
A grand auspicious start for our hero's new Kannada film
ನಮ್ಮ ನಾಯಕ ಹೊಸ ಕನ್ನಡ ಚಲನಚಿತ್ರಕ್ಕೆಅದ್ದೂರಿ ಶುಭ ಮುಹೂರ್ತ


ಗಂಗಾವತಿ: ಬೆಳ್ಳಿ ಪರದೆಯ ಮೇಲೆ ಹೊಸ ಕನಸು, ಹೊಸ ಆಶಯ ಮತ್ತು
ಹೊಸ ಸಂಭ್ರಮವನ್ನು ಹೊತ್ತು ತರಲಿರುವ ಹೊಸ ಕನ್ನಡ ಚಲನಚಿತ್ರ
‘ನಮ್ಮ ನಾಯಕ’ ಚಿತ್ರದ ಮುಹೂರ್ತ ಸಮಾರಂಭವು ಇಂದು ಬೆಂಗಳೂರಿನ
ಬಸವೇಶ್ವರ ನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ
ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಚಿತ್ರರಂಗದ ಗಣ್ಯರು, ಕಲಾವಿದರು, ತಾಂತ್ರಿಕ ವರ್ಗದವರು ಹಾಗೂ ಆಹ್ವಾನಿತ
ಅತಿಥಿಗಳು ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಮುಹೂರ್ತಕ್ಕೆ ನಿರ್ಮಾಪಕರಾದ ಎ.ಎಂ ಬಾಬು ಕ್ಯಾಮರಾ ಚಾಲನೆ ನೀಡಿ,
ಕನ್ನಡ ಚಲನಚಿತ್ರ ನಟರಾದ ನವೀನ್ ಶಂಕರ್ ಕ್ಲಾಪ್ಸ್ ಮಾಡುವ ಮೂಲಕ
ಚಿತ್ರಕ್ಕೆ ಅಧಿಕೃತ ಚಾಲನೆ ದೊರಕಿತು. ಕ್ಯಾಮರಾ ಚಾಲನೆ ನೀಡುತ್ತಿದ್ದಂತೆ,
ಲೆನ್ಸ್ನೊಳಗೆ ಒಂದು ಕಥೆ ಉಸಿರಾಡತೊಡಗಿತು. ಕ್ಲಾಪ್ಸ್ನ ಒಂದೇ ಶಬ್ದದಲ್ಲಿ
ಸೃಜನಶೀಲತೆಯ ಪಯಣಕ್ಕೆ ಅಧಿಕೃತವಾಗಿ ಚಾಲನೆ ದೊರಕಿತು. ಆ ಕ್ಷಣದಲ್ಲಿ
ಕಲಾವಿದರ ಕಣ್ಣುಗಳಲ್ಲಿ ಭರವಸೆಯ ಬೆಳಕು ಮಿನುಗುತ್ತಿತ್ತು. ಈ
ಮೂಲಕ ಎಲ್ಲರೂ ಚಿತ್ರದ ಮೊದಲ ಹೆಜ್ಜೆಗೆ ಸಾಕ್ಷಿಯಾದರು. ಸಮಾರಂಭದ
ಪ್ರತಿಕ್ಷಣವೂ ಸಂಭ್ರಮ, ಭರವಸೆ ಮತ್ತು ಹೊಸ ಸೃಜನಶೀಲತೆಯ
ಕಿರಣಗಳಿಂದ ಕಂಗೊಳಿಸಿತು.
ಈ ಚಿತ್ರವನ್ನು ಮಲೈ ಮಹದೇಶ್ವರ ಎಂಟರ್ಪ್ರೆöÊಸಸ್ ಚಿತ್ರ ನಿರ್ಮಾಣ
ಸಂಸ್ಥೆಯ ನಿರ್ಮಾಪಕರು ಹಾಗೂ ಮೈಸೂರು ಕಾಂಗ್ರೆಸ್ ಮುಖಂಡರಾದ ಎ.ಎಂ
ಬಾಬು ಅವರು ನಿರ್ಮಿಸುತ್ತಿದ್ದು, ಮೂಲತಃ ಇಲಕಲ್ ನಗರದವರಾದ ಯುವ
ನಿರ್ದೇಶಕ ಅರ್.ಜೆ ಮಂಜುನಾಥ್ ಅವರು ಕಥೆ–ಸಂಭಾಷಣೆ–ಚಿತ್ರಕಥೆ–
ನಿರ್ದೇಶನದ ಈ ಚಿತ್ರ ಅವರ ಕನಸಿನ ಬೀಜ ಬಿತ್ತಿ ಕನಸಿನ ಕಲ್ಪನೆ ಮೂಲಕ ಇದು
ರೂಪ ಪಡೆಯುತ್ತಿದೆ. ಇದು ಕನ್ನಡ ಚಿತ್ರರಂಗದ ಆಕಾಶದಲ್ಲಿ
ಮತ್ತೊಂದು ಕನಸಿನ ನಕ್ಷತ್ರ ಮಿಂಚಲು ಸಜ್ಜಾಗಿದೆ ಎಂಬ೦ತೆ
ತೋರುತ್ತಿತ್ತು. ಈ ಚಿತ್ರದ ಟೈಟಲ್ ಟೀಸರ್ ಜನವರಿ-೧ ರಂದು ಹೊಸ ವರ್ಷದ
ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು.
ಅಸ್ಪೃಶ್ಯತೆಯ ವಿರುದ್ಧ ಹೋರಾಟದ ಬದುಕು ಹಾಗೂ ಭಾರತದ
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜೀವನಾಧಾರಿತ ಕಥೆಯ ಎಳೆಯನ್ನು
ಹೊಂದಿರುವ ಸಾಮಾಜಿಕ ಕಳಕಳಿಯ ಕಥೆಯಾಧಾರಿತ ಚಲನಚಿತ್ರ ಇದಾಗಿದ್ದು,
ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹಾಗೂ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಸಹ ನಿರ್ದೇಶಕ ನವೀನ್ ಕುಮಾರ ಆ್ಯಕ್ಷನ್ ಕಟ್ಗೆ ಸಾಥ್ ಕೊಡಲಿದ್ದು,
ಸಂಗೀತ ನಿರ್ದೇಶಕ ವಿಜಯ್ ಹರಿತ್ಸಾ ಅವರ ಸಂಗೀತ ಈ ಚಿತ್ರಕ್ಕೆ ಆತ್ಮವಾಗಲಿದೆ.
ಛಾಯಾಗ್ರಾಹಕ ಪವನ್ ಪಡಿಯಾರ್ ಅವರ ಕ್ಯಾಮರಾ ಕಣ್ಣಲ್ಲಿ ಕಥೆ
ಜೀವಂತವಾಗಲಿದೆ, ಅಪ್ಪು ವೆಂಕಟೇಶ ಅವರ ಸಾಹಸ ನಿರ್ದೇಶನ
ರೋಮಾಂಚನಗೊಳಿಸಲಿದೆ. ಆರ್.ಅನಿಲ್ ಕುಮಾರ ಕತ್ತರಿ ಪ್ರಯೋಗದ
ಸಂಕಲನದೊAದಿಗೆ ಈ ಚಿತ್ರದಲ್ಲಿ ಬಹುದೊಡ್ಡ ತಾರಗಣವಿದೆ.
ಕನ್ನಡ ಚಿತ್ರರಂಗದ ಹಿರಿಯ ಕಿರಿಯ ಕಲಾವಿದರು ಅಭಿನಯಿಸಲಿದ್ದು, ಈ
ಚಿತ್ರದಲ್ಲಿ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಬಾಲಕಲಾವಿದರಾದ ಮಾಸ್ಟರ್ ಸ್ವದೇಶ್,
ೆ Á À À ್ತ À À À É À Á É À À
ಲಿಖಿತ್, ಮೋಹಿತ್ ರಾಜ್ ಅಭಿನಯಿಸುತ್ತಿರುವುದು ವಿಶೇಷವಾಗಿದೆ.ಚಿತ್ರದ
ಚಿತ್ರೀಕರಣವು ಶೀಘ್ರದಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ
ಸುಂದರ ತಾಣಗಳಲ್ಲಿ ಆರಂಭವಾಗಲಿದ್ದು, ಸಮಯೋಚಿತವಾಗಿ ಚಿತ್ರವನ್ನು
ಪ್ರೇಕ್ಷಕರ ಮುಂದೆ ತರುವ ಉದ್ದೇಶವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಈ ಚಿತ್ರ ಕೇವಲ ಕಥೆಯಲ್ಲ, ಇದು ಬದುಕಿನ ಅನುಭವ. ಹೊಸ
ನಿರೀಕ್ಷೆಗಳೊಂದಿಗೆ ಆರಂಭಗೊAಡು ಹೊಸ ಕಥಾಹಂದರದೊAದಿಗೆ
ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ಸಂದೇಶ ನೀಡಲಿದೆ. ಪ್ರೇಕ್ಷಕರು
ತಮ್ಮದೇ ಕಥೆಯಂತೆ ಈ ಚಿತ್ರವನ್ನು ಅನುಭವಿಸುವರು ಎನ್ನುವ ವಿಶ್ವಾಸ
ಚಿತ್ರತಂಡಕ್ಕಿದೆ. ಒಟ್ಟಾರೆ ಇದು ಶುಭ ಮುಹೂರ್ತದೊಂದಿಗೆ ಆರಂಭವಾದ
ಹೊಸ ಕನ್ನಡ ಚಿತ್ರದ ಸೃಜನಯಾನ ಬೆಳ್ಳಿತೆರೆ ಎಂಬ ಕಲ್ಪವೃಕ್ಷದ ನೆರಳಲ್ಲಿ
ಮತ್ತೊಂದು ಕನಸು ಇಂದು ಮೊಳಕೆಯೊಡೆಯಿತು.
ಪ್ರಾರ್ಥನೆಯ ಮಂತ್ರನಾದ, ದೀಪದ ಜ್ಯೋತಿಯ ಮಿಂಚು ಮತ್ತು
ನಂಬಿಕೆಯ ನಗುಗಳ ನಡುವೆ ಹೊಸ ಕನ್ನಡ ಚಲನಚಿತ್ರ ‘ನಮ್ಮ
ನಾಯಕ’ ತನ್ನ ಸೃಜನಯಾನಕ್ಕೆ ಶುಭ ಮುಹೂರ್ತ ಪಡೆಯಿತು.
ಈ ಸಮಾರಂಭವು ಕೇವಲ ಕಾರ್ಯಕ್ರಮವಾಗಿರಲಿಲ್ಲ; ಅದು ಭಾವನೆ,
ಭರವಸೆ ಮತ್ತು ಕಲೆಯ ಸಂಭ್ರಮವಾಗಿತ್ತು. ಈ ಚಿತ್ರಯಾನ, ಕನ್ನಡ
ಚಿತ್ರರಂಗದ ಮನಸ್ಸಿನಲ್ಲಿ ಧೀರ್ಘಕಾಲ ಬೆಳಕಾಗಿ ಉಳಿಯಲಿ ಎಂದು ಹಾರೈಸೋಣ,
‘ನಮ್ಮ ನಾಯಕ’ ಸಮಸ್ತ ಚಿತ್ರತಂಡಕ್ಕೆ ಕನ್ನಡಿಗರ ಶುಭಾಶಯಗ




