ಒಂದು ಧರಣಿ ಸುಧೀರ್ಘವಾಗಿ ನಿಂತಿದ್ದೇ ತೀವ್ರಕ್ಕೆಸಾಕ್ಷಿ : ಎ. ಮುರಿಗೆಪ್ಪ

screenshot 2026 02 05 19 29 49 80 e307a3f9df9f380ebaf106e1dc980bb6.jpg

ಒಂದು ಧರಣಿ ಸುಧೀರ್ಘವಾಗಿ ನಿಂತಿದ್ದೇ ತೀವ್ರಕ್ಕೆಸಾಕ್ಷಿ : ಎ. ಮುರಿಗೆಪ್ಪ

ಜಾಹೀರಾತು
A long-standing protest is a testament to the severity of the situation: A. Murigappa

ಕೊಪ್ಪಳ: ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಅವರು ಇಲ್ಲಿನ ನಗರಸಭೆ ಮುಂದುಗಡೆ ೯೮ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ
ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದನಡೆಯುತ್ತಿರುವ ಬಲ್ಡೋಟ ಹಠಾವೋ ಧರಣಿಗೆ ಬೆಂಬಲಿಸಿ
ಮಾತನಾಡಿ, ಇಲ್ಲಿ ನಿರಂತರ ಮಾಸ್ಕ್ ಹಾಕಿಕೊಳ್ಳುವ ಪರಿಸ್ಥಿತಿಬರಬಾರದು ಎಂದರೆ ಅಗತ್ಯ ಮೀರಿ ಇರುವ ಕಾರ್ಖಾನೆಗಳು ಬಂದ್
ಆಗಲೇಬೇಕು, ಇಲ್ಲಿ ಬಲ್ಡೋಟ ಕಾರ್ಖಾನೆ ಬಂದು ೨೭ ಹೊಗೆಕೊಳವೆಗಳು ಬಂದರೆ ಆ ವಿಷಾನಿಲ ಬದುಕು ಹಾಳುಮಾಡುತ್ತದೆ. ಬದುಕನ್ನು ಬಣ್ಣಗೆಡಿಸುವ ಕೆಲಸ ನಡೆಯುತ್ತಿದೆ.
ನಾವು ಕಾರ್ಖಾನೆಗಳ ವಿರೋಧಿಗಳಲ್ಲ. ಆರೋಗ್ಯ, ಜೀವತೆಗೆಯುವ ಯಾವ ಕಾರ್ಖಾನೆಗಳು ಬೇಡ. ಪರಿಸರ ಸರ್ವೆಆಗಬೇಕು.

ಬಸಾಪುರಕೆರೆಜನಜಾನುವಾರುನೀರುಕುಡಿಯಲುಮುಕ್ತಗೊಳಿಸಬೇಕು.
ಹೋರಾಟಕ್ಕೆ ಸಹಮತವಿದೆ. ಮುಖ್ಯಮಂತ್ರಿಗಳು ಬೇಗಸ್ಪಂದಿಸಲಿ. ನಾನೂ ಕೂಡ ಸರ್ಕಾರಕ್ಕೆ ಪತ್ರ ಬರೆದು ಅಥವಾ ನೇರ
ಭೇಟಿ ಮಾಡಿ ಬಲ್ಡೋಟ ನಿಲ್ಲಿಸಿ ಎಂದು ಕೇಳುತ್ತೇನೆ ಎಂದರು.
ಇದೇ ದಿನಾಂಕ: ೦೭.೦೨.೨೦೨೬ರ ಶನಿವಾರ ಬೆಳಿಗ್ಗೆ ೯ ಗಂಟೆಗೆ
ನಗರ ಸಭೆಯ ಧರಣಿ ಸ್ಥಳದಲ್ಲಿ ಶ್ರೀಗವಿಮಠದಿಂದ
ಉಪಹಾರ ವ್ಯವಸ್ಥೆ ಮಾಡುತ್ತದೆ. ಬೆ. ೧೦ ಗಂಟೆಗೆ ಸರಿಯಾಗಿ
ಸಾಣೆಹಳ್ಳಿ ಶ್ರೀಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ
ಸ್ವಾಮಿಗಳು ಬಾಧಿತ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ,
ಹಾಲವರ್ತಿ ಜನರನ್ನು ಭೇಟಿ ಮಾಡಿ ೧೧ ಗಂ. ವೇದಿಕೆಯ
ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ
ರಂಜಾನ್ ದರ್ಗಾ, ಸೂರ್ಯಕಾಂತ ಗುಣಕಿಮಠ ಇಸ್ಲಾಂ ದರ್ಗಾ ಹಳ್ಳಿ
ಭೇಟಿ ಮಾಡುತ್ತಾರೆ. ಗದುಗಿನ ತೊeoಟದ ಶ್ರೀ ಸಿದ್ಧರಾಮ
ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ ಸ್ವಾಮಿಗಳು
ದದೇಗಲ್, ಹಿರೇಸಿಂದೋಗಿ, ಇಟಗಿ ಸ್ವಾಮಿಗಳು ಆಗಮಿಸುತ್ತಾರೆ. ಬೆ.
೧೧ ಗಂ. ಪ್ರತಿಭಟನೆ ಸಮಾವೇಶ ಆರಂಭವಾಗುತ್ತದೆ. ಸರ್ವ
ಜನರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು,
ಇದುವರೆಗೆ ಬೆಂಬಲಿಸಿ ಹೋರಾಡಿದ ಸಂಘ, ಸಂಸ್ಥೆಯ
ಪ್ರಮುಖರು, ಸರ್ವಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಲು
ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು,
ಚಂದ್ರಶೇಖರ ಕವಲೂರು, ಎಂ.ಎA.ಮದರಿ, ಮಲ್ಲಿಕಾರ್ಜುನ
ಬಿ.ಗೋನಾಳ, ಶಿವಕುಮಾರ ಕುಕನೂರು, ಮಂಜುನಾಥ ಜಿ
ಗೊಂಡಬಾಳ, ರಮೇಶ ತುಪ್ಪದ, ಶರಣು ಗಡ್ಡಿ, ಸಂತೋಷ
ದೇಶಪಾಂಡೆ, ಶರಣು ಶೆಟ್ಟರ್, ಕಾಶಪ್ಪ ಚಲವಾದಿ, ಬಿ.ಜಿ.ಕರಿಗಾರ,
ಸಿ.ಬಿ.ಪಾಟೀಲ್, ಜಿ.ಬಿ.ಪಾಟೀಲ್, ಗಂಗಾಧರ ಖಾನಾಪೂರ, ಜ್ಯೋತಿ
ಗೊಂಡಬಾಳ, ಮಂಜುನಾಥ ಅಂಗಡಿ, ಪುಷ್ಪಲತಾ ಏಳುಭಾವಿ, ಶರಣು

ಡೊಳ್ಳಿನ, ಜಿ.ಎಸ್.ಕಡೇಮನಿ, ಮಹಾದೇಪಪ್ಪ ಮಾವಿನಮಾಡು,
ಕರಿಗಾರ, ಎಸ್.ಬಿ.ರಾಜೂರು, ಶಿವಪ್ಪ ಜಲ್ಲಿ, ಮೂಕಪ್ಪ ಮೇಸ್ತ್ರಿ
ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಬಸವರಾಜ
ನರೇಗಲ್, ರಾಜಶೇಖರ ಏಳುಬಾವಿ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್
ಇಟ್ನಾಳ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ವರ್ಣಿತ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಿಸಿದ್ದಿ
ಅವರು ಧರಣಿ ಸ್ಥಳಕ್ಕೆ ಆಗಮಿಸಿ ತಾವು ಇದುವರೆಗೂ ಕಾರ್ಖಾನೆ
ಕುರಿತಾಗಿ ಮಾಡಿದ ವಿಷಯಗಳನ್ನು, ಸರಕಾರದ ಗಮನಕ್ಕೆ
ತಂದ ಮಾಹಿತಿ ಪ್ರಸ್ತಾಪಿಸಿದರು. ಧರಣಿ ನಿರತರೂ ಸಹ ಅನೇಕ
ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೊಮ್ಮೆ ಒತ್ತಾಯಿಸಿದರು.
ಜಿಲ್ಲಾಡಳಿತ ಧರಣಿ ವೇದಿಕೆಗೆ ಬಂದು ಬಲ್ಡೋಟ
ಒಳಗೊಂಡು ಎಲ್ಲಾ ಕಾರ್ಖಾನೆ ಬಾಧಿತ ಹಳ್ಳಿಯಲ್ಲಿ ಎ.ಐ.ಐ.ಎಂ.ಎಸ್ ನಿಂದ
ಆರೋಗ್ಯ ಸರ್ವೆಗೆ ಸರಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ.
ಬಸಾಪುರ ಕೆರೆ ವಿಷಯದಲ್ಲಿ ಕಾನೂನು ತಜ್ಞರು ಸಲಹೆ
ನೀಡಬೇಕು, ೨ ಎಕರೆ ಕೆರೆ ಬಲ್ಡೋಟ ಕಾರ್ಖಾನೆ ರಸ್ತೆಗೆ
ಬಳಸಿದ್ದಾರೆ ಎಂದು ಸರ್ವೆಯಿಂದ ಗುರ್ತಿಸಿದಾಗ ಇಲ್ಲಿ ಕೆರೆ ಇರಲಿಲ್ಲ
ಎಂದು ಕಾರ್ಖಾನೆ ಉತ್ತರ ಕೊಟ್ಟಿದೆ. ಇದನ್ನು ನಾವು ಸರ್ಕಾರದ
ಗಮನಕ್ಕೆ ತಂದಿದ್ದೇವೆ ಎಂದಾಗ ಆಕ್ಷೇಪ ವ್ಯಕ್ತಪಡಿಸಿದ
ಅಲ್ಲಮಪ್ರಭು ಬೆಟ್ಟದೂರು ಅವರು ಕೆರೆ ಸರ್ಕಾರ ಮಾರಾಟ
ಮಾಡಲು ಬರುವುದಿಲ್ಲ. ಅದು ಗ್ರಾಮದ ಸಮುದಾಯದ ಆಸ್ತಿ
ನೀವೇಕೆ ಮಾರಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಅವರು
ಉತ್ತರ ಕೊಡುವಲ್ಲಿ ವಿಫಲರಾದರು.

Leave a Reply

Your email address will not be published. Required fields are marked *