Every patient says these 9 words before they die; Nurse reveals surprising information.

ಪ್ರತಿಯೊಬ್ಬ ರೋಗಿಯು ಸಾಯುವ ಮುನ್ನ ಈ 9 ಪದ ಹೇಳುತ್ತಾರಂತೆ; ಅಚ್ಚರಿ ಮಾಹಿತಿ ಬಹಿರಂಗ ಪಡಿಸಿದ ನರ್ಸ್.

ಅಮೆರಿಕದ ಫ್ಲೋರಿಡಾ (Florida) ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 29 ವರ್ಷದ ನರ್ಸ್ ಕ್ರಿಸ್ಟಿ ರಾಬರ್ಟ್ (Kirsty Robert) ಕಳೆದ ನಾಲ್ಕು ವರ್ಷಗಳಿಂದ ಐಸಿಯು (ICU) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ರೋಗಿಗಳ (Patient) ಅಂತಿಮ ಕ್ಷಣಗಳನ್ನು ಕಣ್ಣಾರೆ ಕಂಡಿದ್ದಾರೆ.
ಅವರ ಅನುಭವ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಸಾವಿಗೆ ಕೆಲವೇ ಗಂಟೆಗಳು ಅಥವಾ ನಿಮಿಷಗಳು ಬಾಕಿ ಇರುವಾಗ ರೋಗಿಗಳಲ್ಲಿ ಒಂದು ವಿಚಿತ್ರ ಬದಲಾವಣೆ ಕಾಣಿಸುತ್ತದೆ. ಕೆಲವೊಮ್ಮೆ ಅವರ ದೇಹದ ಸ್ಥಿತಿ ಸಾಮಾನ್ಯವಾಗಿಯೇ ಕಾಣುತ್ತದೆ. ವೈದ್ಯರು “ಅಪಾಯ ಇಲ್ಲ” ಎಂದು ಹೇಳಿದರೂ, ರೋಗಿಗಳು ತಮ್ಮೊಳಗೆ ಏನೋ ನಡೆಯುತ್ತಿದೆ ಎಂದು ಅನುಭವಿಸುತ್ತಾರೆ.
ಅವರು ಹೇಳುವಂತೆ, ಸಾಯುವ ಮುನ್ನ ಬಹುತೇಕ ರೋಗಿಗಳು ಒಂದೇ ರೀತಿಯ ಮಾತುಗಳನ್ನು ಹೇಳುತ್ತಾರೆ.
“ದಯವಿಟ್ಟು ನನ್ನ ಕುಟುಂಬಕ್ಕೆ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿ”, “ನನಗೆ ಹುಷಾರಿಲ್ಲ, ನಾನು ಸಾಯುತ್ತಿದ್ದೇನೆ ಎಂದು ನನಗೆ ಗೊತ್ತಾಗಿದೆ.” ಇವು ಸಾಮಾನ್ಯವಾಗಿ ಕೇಳಿಬರುವ ಮಾತುಗಳು.
ಈ ಮಾತುಗಳನ್ನು ಹೇಳಿದ ಕೆಲವೇ ಸಮಯದ ಬಳಿಕ ರೋಗಿಯು ನಿಧನರಾಗುತ್ತಾರೆ ಎಂದು ಅವರು ವಿವರಿಸಿದ್ದಾರೆ.
ಈ ಅನುಭವವನ್ನು ಕಿರ್ಸ್ಟಿ ಒಂದು ಸಾಮಾಜಿಕ ಮಾಧ್ಯಮ ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.
ಆ ವೀಡಿಯೊಗೆ ಲಕ್ಷಾಂತರ ಜನರು ವೀಕ್ಷಣೆ ನೀಡಿದ್ದಾರೆ. ಹಲವರು ತಮ್ಮದೇ ಅನುಭವಗಳನ್ನು ಕಾಮೆಂಟ್ ಮಾಡಿದ್ದಾರೆ. ಕೆಲವು ವೈದ್ಯಕೀಯ ಸಿಬ್ಬಂದಿಯೂ ಈ ಮಾತಿಗೆ ಬೆಂಬಲ ನೀಡಿದ್ದಾರೆ.
“ಹೌದು, ರೋಗಿಗಳಿಗೆ ತಮ್ಮ ಅಂತಿಮ ಕ್ಷಣಗಳು ಬರುತ್ತಿವೆ ಎಂಬುದು ಅನಿಸುತ್ತದೆ” ಎಂದು ಹೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ ತನ್ನ ಸಂಬಂಧಿಯ ಕಥೆಯನ್ನು ಹಂಚಿಕೊಂಡಿದ್ದು, ಅವರ ಆರೋಗ್ಯದ ಅಂಶಗಳು ಸರಿಯಾಗಿದ್ದರೂ ಅವರು ತಮ್ಮ ಸಾವನ್ನು ಮುಂಚಿತವಾಗಿ ಹೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ದೇಹದ ಅಂಗಗಳು ನಿಧಾನವಾಗಿ ದುರ್ಬಲವಾಗುವಾಗ ಮೆದುಳಿಗೆ ಸಂಕೇತಗಳು ಹೋಗಬಹುದು. ಇದರಿಂದ ಆತಂಕ, ಭಯ ಅಥವಾ ಅಸಹಜ ಭಾವನೆಗಳು ಉಂಟಾಗಬಹುದು.
ಆದರೆ ಕಿರ್ಸ್ಟಿ ಹೇಳುವ ಅನುಭವ ಇದಕ್ಕಿಂತ ಭಿನ್ನವಾಗಿದೆ. ಅವರ ಪ್ರಕಾರ, ಇದು ಕೇವಲ ದೈಹಿಕ ಬದಲಾವಣೆ ಅಲ್ಲ, ಒಂದು ಆಳವಾದ ಭಾವನಾತ್ಮಕ ಅಥವಾ ಆಧ್ಯಾತ್ಮಿಕ ಅನುಭವವಾಗಿದೆ.