ವಿದ್ಯಾರ್ಥಿ ಮೇಲೆ ಹಲ್ಲೆ: ಶಾಲೆಯ ವಿರುದ್ಧ ಪೊಲೀಸ್, ಮಕ್ಕಳ ಆಯೋಗಕ್ಕೆ ದೂರು

Student assaulted: Complaint filed against school, police, children's commissio

ಬೆಂಗಳೂರು,ನ.25; ಕೊತ್ತನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಮ್ಯಾನೇಜ್ ಮೆಂಟ್ ಆಫ್ ಜಾಮಿಯಾ ಮಹಮದಿಯಾ ಎಜುಕೇಶನ್ ಸೊಸೈಟಿ ನಲ್ಲಿ ವಿದ್ಯಾರ್ಥಿಯೊಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ಆತನಿಗೆ ಚಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಶಾಲಾ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.

ಅಬ್ದುಲ್ ರಹೀಂ ಬಿನ್ ಅಬ್ದುಲ್ ಎಂಬ 54 ವರ್ಷದ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ಪುತ್ರ ಅಬ್ದುಲ್ ರಜಾಕ್ ಮಲಿಕ್ ಅವರು ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿ, ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಹೆಚ್ ಬಿ ಆರ್ ಲೇಔಟ್ ನ ಅಬ್ದುಲ್ ರಹೀಂ ಅವರ ಪುತ್ರ ಅಬ್ದುಲ್ ರಜಾಕ್ [14] ಅವರು ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಮ್ಯಾನೇಜ್ ಮೆಂಟ್ ಆಫ್ ಜಾಮಿಯಾ ಮಹಮದಿಯಾ ಎಜುಕೇಶನ್ ಸೊಸೈಟಿ ನಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ನವೆಂಬರ್ 21 ರ ಮಧ್ಯಾಹ್ನ 2.30 ರ ಸಮಯದಲ್ಲಿ ಮಕ್ಕಳೊಂದಿಗೆ ವಾಲಿಬಾಲ್ ಆಡುತ್ತಿದ್ದಾಗ ಅದೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ನೌಮಾನ್ ಎಂಬಾತ ದೊಡ್ಡದಾದ ಕಲ್ಲು ಬೀಸಿದ್ದಾನೆ. ಜೊತೆಗೆ ಅದೇ ಕಲ್ಲಿನಿಂದ ನನ್ನ ಮಗನ ತಲೆಗೆ ಹೊಡೆದಿದ್ದಾನೆ. ರಕ್ತಗಾಯವಾದ ಮಗನಿಗೆ ಶಾಲಾ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ವಹಿಸಿದೆ. ನೌಮಾನ್ ಮತ್ತು ಆಡಳಿತ ಮಂಡಳಿಯ ಖಾಲೀದ್ ಮುಶ್ರಫ್ ಅವರ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಪ್ಪ, ಮಗ ದೂರು ದಾಖಲಿಸಿದ್ದಾರೆ.
Kalyanasiri Kannada News Live 24×7 | News Karnataka
