
ಅತೀ ಸುದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ
ನಡೆಸಿ ಸಾಧನೆಗೈದ ಸಿದ್ಧರಾಮಯ್ಯನವರಿಗೆ
ಸೋಮನಾಥ ಪಟ್ಟಣಶೆಟ್ಟಿ ವಕೀಲರಿಂದ ಅಭಿನಂದನೆ

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆಸೋಮನಾಥ ಪಟ್ಟಣಶೆಟ್ಟಿ ವಕೀಲರಿಂದ ಅಭಿನಂದನೆ
Chief Minister Siddaramaiah congratulated by Somanath Pattanashetty lawyer

ಗಂಗಾವತಿ: ರಾಜ್ಯದಲ್ಲಿ ೬ನೇ ಜನವರಿ ೨೦೨೬ ಇಂದಿಗೆ ೦೭ ವರ್ಷ ೨೩೯ ದಿನ
ಮುಖ್ಯಮಂತ್ರಿಯಾಗಿ ಪೂರೈಸಿ, ಮಾಜಿ ಮುಖ್ಯಮಂತ್ರಿ ದೇವರಾಜ
ಅರಸು ಅವರನ್ನು ಸರಿಗಟ್ಟಿದ ಕೀರ್ತಿ ಮಾನ್ಯ
ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ ಎಂದು ಗಂಗಾವತಿ
ವೀರಶೈವ ಸಮಾಜದ ಹಾಗೂ ಕಾಂಗ್ರೆಸ್-ಐ ಮುಖಂಡರಾದ
ಸೋಮನಾಥ ಪಟ್ಟಣಶೆಟ್ಟಿ ವಕೀಲರು ಹರ್ಷ ವ್ಯಕ್ತಪಡಿಸಿದರು.
ಮಾನ್ಯ ಸಿದ್ಧರಾಮಯ್ಯನವರು ಪಂಚ ಗ್ಯಾರಂಟಿ
ಯೋಜನೆಗಳ ಮೂಲಕ ಮನೆಮಾತಾಗಿ ಕರ್ನಾಟಕದ ಜನಪ್ರಿಯ
ಮುಖ್ಯಮಂತ್ರಿಗಳಾಗಿದ್ದಾರೆ. ಅತಿ ಸುದೀರ್ಘಾವಧಿಗೆ
ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಸಾಧನೆಗೈದು,
ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅಂದರೆ ಅತಿ ಹೆಚ್ಚು
ಅವಧಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇತಿಹಾಸ
ಸೃಷ್ಟಿಸಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಅವರ
ಅಭಿಮಾನಿಯಾಗಿ ನನಗೆ ಬಹಳ ಸಂತೋಷವೆನಿಸುತ್ತದೆ. ಅಲ್ಲದೆ
ಮಾನ್ಯ ಸಿದ್ದರಾಮಯ್ಯನವರು ಇತಿಹಾಸದ ಪುಟಕ್ಕೆ ಹಿಂದೆಯೂ
ಸೇರಿದ್ದಾರೆ, ಮುಂದೆಯೂ ಸೇರುತ್ತಾರೆ. ಮುಂದಿನ ೨೮ನೇ ಮೇ-
೨೦೨೮ ರವರೆಗೂ ಪೂರ್ಣಾವಧಿಗೆ ರಾಜ್ಯದ
ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಸೋಮನಾಥ
ಪಟ್ಟಣಶೆಟ್ಟಿ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಮಾಹಿತಿಗಾಗಿ




