ಎಂ ಸಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾ ಮಾಜಿ ಶಾಸಕರಾದ ಆರ್ ನರೇಂದ್ರರಿಗೆ ಸನ್ಮಾನಿದ ಅಭಿಮಾನಿಗಳು.
Fans felicitate former MLA R Narendra, who was elected as the director of MC DCC Bank.
ವರದಿ: ಬಂಗಾರಪ್ಪ .ಸಿ.
ಹನೂರು:ಹನೂರು ಕ್ಷೇತ್ರದಲ್ಲಿ ತನ್ನದೆ ಇತಿಹಾಸ ಹೊಂದಿರುವ
ಎಂ.ಸೀ.ಡಿ.ಸಿ.ಸಿ. ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಆರ್. ನರೇಂದ್ರ ಅವರು ಕಳೆದ ಕೆಲವು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಜಯಗಳಿಸಿದರು ಕಾರಣಾಂತರಗಳಿಂದ ನ್ಯಾಯಲಯದ ಮೊರೆ ಹೋಗಲಾಗಿ ಅಲ್ಲಿಯೂ ಸಹಾ ಗೆಲುವು ಇವರದೆ ಹಾಗಿದ್ದರಿಂದ ಅವರ ಅಭಿಮನಾಇಗಳು ಹನೂರು ಪಟ್ಟಣದ ಶಕ್ತಿ ದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ನ್ಯಾಯಾಲಯದ ಮೆಟ್ಟೇಲೇರಿ
ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಬಳಿಕ ಅವರು ಕಾಂಗ್ರೆಸ್ ಕಚೇರಿಗೆ ಆಗಮಿಸಿದಾಗ ಅಭಿಮಾನಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ ಅವರು ನನಗೆ ಅಧಿಕಾರದ ಆಸೆಯಿಲ್ಲ ನಮ್ಮ ಹಿರಿಯರು ಕಟ್ಟಿದ ಸಂಸ್ಥೆಯಿಂದ
ನಮ್ಮ ಭಾಗದ ರೈತರ ಅಭಿವೃದ್ಧಿ ಹಾಗೂ ರೈತರ ಹಿತಾಸಕ್ತಿಗಾಗಿ ಮುಂದಿನ ದಿನಗಳಲ್ಲಿ ಸಹಕಾರ ಸಂಘದಿಂದ ಹೆಚ್ಚಿನ ಪ್ರಯತ್ನ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅನಿಲ್, ನಿರ್ದೇಶಕರಾದ ಶ್ರೀನಿವಾಸ್,ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ನಾಗೇಂದ್ರ , ಪಟ್ಟಣ ಪಂಚಾಯಿತಿಮಾಜಿ ಉಪಾದ್ಯಕ್ಷರುಗಳಾದ ಹರೀಶ್ ಕುಮಾರ್, ಗಿರೀಶ್, ಬಸವರಾಜು, ಮಾದೇಶ್, ಮುಖಂಡರಾದ , ಪ್ರಸನ್ನ ಕುಮಾ್ , ರವಿ, ಸಂತೋಷ್ ,ಮಂಜೇಶ್ ,ಮಂಜು, ಇನ್ನಿತರರು ಹಾಜರಿದ್ದರು.
—
Kalyanasiri Kannada News Live 24×7 | News Karnataka