ಸಮುದಾಯದ ಮುಖಂಡರ ಅಣತೆ ಮಹನೀಯರ ಜಯಂತಿಯನ್ನು ಆಚರಣೆ ಮಾಡೋಣ ಶಾಸಕ ಎಮ್ ಆರ್ ಮಂಜುನಾಥ್ .

Let's celebrate the birth anniversary of the community leaders, MLA MR Manjunath.

ಸಮುದಾಯದ ಮುಖಂಡರ ಅಣತೆ ಮಹನೀಯರ ಜಯಂತಿಯನ್ನು ಆಚರಣೆ ಮಾಡೋಣ ಶಾಸಕ ಎಮ್ ಆರ್ ಮಂಜುನಾಥ್ .

ಜಾಹೀರಾತು

ವರದಿ: ಬಂಗಾರಪ್ಪ .ಸಿ .
ಹನೂರು : ತಾಲ್ಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಡಾಕ್ಟರ್ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಯನ್ನು ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬ ಸಮುದಾಯದ ಮುಖಂಡರು ತಮ್ಮ ಸಲಹೆ ಸೂಚನೆಗಳ ಮೇರೆಗೆ ಜಯಂತಿ ಆಚರಣೆಗೆ ಮತ್ತು ನೀಡಲಾಗುವುದು ಹೀಗಾಗಿ ಏಪ್ರಿಲ್ 5 ರಂದು ನಡೆಯುವ ಆಚರಣೆಯ ದಿನದಂದು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪ ಅಲಂಕಾರ ಹಾಗೂ ಮೆರವಣಿಗೆ ನಡೆಸಲು ಮತ್ತು ಜಯಂತಿ ಆಚರಣೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು ..
ಹನೂರು ತಾಲೂಕಿನ ಬಾಬು ಜಗಜೀವನ್ ರಾಮ್ ತಾಲೂಕು ಘಟಕದ ಅಧ್ಯಕ್ಷ ಮಹಾದೇವ ಮಾತನಾಡಿ : ಬಾಬು ಜಗಜೀವನ್ ರಾಮ್ ಆದರ್ಶ ವ್ಯಕ್ತಿಯ ಜಯಂತಿಯನ್ನು ವಿಜ್ರಮಣೆಯಿಂದ ಆಚರಿಸಲು ಸರ್ವ ಜನಾಂಗದ ಸಮುದಾಯದವರು ಸಹಕಾರ ನೀಡುವ ಮೂಲಕ ಶಾಸಕರು ಸಹ ಇದಕ್ಕೆ ಪೂರಕವಾಗಿ ಸ್ಪಂದಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಒತ್ತಾಯಿಸಿದರು ..

ಮುಖಂಡರಾದ ಸುದೇಶ್ ಮಾತನಾಡಿ ರಾಷ್ಟ್ರೀಯ ಹಬ್ಬ ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಬೆಳ್ಳಿರಥದಲ್ಲಿ ಮೆರವಣಿಗೆ ವ್ಯವಸ್ಥೆಯನ್ನು ಕಲ್ಪಿಸಿ ಅದ್ದೂರಿಯಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಿದರು …

ಮುಖಂಡ ಗುರುಸ್ವಾಮಿ ಮಾತನಾಡಿ : ಸಮುದಾಯದ ತಾಲೂಕಿನ 66 ಹಳ್ಳಿಗಳಿಂದಲೂ ಪ್ರತಿಯೊಬ್ಬರು ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಪಕ್ಷ ಭೇದವಿಲ್ಲದೆ ಸಹಕಾರ ನೀಡುವ ಮೂಲಕ ಶಾಸಕರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಪ್ರತಿಯೊಬ್ಬರ ಸಲಹೆ ಸೂಚನೆಗಳು ಮುಖ್ಯ ಎಂದು ತಿಳಿಸಿದರು ..

ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಚೈತ್ರ, ಕಾರ್ಯ ನಿರ್ವಹಣಾಧಿಕಾರಿ ಉಮೇಶ್,ತಾಲೂಕು ಸಮಾಜ ಕಲ್ಯಾಣಧಿಕಾರಿ ಕೇಶವಮೂರ್ತಿ,ತಾಲೂಕು ಹಿರಿಯ ವೈದ್ಯಾಧಿಕಾರಿ ಡಾಕ್ಟರ್ ಪ್ರಕಾಶ್, ಪಿಎಸ್ಐ ಸಾಹೇಬ್ ಗೌಡ, ಚೆಸ್ಕಾಂ ಎ.ಇ.ಇ ರಂಗಸ್ವಾಮಿ,ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರೇಖಾ, ಅರೋಗ್ಯ ಅಧಿಕಾರಿ ಪ್ರಕಾಶ್, ಅಗ್ನಿಶಾಮಕ ಅಧಿಕಾರಿ ಮಹೇಶ್, ಸಮುದಾಯದ ಮುಖಂಡರುಗಳಾದ ಗುರುಸ್ವಾಮಿ,ತಾಲೂಕು ಜಗಜೀವನ್ ರಾಮ್ ಸಂಘದ ತಾಲೂಕು ಅಧ್ಯಕ್ಷ ಮಹಾದೇವ, ಕಾಮಗೆರೆ ಮಹದೇವ್,ರವಿ, ರಾಮಪುರ ರವಿ, ಕಾಂಚಲ್ಲಿ ಮಹದೇವ್, ಸುದೇಶ್, ಗೋವಿಂದ, ವೆಂಕಟೇಶ್, ಕಾಮಗೆರೆ ತೊಮಣ್ಣ, ಗೋವಿಂದರಾಜು,ಹಾಗೂ ಇನ್ನಿತರರು ಇದ್ದರು..ಹಾಗೂ ಸಮುದಾಯದ ಮುಖಂಡರುಗಳು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು …

Leave a Reply

Your email address will not be published. Required fields are marked *