To build a tuberculosis-free society, social awareness, social concern, social commitment are the three important factors - Mallikarjun Hatti

ಕ್ಷಯ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾಜಿಕ ಜಾಗೃತಿ ಸಾಮಾಜಿಕ ಕಳಕಳಿ ಸಾಮಾಜಿಕ ಬದ್ಧತೆ ಈ ಮೂರು ಅಂಶಗಳು ಮುಖ್ಯ-ಮಲ್ಲಿಕಾರ್ಜುನ ಹ್ಯಾಟಿ

ಹೌದು, ಜನಭಾಗಿದಾರಿ ನೇತೃತ್ವದ ಭಾರತ್ ನೇತೃತ್ವದಲ್ಲಿ ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು
ವಿಶ್ವ ಕ್ಷಯರೋಗ ದಿನ 2026
ಕ್ಷಯ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾಜಿಕ ಜಾಗೃತಿ ಸಾಮಾಜಿಕ ಕಳಕಳಿ ಸಾಮಾಜಿಕ ಬದ್ಧತೆ ಈ ಮೂರು ಅಂಶಗಳು ಮುಖ್ಯವಾಗುತ್ತವೆ.
ಕ್ಷಯರೋಗ ಹೆಸರೇ ಸೂಚಿಸುವ ಹಾಗೆ ಮನುಷ್ಯನನ್ನು ಕ್ಷೀಣಿಸುವಂತೆ ಕಾಯಿಲೆ, ಕ್ಷಯ ರೋಗವು ಮೈಕೋಬ್ಯಾಕ್ಟೀರಿಯಂ ಟುಬೇರ್ಕ್ಯುಲೋಸಿಸ್ ಎನ್ನುವ ರೋಗಾಣುವಿನಿಂದ ಗಾಳಿಯ ಮುಖಾಂತರ ಕ್ಷಯ ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಬರುವ ತುಂತುರು ಹನಿಗಳ ಮುಖಾಂತರ ಒಬ್ಬರಿಂದ ಒಬ್ಬರಿಗೆ ಹರಡುವುದು. ಒಂದು ಅಂದಾಜಿನ ಪ್ರಕಾರ ಶೇಕಡಾ 40ರಷ್ಟು ಸುಪ್ತ(latent) ಕ್ಷಯರೋಗವು ಭಾರತದಲ್ಲಿ ಇದೆ ಎಂದು ಅಂದಾಜಿಸಲಾಗಿದೆ ಪ್ರತಿದಿನ ಸರಿಸುಮಾರು 60,000 ಜನರಿಗೆ ಪ್ರವೇಶ ಮಾಡಿ 6000 ಜನಕ್ಕೆ ಲಕ್ಷಣಗಳು ಕಾಣಿಸಿಕೊಂಡು 600 ಜನಕ್ಕೆ ಒಂದು ದಿನಕ್ಕೆ ಹರಡುತ್ತಿದೆ, ಪ್ರತಿ ಮೂರು ನಿಮಿಷಕ್ಕೆ ಇಬ್ಬರು ಕ್ಷಯರೋಗದಿಂದ ಮರಣಕ್ಕೆ ತುತ್ತಾಗುತ್ತಿದ್ದಾರೆ, ರೋಗದ ತೀವ್ರತೆ “ಸಕ್ಕರೆ ಕಾಯಿಲೆಯಿಂದ,”ತಂಬಾಕು ಸೇವನೆ ಮಾಡುವಲ್ಲಿ,”ಮದ್ಯಪಾನ ಹಾಗೂ ಧೂಮಪಾನದಿಂದ ರಲ್ಲಿ”,” ಎಚ್ಐವಿ ಇರುವವರಲ್ಲಿ ಬಳಲುವ ರಲ್ಲಿ, ಅಪೌಷ್ಟಿಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಹಾಗೂ ಒಬ್ಬ ಚಿಕಿತ್ಸೆ ಪಡೆಯದ ಕ್ಷಯ ರೋಗಿಯು ಒಂದು ವರ್ಷಕ್ಕೆ ಸುಮಾರು 15 ರಿಂದ 18 ಜನರಿಗೆ ಸೋಂಕನ್ನು ಹರಡುತ್ತಾನೆ, ಸಮುದಾಯದ ಪ್ರತಿಯೊಬ್ಬರೂ ಕ್ಷಯರೋಗದ ಜಾಗೃತಿಯನ್ನು ಪ್ರತಿ ಮನೆಮನೆಗೆ ಮುಟ್ಟಿಸುವ ರಿಂದ ಕ್ಷಯ ಮುಕ್ತ ಭಾರತದ ಕನಸನ್ನು ನನಸು ಮಾಡಬಹುದು,
ಕ್ಷಯರೋಗವನ್ನು ಅತಿ ಸುಲಭವಾಗಿ ಕಂಡುಹಿಡಿಯಲು
ಸಿಬಿ ನಾಟ್(cotrage baseed Nuclic acid application test CBNAAT) ಬಳಕೆ ಮಾಡಿಕೊಳ್ಳಲಾಗುತ್ತಿದೆ ಈ ಜೀನ್ ಎಕ್ಸ್ಪರ್ಟ್ ನಲ್ಲಿ ರೋಗಿಯ ಕಪದಲ್ಲಿ ಕೇವಲ 125 bascillie ಇದ್ದರೂ ಕೂಡ ಅದು ಗುರುತಿಸುವುದರ ಜೊತೆಗೆ ಫಸ್ಟ್ ಲೈನ್ ಕ್ಷಯರೋಗದ ಮಾತ್ರೆಗಳ ರೋಗನಿರೋಧಕತೆ ಯನ್ನು ಅದು ಪತ್ತೆ ಹಚ್ಚುತ್ತದೆ.
ಕ್ಷಯರೋಗವನ್ನು ಮುಖ್ಯವಾಗಿ ಎರಡು ವಿಧವಾಗಿ ವಿಂಗಡಿಸಬಹುದು
1ಶ್ವಾಸಕೋಶದ ಕ್ಷಯ 2ಶ್ವಾಸಕೋಶೇತರ ಕ್ಷಯ
- ಕ್ಷಯ ಕ್ಷಯ ರೋಗದ ಮುಖ್ಯ ಲಕ್ಷಣಗಳಾದ,
“ಎರಡು ವಾರಕ್ಕೂ ಮೇಲ್ಪಟ್ಟು ಕೆಮ್ಮು,
“ಹಸಿವೆಯಾಗದಿರುವುದು
ಜ್ವರ ಅದರಲ್ಲೂ ಸಾಯಂಕಾಲ ಬರುವುದು,
,,”ದೇಹದ ತೂಕ ಕಡಿಮೆಯಾಗುವುದು.
ಈ ಮೇಲ್ಕಾಣಿಸಿದ ಲಕ್ಷಣಗಳು ಶ್ವಾಸಕೋಶ ಕ್ಷಯ ಲಕ್ಷಣವಾಗಿರುತ್ತದೆ.
ಮುಂದುವರೆದು ಶ್ವಾಸಕೋಶೇತರ ಕ್ಷಯದ ವಿಧಗಳ ಆದ
*ಟಿಬಿ ಮೆನಿಂಜೈಟಿಸ್
(ಕುತ್ತಿಗೆ ಬಿಗಿಯಾಗುವುದು. ಮಾನಸಿಕ ಅವ್ಯವಸ್ಥೆ. ಅತಿಯಾದ ತಲೆನೋವು ಹಾಗೂ ಬೆಳಕಿಗೆ ಹೆದರುವುದು (photo phobia)
*ಟಿಬಿ lympydenities
ಕುತ್ತಿಗೆ ಹಾಗೂ ಕಂಕಳಲ್ಲಿ ಗಡ್ಡೆಗಳ ಆಗುವುದು ಸರಿಸುಮಾರು 1ಎಂಎಂ ನಿಂದ2ಎಂಎಂ ಒಂದರಿಂದ ಎರಡು ಗಂಟೆಗಳ ಆಗಿರಬಹುದು.
ಟಿಬಿ ಪ್ಲುರಲ್ ಎಫಿಷನ್ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುವುದು, ಡಸ್ಯಪ್ನಿಯ. ,ಸ್ಕೆಲೇಟನ್ ಟಿಬಿ
(ಎಲುಬು ಮತ್ತು ಜಾಯಿಂಟ್ ಅಲ್ಲಿ ಅತಿಯಾದ ನೋವು)
*ಅಬ್ದೋಮಿನಲ್ ಕ್ಷಯ
(ಹೊಟ್ಟೆನೋವು ಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಂಡಿರುವುದು)
*Urinogenitery ಕ್ಷಯ
*Falofian ಕ್ಷಯ.
ಒಬ್ಬ ಕ್ಷಯರೋಗಿ ಯನ್ನು ಪತ್ತೆ ಹಚ್ಚಿದ ನಂತರ ತ್ವರಿತಗತಿಯಲ್ಲಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು ಪ್ರಾರಂಭಿಸುವ ಮುಂಚೆ ರೋಗಿಗೆ ಆಪ್ತ ಸಮಾಲೋಚನೆಯನ್ನು ಮಾಡಲಾಗುವುದು ಹಾಗೂ ಸದರಿ ರೋಗಿಗೆ ಸಹವರ್ತಿ ಸೋಂಕುಗಳ ಆದ ಸಕ್ಕರೆ ಕಾಯಿಲೆ ಹಾಗೂ ಎಚ್ಐವಿ ಪರೀಕ್ಷೆಯನ್ನು ಮಾಡಲಾಗುವುದು, ನಂತರ ರೋಗಿಯ ಮನೆ ಭೇಟಿ ನೀಡಿ ರೋಗಿಯ ಮನೆಯಲ್ಲಿ ಯಾರು ಯಾರು ವಾಸ ಮಾಡುತ್ತಾರೆ ಹಾಗೂ ಅದರಲ್ಲಿ ಆರು ವರ್ಷಕ್ಕೆ ಕೆಳಗಿನ ಮಕ್ಕಳ ವಿವರವನ್ನು ತೆಗೆದುಕೊಂಡು ಅವರ ಸರಿಯಾದ ತೂಕ ಮಾಡಿ ಅವರಿಗೂ ಕೂಡ ರೋಗಿಯಿಂದ ತೊಂದರೆಯಾಗದಂತೆ ಐಸೋನಿಯಾ ಝ್ ಎನ್ನುವ ಮಾತ್ರೆಯನ್ನು ತೂಕಕ್ಕೆ ಅನುಗುಣವಾಗಿ ಕೊಡಲಾಗುವುದು ಹಾಗೂ ಕೌಟುಂಬಿಕ ಸಮಾಲೋಚನೆ ನಡೆಸಿ ರೋಗಿಯ ಮನೆಯವರಿಗೂ ಕೂಡ ಆತ್ಮಸ್ಥೈರ್ಯ ನೀಡಲಾಗುವುದು ಮುಂದುವರೆದು ರೋಗಿಗೆ ಸರಕಾರದ ಸೌಲತ್ತುಗಳು ನಿಕ್ಷೆಯ ಪೋಷಣೆ ಅಡಿಯಲ್ಲಿ ಪ್ರತಿ ತಿಂಗಳು ಐದುನೂರು ರೂಗಳನು ಚಿಕಿತ್ಸೆಯ ಮುಗಿಯೋವರೆಗೂ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮುಖಾಂತರ ನೀಡಲಾಗುವುದು, ಮುಂದುವರಿದು ರೋಗಿಯ ಹೆಚ್ಚುವರಿ ಕಫವನ್ನು ಸಂಗ್ರಹಿಸಿ ಐಆರೆಲ್ ಲ್ಯಾಬೋರೇಟರಿ ಗೆ ಕಳುಹಿಸಿಕೊಡಲಾಗುವುದು ಅದರಲ್ಲಿ ರೋಗಿಗೆ ಪ್ರಾಥಮಿಕ ಹಂತದಲ್ಲಿ ಕೊಡುವ ಪ್ರಥಮ ಹಂತದ ಚಿಕಿತ್ಸೆಯ ಮಾತ್ರೆಗಳ ಸಂವೇದನೆಗೆ ಒಳಪಡುತ್ತವೆ ಎಂದು ಪರೀಕ್ಷಿಸಲಾಗುವುದು ಒಂದು ವೇಳೆ ಮೊದಲ ಹಂತದ ಮಾತ್ರೆಗಳಿಗೆ ನಿರೋಧಕತೆ ಕಂಡುಬಂದಾಗ ರೋಗಿಗೆ ಬಹುಔಷಧ ಚಿಕಿತ್ಸೆ ಗೆ ವರ್ಗಾಯಿಸಲಾಗುವುದು. ಮೊದಲ ಹಂತದ ಮಾತ್ರೆಗಳು ರೋಗಿಗೆ ಹೊಂದಿ ಕೊಂಡಲ್ಲಿ ಚಿಕಿತ್ಸೆಯನ್ನು ಆರು ತಿಂಗಳವರೆಗೆ ಮುಂದುವರಿಸಿ ಮೊದಲ 54 ದಿನಗಳ ನಂತರ ಅನುಸರಣಾ ಪರೀಕ್ಷೆಯನ್ನು ಮಾಡಿಸಿ ರೋಗಿಯ ಕಪದಲ್ಲಿ ಕ್ರಿಮಿಯ ಅಂಶ ವನ್ನು ತಿಳಿದುಕೊಂಡು ಚಿಕಿತ್ಸೆಯನ್ನು ಮುಂದುವರಿಸುತ್ತೇವೆ ಮುಂದುವರಿದ ಚಿಕಿತ್ಸಾ ಹಂತದಲ್ಲಿ ರೋಗಿಗೆ ಒಂದು ನೂರ ಹತ್ತು ದಿನಗಳ ನಂತರ ಮತ್ತೊಂದು ಅನುಸರಣಾ ಪರೀಕ್ಷೆಯನ್ನು ಮಾಡಿಸಿ ಚಿಕಿತ್ಸ ಫಲಿತಾಂಶ ನೀಡಲಾಗುವುದು.
ಒಂದು ವೇಳೆ ಬಹು ಔಷಧ ನಿರೋಧಕತೆ ಕಂಡುಬಂದಲ್ಲಿ ಅಂತವರಿಗೆ ಎರಡನೇ ಹಂತದ ಚಿಕಿತ್ಸೆಯನ್ನು ಮಾರ್ಗಸೂಚಿ ಅನುಸಾರವಾಗಿ ಜಿಲ್ಲಾ ಬಹುವರ್ಷದ ನಿರೋಧಕ ಚಿಕಿತ್ಸೆ ಕೇಂದ್ರಕ್ಕೆ ಕಳುಹಿಸಿ ರೋಗಿಗೆ ಅವಶ್ಯಕತೆ ಇರುವ ಎಲ್ಲಾ ರಕ್ತದ ಪರೀಕ್ಷೆಗಳನ್ನು ಮಾಡಿಸಿ ಒಂದು ವಾರದವರೆಗೆ ನಿಗಾವಹಿಸಿ ಚಿಕಿತ್ಸೆಯನ್ನು ಮುಂದುವರಿಸಲು ರೋಗಿಯ ಸ್ವ ಸ್ಥಳಕ್ಕೆ ಕಳುಹಿಸಿಕೊಡಲಾಗುವುದು. ಎಲ್ಲಾ ಹಂತದ ಚಿಕಿತ್ಸೆಗೆ ಜಿಲ್ಲಾ ಕ್ಷಯ ನಿರ್ಮೂಲನ ಘಟಕದಲ್ಲಿ ತರಬೇತಿ ನೀಡಲಾದ ಡಾಟ್ಸ್ ಪ್ರೊವೈಡರ್ ಮುಖಾಂತರ ಚಿಕಿತ್ಸೆ ಮುಂದುವರಿಸಲಾಗುವುದು, ಹಾಗೂ ಪ್ರತಿ ತಿಂಗಳು ಅವರಿಗೆ ಅವಶ್ಯಕತೆ ಇರುವ ಅನುಸರಣೆ ತಪಾಸಣೆಗಳನ್ನು ಮಾಡಲಾಗುವುದು.
ತಾಲೂಕ ಮಟ್ಟದಲ್ಲಿ ಕ್ಷಯ ರೋಗಿಗಳ ಅಹವಾಲು ಸಭೆ ಮಾಡುವ ಮುಖಾಂತರ ರೋಗಿಗಳ ಕುಂದುಕೊರತೆಯನ್ನು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಕ್ಷಯರೋಗ ಪರಿವೀಕ್ಷಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದಿಂದ ನಡೆಸಿ ಪೌಷ್ಟಿಕ ಆಹಾರದ ಪ್ಯಾಕೆಟ್ ಗಳನ್ನು ನೀಡಿ ಅಪೌಷ್ಟಿಕತೆ ತಡೆಗಟ್ಟುವಲ್ಲಿ ಹಾಗೂ ಕ್ಷಯ ಮುಕ್ತ ಭಾರತ ಈಡೇರಲಿದೆ. ಜೊತೆಜೊತೆಗೆ ಕೊಪ್ಪಳ ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಒಂದು ನೂರು ಗೋಡೆ ಬರಹಗಳನ್ನು ಬರಿಸುವ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ, ಈ ಕರೋನದ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷಯ ಲಕ್ಷಣವಿರುವ ವರು ಭಯದಿಂದ ಹೊರಬರುತ್ತಿಲ್ಲ ಹಾಗೆ ಉಳಿದುಕೊಂಡರೆ ಮರಣದ ಸಂಭವ ಹಾಗೂ ಕ್ಷಯವನ್ನು ಹರಡಿಸುವ ಭೀತಿ ಹೆಚ್ಚಾಗಿರುವ ಕಾರಣ ಲಕ್ಷಣ ಉಳ್ಳವರು ಸರ್ಕಾರಿ ವ್ಯವಸ್ಥೆಗೆ ಬಂದು ಪರೀಕ್ಷಿಸಿ ಕೊಳ್ಳಬೇಕೆಂದು ಮನವಿ *ಕ್ಷಯ ಸೋಲುವುದು ದೇಶ ಗೆಲ್ಲುವುದು*
ಕ್ಷಯರೋಗ ಆರೋಗ್ಯ ಪರಿವೀಕ್ಷಕರು
ಮಲ್ಲಿಕಾರ್ಜುನ ಉಪವಿಭಾಗ ಆಸ್ಪತ್ರೆ ಗಂಗಾವತಿ
———- Forwarded message ———
From: mallikarjuna hyati mallikarjunahyati@gmail.com
Date: Sun, Oct 2, 2022, 8:11 PM
Subject: From Mallikarjuna About leading killar of World communicable disease Tuberculosis
To: prajaparwa@gmail.com prajaparwa@gmail.com