ಬಿಸಿ ನೀರನ್ನು ಕುಡಿಯುವವರಿಗೆ ಈ ಅನಾರೋಗ್ಯದ ಸಮಸ್ಸೆ ಕಟ್ಟಿಟ್ಟ ಬುತ್ತಿ!
This health problem is bound to happen to those who drink hot water!

ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆದು ಒಂದು ಲೋಟ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಅನೇಕರಿಗೆ ಇದೆ. ಇದು ಒಳ್ಳೆದು ಎಂದು ನಮ್ಮ ಹಿರಿಯರಿಂದ ಕೇಳಿಕೊಂಡು ಬಂದಿದ್ದೇವೆ. ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುತ್ತವೆ. ಬೆಳಗ್ಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅದು ದೇಹದ ಒಳಗಿನ ಕ್ರಿಯೆಗಳನ್ನು ನಮಗೆ ತಿಳಿಯದಂತೆ ಗುಣಪಡಿಸುತ್ತದೆ. ಪಚನ ಕ್ರಿಯೆ ಹೆಚ್ಚಿಸುತ್ತದೆ, ಜೀರ್ಣಶಕ್ತಿಯನ್ನು ಬಲಗೊಳಿಸುತ್ತದೆ.
ಬೆಚ್ಚಗಿನ ನೀರು ಕರುಳನ್ನು ಬಿಗಿಗೊಳಿಸುತ್ತದೆ ಮತ್ತು ಪಚನ ಕ್ರಿಯೆಯು ದೇಹದಲ್ಲಿರುವ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಇದು ಪ್ರಯೋಜನಗಳಾದರೆ ಇದರಿಂದ ಸಮಸ್ಯೆಗಳು ಕೂಡ ಇದೆ. ಹೌದು, ತೀವ್ರವಾದ ಬಿಸಿ ನೀರು ಕುಡಿಯುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಸಂಭವಿಸುತ್ತದೆ.
ಆದರೆ ಇದರ ಸಮಸ್ಯೆ ಕೇವಲ ಶೇ.1ರಷ್ಟು ಮಾತ್ರ. ಬಿಸಿ ನೀರು ಕುಡಿಯುವುದರಿಂದ ಪ್ರಯೋಜನವೇ ಜಾಸ್ತಿ. ಹಾಗಾದ್ರೆ ಬಿಸಿ ನೀರು ಕುಡಿಯುದರಿಂದ ಆಗುವ ಆರೋಗ್ಯದ ಪ್ರಯೋಜನಗಳೇನು? ಬಿಸಿ ನೀರು ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು? ಈ ಬಗ್ಗೆ ವೈದ್ಯರುಗಳು ಹೇಳುವುದೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಬಿಸಿ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳು ಇಲ್ಲಿವೆ-ಬಿಸಿ ನೀರು ಕುಡಿದಾರೆ ನೂರಾರು ಆರೋಗ್ಯ ಪ್ರಯೋಜನಗಳು ನಮಗೆ ಸಿಗುತ್ತದೆ. ಹಾಗಾದರೆ ಅವುಗಳು ಯಾವುವು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
1.ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ–ಬಿಸಿನೀರು ಜೀರ್ಣಾಂಗವನ್ನು ಸುಗಮಗೊಳಿಸುತ್ತದೆ ಮತ್ತು ಅದನ್ನು ಸಕ್ರಿಯಗೊಳಿಸುತ್ತದೆ. ತಣ್ಣೀರಿಗೆ ಹೋಲಿಸಿದರೆ ಬಿಸಿನೀರು ಆಹಾರವನ್ನು ಬ್ರೇಕ್ ಮಾಡಲು೯ಒಡೆಯಲು) ಸಹಾಯ ಮಾಡುತ್ತದೆ ಈ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ ಬಿಸಿನೀರು ಕರುಳಿನ ಚಲನೆಯನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ!
2.ನೀವು ಗಮನಿಸಿರಬಹುದು ಬಿಸಿ ನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ ಮತ್ತು ಬೆವರುವಿಕೆ ಉಂಟಾಗುತ್ತದೆ. ಈ ರೀತಿಯ ಪ್ರಕ್ರಿಯೆಯಿಂದ ಇದು ದೇಹದಲ್ಲಿರುವ ಟಾಕ್ಸಿನ್ಗಳನ್ನು ಅಥವಾ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗೆ ಹಾಕುತ್ತದೆ. ಉದಾಹರಣೆಗೆ ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ಬೆಚ್ಚಗಿನ ನೀರನ್ನು ಕುಡಿದರೆ ನಿಮ್ಮ ಶೀತ, ಕೆಮ್ಮು ಕಡಿಮೆ ಆಗುತ್ತದೆ. ಅಂದರೆ ನಮ್ಮ ದೇಹದಲ್ಲಿದ್ದ ರೋಗವನ್ನು ಬಿಸಿ ನೀರು ಹೊರಗೆ ಹಾಕುವುದಾಗಿದೆ.
3.ಚರ್ಮದ ರಕ್ಷಣೆ ಮಾಡುತ್ತೆ!
ನಿಮಗೆ ಈ ವಿಚಾರ ಆಶ್ಚರ್ಯವಾಗಿರಬಹುದು ಆದರೆ ಇದು ಸತ್ಯ. ಬಿಸಿನೀರು ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಇದರಿಂದ ನಿಮ್ಮ ಚರ್ಮವು ಹೆಚ್ಚು ಎಲಾಸ್ಟಿಕ್ ಆಗಿರುತ್ತದೆ ಮತ್ತು ಅಪಾಯಕಾರಿ ಸ್ವತಂತ್ರ ರಾಡಿಕಲ್ಗಳ ಅಭಿವೃದ್ಧಿಪಡಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಇದರಿಂದಾಗಿ ನಿಮ್ಮ ಚರ್ಮ ತುಂಬಾನೇ ಸ್ಮೂಥ್ ಆಗುತ್ತದೆ. ಜೊತೆಗೆ ನೀಮಗೆ ವಯಸ್ಸಾದರೂ ತುಂಬಾನೇ ಯಂಗ್ ಆಗಿ ಕಾಣಿಸುತ್ತೀರಿ. ಬಿಸಿ ನೀರು ಕುಡಿಯುವುದರಿಂದ ಯುವತ್ವ ಕಾಪಾಡಿಕೊಳ್ಳುತ್ತೀರಿ.
4.ತೂಕ ಇಳಿಸಲು ಸಹಾಯಕಾರಿ
ಬಿಸಿ ನೀರು ನೀವು ದಿನನಿತ್ಯ ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಬಹಳ ಸಹಾಯ ಮಾಡುತ್ತದೆ. ಬಿಸಿ ನೀರು ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಅದರ ಪಚನ ಕ್ರಿಯೆ ಸುಧಾರಿಸುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
5.ಅಲರ್ಜಿಗಳ ವಿರುದ್ಧ ಹೋರಾಡುತ್ತದೆ!
ಶೀತ ಮತ್ತು ಮೂಗಿನ ಅಲರ್ಜಿಯಿಂದ ಉಂಟಾಗುವ ಸೈನಸ್ಗಳ ಮೇಲಿನ ಒತ್ತಡವನ್ನು ಬಿಸಿನೀರು ನಿವಾರಿಸುತ್ತದೆ. ಬಿಸಿ ನೀರು ಕುಡಿಯುವುದರಿಂದ ಈ ಒತ್ತಡ ನಿವಾರಣೆಯಾಗುತ್ತದೆ. ಬಿಸಿ ನೀರಿನಿಂದ ಸೈನಸ್ಗಳು ಮುಚ್ಚುತ್ತದೆ ಮತ್ತು ಮೂಗಿನ ಲೋಳೆಯನ್ನು ತ್ವರಿತವಾಗಿ ಚಲಿಸಲು ಸಹಾಯ ಮಾಡುತ್ತದೆ. ಪ್ರಮುಖವಾಗಿ ಅಲರ್ಜಿಗಳನ್ನು ಬಿಸಿ ನೀರು ದೂರ ಮಾಡುತ್ತದೆ.
6.ತಲೆ ನೋವಿಗೆ ಪರಿಹಾರ!
ಬಿಸಿ ನೀರು ಕುಡಿಯುವುದರಿಂದ ನಿಮಗಿರುವ ಮೈಗ್ರೇನ್ ಮತ್ತು ಇತರೆ ರೀತಿಯ ತಲೆನೋವು, ಮುಟ್ಟಿನ ಸಮಯದಲ್ಲಿ ಆಗುವಂತಹ ನೋವುಗಳಿಂದ ತಕ್ಷಣ ಪರಿಹಾರ ಸಿಗುತ್ತದೆ. ಬಿಸಿ ನೀರು ಚರ್ಮಕ್ಕೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನಿಮ್ಮ ದೇಹದ ಚರ್ಮವನ್ನು ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ.
7.ರಕ್ತ ಪರಿಚಲನೆ ಸುಧಾರಿಸುತ್ತದೆ!
ಬಿಸಿ ನೀರು ಕುಡಿಯುವದರಿಂದ ಆರೋಗ್ಯಕರ ರಕ್ತ ಪರಿಚಲನೆಗೆ ಸಹಾಯಮಾಡುತ್ತದೆ. ಆರೋಗ್ಯಕರ ರಕ್ತದ ಹರಿವಿನಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಸ್ನಾಯುಗಳಲ್ಲಿರುವ ನೋವು ಕಡಿಮೆ ಆಗುತ್ತದೆ.
8.ಮಲಬದ್ದತೆ ನಿವಾರಣೆ
ಬಿಸಿ ನೀರನ್ನು ನೀವು ದೀರ್ಘಕಾಲದವರೆಗೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆಗೆ ಸಹ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುವುದು. ಹೊಟ್ಟೆ ನೋವು ನಿವಾರಣೆಗೂ ಇದು ಉತ್ತಮವಾಗಿ ಕೆಲಸ ಮಾಡುತ್ತದೆ.
ಇನ್ನು ಬಿಸಿ ನೀರು ಕುಡಿದರೆ ಆಗುವಂತಹ ಆರೋಗ್ಯ ಸಮಸ್ಯೆಗಳು ಜಾಸ್ತಿ ಇಲ್ಲ. ಆದರೂ ಅದರ ಬಗ್ಗೆ ನೋಡೋಣಾ ಬನ್ನಿ.
ನೀವು ಕುಡಿಯುವ ನೀರು ಅತೀ ಬಿಸಿ ಇದ್ದರೆ ಅದು ನಿಮ್ಮ ನಾಲಿಗೆ ಮತ್ತು ಟೇಸ್ಟ್ ಬಡ್ಸ ಅನ್ನು ಸುಟ್ಟು ಹಾನಿಗೊಳಿಸುತ್ತದೆ
ಇನ್ನು ತೀವ್ರ ತರದ ಬಿಸಿ ನೀರು ಕುಡಿದರೆ ನಾಲಗೆ ಮಾತ್ರವಲ್ಲದೆ ಇದು ಅನ್ನನಾಳ ಮತ್ತು ಹೊಟ್ಟೆಯಂತಹ ಆಂತರಿಕ ಅಂಗಗಳಿಗೆ ಹಾನಿ ಉಂಟು ಮಾಡುತ್ತದೆ
ನೀವು ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ನಿಮ್ಮ ನಿದ್ರೆಯ ಚಕ್ರವನ್ನು ಅಸ್ತವ್ಯಸ್ತಗೊಳಿಸಬಹುದು ಅಂದರೆ ಬಿಸಿ ನೀರು ನಿಮಗೆ ನಿದ್ದೆ ಬರದಂತೆ ಮಾಡಬಹುದು





