ಸಾಹಿತಿಗಳು ಬರವಣಿಗೆಯ ಮೂಲಕ ಸಮಾಜ ತಿದ್ದಲು ಮುಂದಾಗಬೇಕು

Writers should strive to improve society through writing.




ಸಾಹಿತಿಗಳು ಬರವಣಿಗೆಯ ಮೂಲಕ ಸಮಾಜ ತಿದ್ದಲು ಮುಂದಾಗಬೇಕು

ಜಾಹೀರಾತು

  ಗಂಗಾವತಿ: ಆಧುನಿಕತೆ ಬೆಳೆದಂತೆ ಸಮಾಜವು ಸಹ ತಪ್ಪು ದಾರಿಯ ಕಡೆಗೆ ಸಾಗುತ್ತಿದೆ. ಹಾಗಾಗಿ ಸಾಹಿತಿಗಳನ್ನು ಬರವಣಿಗೆಯ ಮೂಲಕ ಅವರನ್ನು ಎಚ್ಚರಿಸುವ ಕೆಲಸ ಸಾಹಿತಿಗಳು ಮಾಡಬೇಕಾಗಿದೆ ಎಂದು ಮಾಜಿ ಸಚಿವರಾದ ಮಲ್ಲಿಕಾಜು೯ನ ನಾಗಪ್ಪ ಹೇಳಿದರು.

ನಗರದ ಭಾರತೀಯ ವೈದ್ಯಕೀಯ ಸಂಘದ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಚಂದ್ರಕ್ಕನ ವಚನಗಳು,ಮತ್ತು ಹಾಡೊಂದು ನಾ ಹಾಡುವೆನು ಎನ್ನುವ
ಪುಸ್ತಕಗಳ ಲೋಕಾಪ೯ಣೆ ಹಾಗೂ ಮಹಿಳಾ ಕವಿಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಂಘವು ಸುಮಾರು 9 ವಷ೯ಗಳಿಂದ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಕೊಂಡು ಬಂದಿದೆ. ಆಗಿನಿಂದ ಇಲ್ಲಿಯವರೆಗೆ ಸಾಕಷ್ಟು ಕವಿಗೋಷ್ಠಿಗಳನ್ನು ನಡೆಸುವ ಮೂಲಕ ಯುವ ಕವಿಗಳಿಗೆ ವೇದಿಕೆ ಒದಗಿಸಿಕೊಟ್ಟಿದೆ. ಯುವ ಕವಿಗಳು ಹೊಸ ಆಲೋಚನೆಯಲ್ಲಿ ಕಾವ್ಯ, ಕವನಗಳನ್ನು ರಚನೆ ಮಾಡುವ ಮೂಲಕ ತಪ್ಪು ದಾರಿಯ ಕಡೆಗೆ ನಡೆಯುವ ಸಮಾಜವನ್ನು ಸರಿ ದಾರಿಗೆ ತರಬೇಕಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ಯಾವಾಗಲೂ ಸಮಾಜದ ಚಿಂಥನೆಯಲ್ಲಿ ಇರುತ್ತಾರೆ. ಅವರ ಬರವಣಿಗೆ ಸಾಕಷ್ಟು ಬಲಿಷ್ಠವಾಗಿರಬೇಕು. ಅಂದಾಗ ಮಾತ್ರ ಅದಕ್ಕೆ ಮೌಲ್ಯ ಹೆಚ್ಚಾಗುತ್ತದೆ ಎಂದು ಹೇಳಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಸ್ವಾಮೀಜಿ ಮಾತನಾಡಿ, 12ನೆಯ ಶತಮಾನದಿಂದಲೂ ಮಹಿಳೆಯವರು ವಚನ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಸಂಸಾರ, ಕೆಲಸದ ಒತ್ತಡದಲ್ಲೂ ಕಾವ್ಯಗಳ ರಚನೆಯಲ್ಲಿ ಆಸಕ್ತಿ ವಹಿಸಿದ್ದು, ಸಂತಸದ ವಿಷಯವಾಗಿದೆ. ಮಹಿಳೆಯರು ಅಕ್ಷರಸ್ಥರು ಆದರೆ ಮಾತ್ರ ಸಮಾಜ ಶಿಕ್ಷಣವಂತರ ಸಮಾಜ ಆಗಲೂ ಸಾಧ್ಯವಾಗುತ್ತದೆ ಎಂದು ಹೇಳಿದರು. ನಂತರ ಚಂದ್ರಕಲಾ ಜಂಬಣ್ಣ ಐಲಿ ಅವರು ರಚನೆ ಮಾಡಿದ ಚಂದ್ರಕ್ಕನ ವಚನಗಳು, ಹಾಡೊಂದು ನಾ ಹಾಡುವೆನು ಎನ್ನುವ ಪುಸ್ತಕಗಳ ಲೋಕಾಪ೯ಣೆ ಮಾಡಲಾಯಿತು.
ಎರಡು ಕೃತಿಗಳ ಕುರಿತು,ಸಮಕಾಲೀನ ಕನ್ನಡ ವಚನ,ಕಾವ್ಯದ ಬಗ್ಗೆ ಮಿಶ್ರ ಭಾವನೆಗಳಿವೆ.ಒಂದು ತುದಿಯಲ್ಲಿ ಅತ್ಯಂತ ಅದ್ಭುತವಾಗಿ ಬರೆಯುವ ಯುವ ಕವಿ,ಕವಯಿತ್ರಿಯರಿದ್ದರೆ,ಮತ್ತೊಂದು ತುದಿಯಲ್ಲಿ ಸಾಧಾರಣ ಬರೆಯುವವರಿದ್ದಾರೆ.ಆದರೆ ಗ್ರಾಮೀಣ ಭಾಗದ ನಿಲುವು ಮೀರಿ ಬರೆದಿರುವ ಚಂದ್ರಕಲಾ ಐಲಿಯವರ ಎರಡೂ ಕೃತಿಗಳು ಓದಲು ಬಹು ಅರ್ಥಪೂರ್ಣವಾಗಿವೆ ಎಂದು ಜ್ಞಾನ ಸಿರಿ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ್ ಬಿ.ಡಂಕನಕಲ್ ಅವರು ವಿಮರ್ಶೆಯ ಮಾತು ಕತೆಯನ್ನಾಡಿದರು.

ಕಾರಟಗಿಯ ತಲೇಖಾನ ಹಿರೇಮಠದ ಶ್ರೀಗಳಾದ ವೀರಭದ್ರ ಶರಣರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಅಧ್ಯಕ್ಷರಾದ ಶರಣಪ್ಪ ತಳ್ಳಿ ಕುಪ್ಪಿಗುಡ್ಡ,ಇವರು ಆಯಾ ಕಾಲದ ಅನುಭವಗಳು ಎಲ್ಲಾ ಕಾಲಕ್ಕೂ ಸಲ್ಲುತ್ತವೆ.ಬರೆದಿಡಬಹುದಾದಂತಹ ಅನುಭವಗಳು ಮಾತ್ರ ಎಲ್ಲಾ ಕಾಲಘಟ್ಟಕ್ಕೂ ಕಾಡುತ್ತವೆ ಎಂದು ಅಧ್ಯಕ್ಷತೆವಹಿಸಿ ಅಭಿಪ್ರಾಯಪಟ್ಟರು. ಕಾಯ೯ದಶಿ೯ ಯಲ್ಲಪ್ಪ ಪ್ರಾಂತ ಕಾಯ೯ಕಾರಣಿ ಸದಸ್ಯ ಅಶೋಕ ಕುಮಾರ ರಾಯ್ಕರ್, ಬಳ್ಳಾರಿ ವಿಭಾಗೀಯ ಸಂಚಾಲಕ ಟಿ. ಶ್ರೀಧರ , ಭಾರತ ವಿಕಾಸ್ ಪರಿಷದ್ ಅಧ್ಯಕ್ಷ ಜಂಬಣ್ಣ ಐಲಿ, ಡಾ. ಈಶ್ವರ ಸವಡಿ, ಡಾ.ಶಿವಕುಮಾರ ಮಾಲಿಪಾಟೀಲ್, ಡಾ. ಸ್ಮೀತಾ , ಬಸವರಾಜ ಬಿ.ಡಂಕನಕಲ್, ಮಾಲಾ ಶ್ರೀಧರ, ವಿಜಯಲಕ್ಷ್ಮಿ ಕಲಾಲ್, ತಾರಾ ಸಂತೋಷ ಮೇರವಾಡೆ ಹಾಗೂ ಇತರರಿದ್ದರು.

ಗಂಗಾವತಿಯ ಐಎಂಎ ಹಾಲ್ ನಲ್ಲಿ ಚಂದ್ರಕ್ಕನ ವಚನಗಳು, ಹಾಡೊಂದು ನಾ ಹಾಡುವೆನು ಎನ್ನುವ
ಪುಸ್ತಕಗಳ ಲೋಕಾಪ೯ಣೆ ಮಾಡಲಾಯಿತು.

Leave a Reply

Your email address will not be published. Required fields are marked *