Gangavathi: Mass prayers resume at Basava Mantapa, which houses the idol of Vishwaguru Basavanna in Murarinagar

ಗಂಗಾವತಿ: ನಗರದ ಮುರಾರಿ ನಗರ ಮತ್ತು ಅಂಬೇಡ್ಕರ್ ನಗರದ ಬೈಪಾಸ್ ರಸ್ತೆಯಲ್ಲಿ ಬರುವ ಹರಳಯ್ಯಸಮಾಜದವರು ನಿರ್ಮಿಸಿದ ವಿಶ್ವಗುರು ಬಸವಣ್ಣನವರ ಮೂರ್ತಿ ಇರುವ ಬಸವ ಮಂಟಪ ದಲ್ಲಿ ಹರಳಯ್ಯ ಸಮಾಜದಆಶೆಯಂತೆ ಇಂದು ಶನಿವಾರ ರಾಷ್ಟ್ರೀಯ ಬಸವದಳದ ವರಿಂದ ಸಾಮೂಹಿಕ ಬಸವ ಪ್ರಾರ್ಥನೆ ಶರಣೆ ಕವಿತಮ್ಮ ರಗಡಪ್ಪ ಹುಲಿಹೈದರ್ ಇವರ ನೇತೃತ್ವದಲ್ಲಿ ಬಸವಣ್ಣ ಮೂರ್ತಿ ಗೆ ಪೂಜೆ ಮಾಡುವುದರ ಮೂಲಕ ಪ್ರಾರಂಭ ಗೊಂಡಿತು.
ಈ ಶುಭ ಸಂದರ್ಭದಲ್ಲಿ ರಾ.ಬಸವದಳದ ಗೌರವ ಅಧ್ಯಕ್ಷ ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಮಾತನಾಡಿ ಲಿಂ, ಜಗದ್ಗುರು ಮಾತೇ ಮಹಾದೇವಿ ಮಾತಾಜಿಯವರ ಆಶಯದಂತೆ ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ ಲಿಂಗದೇವಾ ನಮ್ಮಮಹಾಮನೆಯ ಮಗನೆಂದನಿಸಯ್ಯಾ ಎಂಬ ಉದ್ದೇಶದಿಂದ ಜಾತಿ-ಮಥ-ಪಂಥ ಎನ್ನದೆ,ಜನರು ಧರ್ಮ ದ ಕಡೆಬರದಾಗ ,ಧರ್ಮವನ್ನೇ ಜರಬಳಿ ಕೊಂಡೊಯ್ಯಬೇಕು ಎಂಬ ಆಶಯದಂತೆ ಗಂಗಾವತಿ ರಾಷ್ಟ್ರೀಯ ಬಸವದಳ ಕೆಲಸಮಾಡುತ್ತಿದೆ.ಮಾತಾಜಿಯವರ ಅಮೃತ ಹಸ್ತದಿಂದ ಬಸವಣ್ಣನವರ ಮೂರ್ತಿ ಸ್ಥಾಪನೆ ಯಾಗಿದೆ.ಇಂತಹ ಪವಿತ್ರ ಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆ ಪುನಹ ಪ್ರಾರಂಬಿರುವದು. ಒಳ್ಳೆಯ ಬೆಳವಣಿಗೆ ಯಾಗಿದೆ
ಮಕ್ಕಳಿಗೆ ಸಂಸ್ಕಾರ ಸಿಗಬೆಕಾದರೆ ಪ್ರಾರ್ಥನೆ ಅವಶ್ಯ ವಾಗಿದೆ .ಪ್ರತಿ ರವಿವಾರ ಸರೊಜಾನಗರದ ಬಸವ ಮಂಟಪದಲ್ಲಿ ಸಾಮೂಹಿಕ ಪ್ರಾರ್ಥನೆ ಇರುತ್ತದೆ ತಾವುಗಳೆಲ್ಲರೂ ಭಾಗಿಯಾಗಬೇಕು.ಶನಿವಾರ ಸಾಯಂಕಾಲ 7 ಗಂಟೆಗೆ ಹರಳಯ್ಯ ಸಮಾಜದವ ಮಂಟಪದಲ್ಲಿ ಎಲ್ಲಾ ರಾ.ಬಸವದಳದ ಶರಣ ,ಶರಣಿಯ ಭಾಗಿಗಳಾಬೇಕೆಂದು ವಿನಂತಿಸಿದರು.

ಈ ಕಾರ್ಯಕ್ರಮ ದಲ್ಲಿ ಶರಣೆ ಕವಿತಮ್ಮ ರಗಡಪ್ಪ ಹುಲಿಹೈದರ್, ಶರಣ ಸಿದ್ದಪ್ಪ ಸಿದ್ಧಾಪುರ,ಹಳಯ್ಯ ಸಮಾಜದ ಹುಚ್ಚಮ್ಮ,ನೇತ್ರಾವತಿ,ಶಶಿಕಲಾ,ಸುಮಿತ್ರಾ, ಕೆಂಚಮ್ಮ,ಅಕ್ಷತಾ,ಮಲ್ಲಿಕಾರ್ಜುನ, ನಿತೀಶ್,ಆದ್ಯ,ಮಿಥುನ್, ಪ್ರಜ್ವಲ್,ಹನುಮಂತಪ್ಪ ಐವಳೆಸೇರಿದಂತೆ ಇತರರುಬಾವಹಿಸಿದ್ದರು.
Kalyanasiri Kannada News Live 24×7 | News Karnataka
