೋಗಲು ಕ್ರಮವಹಿಸವಂತೆ ಪಟ್ಟಣ ಪಂಚಾಯತಿ ಪ್ರಭಾರ ಆರೋಗ್ಯಾಧಿಕಾರಿ ಪ್ರಕಾಶ್ ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಚಿನ್ನವೆಂಕಟ,ಮಡಿವಾಳ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಮೂರ್ತಿ, ಪಟ್ಟಣ ಪಂಚಾಯತಿಯ ಹೆಲ್ತ್ ಇನ್ಸ್ಪೆಕ್ಟರ್ ಪ್ರಕಾಶ್ ಕುಮಾರ್, ಹಾಗೂ ಮುಖಂಡರುಗಳು ಹಾಜರಿದ್ದರು.