Kanneri Swamiji has insulted the Veerashaivas in the guise of Lingayats, not the followers of Guru Basavanna's Lingayat religion - Sharana Chatnalli
ಕನ್ನೇರಿ ಸ್ವಾಮಿಗಳು ನಿಂದಿಸಿರುವುದು ಲಿಂಗಾಯತ ಮುಖವಾಡದ ವೀರಶೈವರಿಗೆ ಹೊರತು ಗುರು ಬಸವಣ್ಣನವರ ಲಿಂಗಾಯತ ಧರ್ಮ ಅನುಯಾಯಿಗಳಿಗಲ್ಲ

ಕೆಲವರು ಲಿಂಗಾಯತರೆನಿಸಿಕೊಂಡವರು ಹಿಂದುತ್ವದ ವಿಚಾರ – ಆಚಾರಗಳನ್ನು ಮತ್ತು ವೀರಶೈವದ ವಿಚಾರ ಆಚಾರಗಳನ್ನು ಮೈಗೂಡಿಸಿಕೊಂಡಿರುವುದರಿಂದ ಅಂಥವರು ಕನ್ನೇರಿ ಸ್ವಾಮಿಗಳಿಗೆ ಅವರ ಕಡೆಯವರು ಎನಿಸಿದ್ದಾರೆ ಅವರ ಕಡೆಯವರು ತಪ್ಪುಮಾಡಿದ್ದಾರೆಂದು ಅವರು ನಿಂದಿಸಿದ್ದಾರೆ. ಅನೇಕ ಜಾಲಿಮ ಮತ್ತು ರಾ.ಬ.ದದ ಪದಾಧಿಕಾರಿಗಳು ಪ್ರಯಾಗ ರಾಜದಲ್ಲಿ ಮಿಂದು ಹಣೆಗೆ ಅರಸಿಣ ಕುಂಕುಮ ಧರಿಸಿ ಸಾಕಷ್ಟು ಪ್ರಚಾರ ಮಾಡಿಕೊಂಡಿದ್ದಾರೆ. ಆಗ ಕನ್ನೇರಿಯವರಿಗೆ ಇವರೆಲ್ಲ ನಮ್ಮವರು ಎನಿಸಿದ್ದಾರೆ. ಅವರ ಕಡೆಯವರಿಗೆ ಅವರು ನಿಂದಿಸಿಕೊಂಡಿದ್ದಾರೆ.
ಹರಿದ ಹೋದ ನಮ್ಮ ಬೇಲಿ ದಾಟಿ ಪಶುಗಳು ಬೆಳೆ ಎಳೆಸುತ್ತವೆ ಎಂದರೆ ಅದರಲ್ಲಿ ನಮ್ಮದೂ ತಪ್ಪಿದೆ.
ಮಠಾಧಿಪತಿಗಳ ಒಕ್ಕೂಟದ ಕೆಲವರು ಹನುಮಾನ ದೇವಸ್ಥಾನದ ಶಂಕುಸ್ಥಾಪನೆಗೆ/ಉದ್ಘಾಟನೆಗೆ ಹೋಗಿ ಹಿಂದೂಗಳ ಕಾಣಿಕೆ ಪಡೆಯುತ್ತಾರೆ. ಸ್ಥಾವರ ಲಿಂಗಗಳ ಪ್ರತಿಷ್ಠಾಪನೆ ಮಾಡಿ, ಎತ್ತುಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವೀರಶೈವರ ಕಾಣಿಕೆ ಪಡೆಯುತ್ತಾರೆ ಮಠಾಧೀಶರ ಒಕ್ಕೂಟದ ಕೆಲವರಿಗೆ ಹಿಂದೂಗಳ ಕಾಣಿಕೆಯೂ ಬೇಕು. ವೀರಶೈವರ ಕಾಣಿಕೆಯೂ ಬೇಕು ಲಿಂಗಾಯತರ ಕಾಣಿಕೆಯೂ ಬೇಕು. ವೀರಶೈವರ ಆದಾಯಕ್ಕೆ ಧಕ್ಕೆ ತಂದರೆ ಅವರಿಗೆ ಕೋಪ ಬರಲ್ವಾ? ಒಕ್ಕೂಟದ ಕೆಲವು ಭಕ್ತರಿಗೆ ಶಿವನೂ ಬೇಕು, ರಾಮ ಕೃಷ್ಟ ಹನುಮರೂ ಬೇಕು ಇಷ್ಟಲಿಂಗವೂ ಬೇಕು ಅಂದಾಗ ಹಿಂದುಗಳಿಗೆ ವೀರಶೈವರಿಗೆ ಕೋಪ ಬರಲ್ವಾ? ಮಠಾಧೀಶರ ಒಕ್ಕೂಟದವರು ಬಸವಜ್ಯೋತಿ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭಗಳಲ್ಲಿ ಗಣೇಶ ಪೂಜೆ, ದೇವಿ ಪೂಜೆ ಮಾಡಿ ಕಾರ್ಯಕ್ರಮ ಮಾಡಿದ್ದಾರೆ. ಅಂದಾಗ ಕನ್ನೇರಿಯವರಿಗೆ ಕೋಪ ಬರಲ್ವಾ? ವೀರಶೈವ ತತ್ವದಂತೆ ನಡೆಯದ, ಸಂಸ್ಕೃತಿ ಅಭಿಯಾನದಲ್ಲಿ ಸೇರಿಕೊಂಡ ವೀರಶೈವರಿಗೆ ಮತ್ತು ಹಿಂದೂಗಳಿಗೆ ಅವರು ಬೈದಿದ್ದಾರೆ ಹೊರತು ಗುರು ಬಸವಣ್ಣನವರ ಲಿಂಗಾಯತ ಧರ್ಮ ಆಚರಿಸುವ ಲಿಂಗಾಯತರಿಗಲ್ಲ.
ಅತಿಯಾದ (ಶುಷ್ಕ)ವೈಚಾರಿಕತೆ ಪ್ರದರ್ಶಿಸಲು ಹೋಗಿ ಜಾಲಿಮದ ಕೆಲವು ಸಭೆಗಳಲ್ಲಿ ಕೆಲವರು ಲಿಂಗಾಯತ ಧರ್ಮದಲ್ಲಿ ಆಹಾರ ಪದ್ಧಯಿಯಲ್ಲಿ ಯಾವುದೇ ನಿರ್ಭಂದಗಳಿಲ್ಲ. ಮಾಂಸಹಾರಿಗಳೂ ಇಷ್ಟಲಿಂಗದೀಕ್ಷೆ ಸ್ವೀಕರಿಸಬಹುದು/ಕೊಡಬಹುದು. ಇಷ್ಟಲಿಂಗದೀಕ್ಷೆ ಪಡೆದೂ ಮಾಂಸಹಾರ ಮಾಡಬಹುದು ಎನ್ನುವ ಅರ್ಥ ಬರುವಂತೆ ಕೆಲವರು ಉಪನ್ಯಾಸ ಮಾಡಿದ್ದು ನನ್ನ ಗಮನಕ್ಕೆ ಬಂದಿದೆ. ಬಸವ ಸಂಸ್ಕೃತಿ ಅಭಿಯಾನದಲ್ಲೂ ಇಂತಹ ವಿಚಾರ ಹೇಳಿರುವರೋ ಇಲ್ಲವೂ ನನಗೆ ಗೊತ್ತಿಲ್ಲ (ಹೇಳಿದರೆ ಮಠಾಧಿಪತಿಗಳ ಒಕ್ಕೂಟವೂ ಇದಕ್ಕೆ ಹೊಣೆಯಾಗುತ್ತದೆ). ಆಗ ಶರಣ ಸು. ಮಲ್ಲಿಕಾರ್ಜುನಪ್ಪ ಮತ್ತು ನಾನು ಜಾಲಿಮದವರ ಆ ವಿಚಾರವನ್ನು ಖಂಡಿಸಿದೆವು. ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿ ಧರ್ಮ ಇದನ್ನು ಕಲುಷಿತಗೊಳಿಸುತ್ತಿರುವುದು ತಪ್ಪು. ಉಳಿದಂತೆ ಕನ್ನೇರಿ ಸ್ವಾಮಿಗಳು ಬಳಸಿರುವ ಪದಗಳು ಸುಸಂಕೃತ ವ್ಯಕ್ತಿಗಳು ಬಳಸುವ ಪದಗಳಲ್ಲ.
ಗುರು ಬಸವಣ್ಣನವರನ್ನು ಬಳಸಿಕೊಂಡು ಅವರ ವಚನಗಳನ್ನು ಬಳಸಿಕೊಂಡು ಗುರು ಬಸವಣ್ಣನವರನ್ನು ಗುರುವೆನ್ನದವರಿಗೆ, ಅವರು ಕೊಟ್ಟ ಇಷ್ಟಲಿಂಗವನ್ನು ಕಟ್ಟಿಕೊಂಡು ಲಿಂಗಾಯತವು ಗುರು ಬಸವಣ್ಣನವರಿಂದ ಸ್ಥಾಪಿತವಾದ ಸ್ವತಂತ್ರ ಧರ್ಮವೆನ್ನದವರಿಗೆ. ನಾವು ಹೇಗೆ ನಿಂದಿಸುತ್ತೇವೆಯೋ
ಅದೇ ರೀತಿ,
ಶಿವ ಶಿವ ಎಂದು ಕುಣಿದು ಇಷ್ಟಲಿಂಗ ಕಟ್ಟಿಕೊಂಡು ನಾನು ಲಿಂಗಾಯತರೆನ್ನುವವರಿಗೆ , ಮಠಗಳಲ್ಲಿ ಸ್ಥಾವರಲಿಂಗಗಳನ್ನಿಟ್ಟುಕೊಂಡು ನಾವು ಲಿಂಗಾಯತರೆನ್ನುವವರಿಗೆ, ಸ್ಥಾವರಲಿಂಗ, ದೇವಿ,ಗಣಪ ರಾಮ ಕೃಷ್ಣರ ಮತ್ತು ಇತರ ವೀರಶೈವ ಮತ್ತು ಹಿಂದೂ ದೈವಗಳ ಕಾರ್ಯಕ್ರಮಗಳಲ್ಲಿ ಮತ್ತು ಅವುಗಳ ಹೆಸರಿನಲ್ಲಿರನಿ ಕಾಣಿಕೆ ಪಡೆದು ವೀರಶೈವ ಮತ್ತು ಹಿಂದೂಗಳ ಆದಾಯಕ್ಕೆ ಧಕ್ಕೆ ತಂದು ನಾನು ಲಿಂಗಾಯತರೆನ್ನುವವರಿಗೆ ಕನ್ನೇರಿ ಸ್ವಾಮಿಗಳು ಅದೇ ರೀತಿ ನಿಂದಿಸಿದ್ದಾರೆ.
-ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ
