
ಗಂಗಾವತಿಯ ಜೈಭೀಮ್ ನಿವಾಸಿಗಳಿಗೆ
ಹಕ್ಕುಪತ್ರಗಳ ವಿತರಣೆಎಫ್.ರಾಘವೇಂದ್ರ ಪರಿಶ್ರಮಕ್ಕೆ ಸ್ವಾಗತ:ಭಾರಧ್ವಾಜ್

Distribution of rights to residents of Jaibhim, Gangavathi: F. Raghavendra welcomes efforts: Bhardwaj
ಗಂಗಾವತಿ: ಕಳೆದ ೨೫-೩೦ ವರ್ಷಗಳಿಂದ ಗಂಗಾವತಿ ನಗರದಜೈಭೀಮ್ನಗರದ ನಿವಾಸಿಗಳು ಯಾವುದೇ ಹಕ್ಕುಪತ್ರವಿಲ್ಲದೇ
ಮೂಲಸೌಕರ್ಯಗಳಿಲ್ಲದೇ ನಿರ್ಲಕ್ಷö್ಯಕ್ಕೆ ಒಳಗಾಗಿದ್ದರು. ಈನಿವಾಸಿಗಳ ಗೋಳು ಮುಗಿಲುಮುಟ್ಟಿತ್ತು. ಅವರ ಪರವಾಗಿ
ಕ್ರಾಂತಿಚಕ್ರ ಬಳಗ ಸಂಘಟನೆಯು ವಿವಿಧ ಸಂಘಟನೆಗಳೊಂದಿಗೆಹಾಗೂ ಕೆಲವು ದಲಿತ ಮುಖಂಡರೊAದಿಗೆ ಈ ಹಿಂದೆಯೇ ಹೋರಾಟ
ಮಾಡಿತ್ತು. ಆದರೆ ಈಗಿನ ನಗರಸಭೆ ಸದಸ್ಯ ಎಫ್.
ರಾಘವೇಂದ್ರರವರ ಹೋರಾಟದ ಪರಿಶ್ರಮ ಜೈಭೀಮ್ನಿವಾಸಿಗಳಿಗೆನ್ಯಾಯಒದಗಿಸಿದಂತಾಗಿದೆ. ಎಫ್. ರಾಘವೇಂದ್ರರವರ ಪ್ರಾಮಾಣಿಕ
ಹೋರಾಟಕ್ಕೆ ಜಯ ಸಿಕ್ಕಿರುವುದು ಅತೀವ ಸಂತಸ ತಂದಿದೆ ಎಂದುಕ್ರಾಂತಿ ಚಕ್ರ ಬಳಗದ ಅಧ್ಯಕ್ಷರಾದ ಭಾರಧ್ವಾಜ್ ಹರ್ಷವ್ಯಕ್ತಪಡಿಸಿದರು.

ಅವರು ಇಂದು ತಮ್ಮ ಕ್ರಾಂತಿಚಕ್ರ ಬಳಗ ಕಾರ್ಯಾಲಯದಆವರಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದರು. ಎಫ್.ರಾಘವೇಂದ್ರರವರು ಉತ್ತಮ ಜನನಾಯಕನಾಗಿದ್ದು, ಜೈಭೀಮ್
ನಗರದ ನಿವಾಸಿಗಳ ಪರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿಮುಖ್ಯಮಂತ್ರಿಗಳು ಹಾಗೂ ಸಂಬAಧಪಟ್ಟ ಸಚಿವರ ಜೊತೆ
ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಅಧಿಕಾರಿಗಳ ಸಹಕಾರದಿಂದ ಈ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವಲ್ಲಿ
ಯಶಸ್ವಿಯಾಗಿದ್ದಾರೆ. ಮುಂಬರುವ ನಗರಸಭೆ
ಚುನಾವಣೆಯಲ್ಲಿಯೂ ಜನರು ಅವರನ್ನು ಬೆಂಬಲಿಸುವಂತೆ ಕರೆನೀಡಿದರು.
ಮುಂದಿನ ಅವಧಿಯಲ್ಲಿಯೂ ಎಫ್. ರಾಘವೇಂದ್ರ ಅವರುಸಾರ್ವಜನಿಕರ ಪರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಗಂಗಾವತಿನಗರಕ್ಕೆ ಮಾದರಿ ನಗರಸಭಾ ಸದಸ್ಯರಾಗಲಿ, ಅವರ ರಾಜಕೀಯ
ಭವಿಷ್ಯ ಉಜ್ವಲವಾಗಿ ಬೆಳೆಯಲಿ ಎಂದು ಆಶಿಸಿದರು.




