
Bengaluru: The opposition BJP has won against the ruling party Congress in the elections held for various local bodies.
ಕರ್ನಾಟಕ| ಸ್ಥಳೀಯ ಸಂಸ್ಥೆಗಳ ಚುನಾವಣೆ – ಬಿಜೆಪಿಗೆ ಭರ್ಜರಿ ಜಯ

Karnataka | Local body elections – BJP wins by a landslide
ಬೆಂಗಳೂರು: ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ (Congress) ವಿರುದ್ಧ ವಿಪಕ್ಷ ಬಿಜೆಪಿ (BJP) ಜಯಗಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಕಿನ್ನಿಗೋಳಿ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಾಧಿಸಿದೆ.
ದೊಡ್ಡಬಳ್ಳಾಪುರ ನಗರಸಭೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಯಚೂರು ಜಿಲ್ಲೆಯ ತುರ್ವಿಹಾಳದ ಪಟ್ಟಣ ಪಂಚಾಯಿತ್ನ 4ನೇ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ ಸಾಧಿಸಿದ್ದಾರೆ.

ಎಲ್ಲಿ ಎಷ್ಟು ಸ್ಥಾನ?
ಬಜಪೆ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 19
ಬಿಜೆಪಿ 11, ಕಾಂಗ್ರೆಸ್ 4, ಎಸ್ಡಿಪಿಐ 3, ಪಕ್ಷೇತರ 1
ಕಿನ್ನಿಗೋಳಿ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 18
ಬಿಜೆಪಿ 10, ಕಾಂಗ್ರೆಸ್ 8
ಮಂಕಿ(ಉತ್ತರ ಕನ್ನಡ)
ಒಟ್ಟು ಸ್ಥಾನ – 20
ಬಿಜೆಪಿ 12, ಕಾಂಗ್ರೆಸ್ 8
ಬಾಶೆಟ್ಟಿಹಳ್ಳಿ(ಬೆಂಗಳೂರು ಗ್ರಾಮಾಂತರ)
ಒಟ್ಟು ಸ್ಥಾನ – 19
ಬಿಜೆಪಿ – 15
ಕಾಂಗ್ರೆಸ್ – 3






