Social activist B. Lakshmi's husband demands CBI investigation into misuse of Ugadi 2000 crore grant in the name of KRIDL organization in Koppal district.

ಗಂಗಾವತಿ: ರಾಜ್ಯ ಸರ್ಕಾರ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಮಂಜೂರಾತಿ ಮಾಡಿದ್ದರೂ ಸಹ ಕೆಲವು ಪಟ್ಟಭದ್ರ ಅಧಿಕಾರಿಗಳ ಹಾಗೂ ಸಂಸ್ಥೆಯ ಖಾಸಗಿ ವ್ಯಕ್ತಿಗಳ ಅಧಿಕಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ೨೦೦೦ ಕೋಟಿ ಅಧಿಕ ಹಣ ದುರ್ಬಳಿಕೆ ಆಗಿದೆ ಎಂದು ಸಾಮಾಜಿಕ ಹೋರಾಟಗಾರ ಬಿ. ಲಕ್ಷಿö್ಮÃಪತಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಕುಷ್ಟಗಿ ತಾಲೂಕ ಅಧ್ಯಕ್ಷ ಮರಿಯಪ್ಪ ಹಕ್ಕಳ್, ನಾಗರಾಜ್ ದೊಂಬರ ಹಿರೇಬೆಣಕಲ್ ಹಾಗೂ ಜಂಗಮರ ಕಲ್ಗುಡಿಯ ಸೋಫಿಯಾರಾಣಿ ಸಂಸ್ಥೆಯ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ ಅವರು ಮಂಗಳವಾರದAದು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಹಗರಣಗಳ ಕುರಿತು ಸಾಕಷ್ಟು ಬಾರಿ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದರೂ ಸಹ ಇದೂವರೆಗೆ ಸರ್ಕಾರ ಹಾಗೂ ಲೋಕಾಯುಕ್ತರು ಯಾವುದೇ ಕ್ರಮವನ್ನು ಜರುಗಿಸದೇ ಇರುವುದನ್ನು ಗಮನಿಸಿದರೆ ಸರ್ಕಾರ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಐ.ಡಿ.ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸರಕಾರಿ ನೌಕರರಾಗಿರಬೇಕು, ಯಾವುದೇ ಕಾರಣಕ್ಕೂ ಖಾಸಗಿ ನೌಕರರನ್ನು ತೆಗೆದುಕೊಳ್ಳಬಾರದು. ಈ ಹಿಂದೆ ದಿನಗೂಲಿ ನೌಕರರೊಬ್ಬ ಕಳಕಪ್ಪ ಎಂಬುವರು ಹಾಗೂ ಕಾರ್ಯಪಾಲಕ ಅಭಿಯಂತರರಾದ ಝಡ್.ಎಂ. ಚಿಂಚೋಳಿಕರ ೫೦೦ ಕೋಟಿ ಅಕ್ರಮವೆಸಗಿದ್ದಾರೆ ಎಂದು ಅದೇ ಇಲಾಖೆಯ ಅಧಿಕಾರಿ ಹಾಗೂ ಪ್ರಭಾರಿ ಕಾರ್ಯಪಾಲಕ ಅಭಿಯಂತರ ಎಂ. ಅನಿಲ್ ಪಾಟೀಲ್ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದನ್ನು ಗಮನಿಸಿದಾಗ ಸರ್ಕಾರಕ್ಕೆ ದ್ರೋಹವೆಸಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದಕ್ಕೆ ಪ್ರತಿಕಾರವಾಗಿ ಎಂಬAತೆ ಪ್ರಸ್ತುತ ಅನಿಲ್ ಕುಮಾರ್ ಅವರ ವಿರುದ್ಧ ೭೦ ಕೋಟಿ, ಇವರ ನೌಕರರಾದ ಎಂ.ಬಿ ಇರ್ಫಾನ್ ತಮ್ಮ ಸಂಬAಧಿಕರ ಹೆಸರಿನಲ್ಲಿ ಹಾಗೂ ಖಾಸಗಿ ನೌಕರರ ಹೆಸರಿನಲ್ಲಿ ಸಂಪಾದನೆ ಮಾಡಿದ್ದು ಒಟ್ಟಾರೆ ಸಂಸ್ಥೆಯ ಎಲ್ಲಾ ಕಾಮಗಾರಿಗಳ ಹಾಗೂ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
Kalyanasiri Kannada News Live 24×7 | News Karnataka
