ಕಾರ್ಖಾನೆ ಭಾದಿತ ಪ್ರದೇಶದ ಮಹಿಳೆಯರ ರಕ್ಷಣೆಗೆ ಜ್ಯೋತಿ ಮನವಿ

screenshot 2026 02 05 19 54 29 28 e307a3f9df9f380ebaf106e1dc980bb6.jpg

ಕಾರ್ಖಾನೆ ಭಾದಿತ ಪ್ರದೇಶದ ಮಹಿಳೆಯರ
ರಕ್ಷಣೆಗೆ ಜ್ಯೋತಿ ಮನವಿ

ಜಾಹೀರಾತು
Jyoti appeals for protection of women in factory-affected areas

ಕೊಪ್ಪಳ: ನಗರಕ್ಕೆ ಸಮೀಪದಲ್ಲಿಯೇ ಇರುವ ಬಲ್ದೋಟಕಾರ್ಖಾನೆ ವಿಸ್ತರಣೆಯಿಂದ ಉಂಟಾಗುವ ಭಯಾನಕಸಮಸ್ಯೆಗಳು ಅದರ ಜೊತೆಗೆ ಈಗಾಗಲೇ ಇರುವಕಿರ್ಲೋಸ್ಕರ್, ಕಲ್ಯಾಣಿ,ಮುಕುಂದಸುಮಿ,ವನ್ಯಾ,ಭದ್ರಾಮುಂತಾದ ಕಾರ್ಖಾನೆಗಳ ಬಾಧಿತ ಪ್ರದೇಶದ ಮಹಿಳೆಯರ
ಮತ್ತು ಯುವತಿಯರ ಆರೋಗ್ಯ ಮತ್ತು ಜೀವ ರಕ್ಷಣೆಗೆಮುಂದಾಗಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷರಿಗೆಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳಮನವಿ ಮಾಡಿದರು.
ಅವರು ಜಿಲ್ಲೆಯ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿರುವಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದ್ರಿ
ಅವರನ್ನು ನಗರದಲ್ಲಿ ಭೇಟಿಯಾಗಿ ಅಂಬೇಡ್ಕರ್ ಕೃತಿ ನೀಡಿ ಗೌರವಿಸಿಮಹಿಳಾ ಆಯೋಗ ಮಾಡುತ್ತಿರುವ ಕಾರ್ಯವನ್ನು ಶ್ಲಾಗಿಸಿ
ಮನವಿ ಪತ್ರವನ್ನು ಅರ್ಪಿಸಿದರು. ನಗರದಲ್ಲಿರುವ ಹಕ್ಕಿಪಿಕ್ಕಿಸಮುದಾಯ ಹಾಗೂ ಕುಂಚಿ ಕೊರವರ ಸಮುದಾಯಗಳಿಗೆಮೂಲಭೂತ ಸೌಕರ್ಯವನ್ನು ಒದಗಿಸಿ ಸಹಜ ಜೀವನಕ್ಕೆನೆರವಾಗುವಂತೆ ಕೋರಿದರು. ಜಿಲ್ಲೆಯ ಸರಕಾರಿ ಅರೆ ಸರಕಾರಿನೌಕರರು ಉತ್ತಮವಾದ ಕೆಲಸದ ಪರಿಸರ ಖಾತ್ರಿಪಡಿಸುವಂತೆವಿನಂತಿಸಿದರು. ಅಲ್ಲದೆ ಜಿಲ್ಲೆಯ ಮಹಿಳಾ ಹಾಸ್ಟೆಲ್ ಹಾಗೂನೌಕರಸ್ಥ ಮಹಿಳೆಯರ ಹಾಸ್ಟೆಲ್ ಗಳಲ್ಲಿ ಇನ್ನಷ್ಟು ಹೆಚ್ಚಿನಸೌಕರ್ಯಗಳು ದೊರಕುವಂತೆ ಮಾಡಲು ವಿನಂತಿಸಿದರು. ಈ
ಸಂದರ್ಭದಲ್ಲಿ ಡಿಸಿಸಿ ಸದಸ್ಯ ಸುಮಂಗಲ ನಾಯಕ್ ಇತರರುಇದ್ದರು.

Leave a Reply

Your email address will not be published. Required fields are marked *