Retired Zonal Forest Officer Shri Immadi Ravindranath was felicitated and honored on the occasion of World Senior Citizens Day.

ವಿಜಯನಗರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತಾಲೂಕು ಕಾನೂನು ಸೇವ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಜಯನಗರ ಜಿಲ್ಲೆಯಲ್ಲಿ ವಿಶೇಷಚೇತನರಿಗಾಗಿ ಮತ್ತು ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ವಿವಿಧ ಸಂಘ, ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2025″” ಮತ್ತು ಪೋಷಣೆ ಮಾಸಾಚರಣೆ ಕಾರ್ಯಕ್ರಮ ಹೊಸಪೇಟೆಯ ಶ್ರೀಸಾಯಿ ಲೀಲಾ ರಂಗ ಮಂದಿರ ಗುರುವಾರ ದಿ,09-10-2025 ರಂದು ನಿವೃತ್ತ ವಲಯ ಅರಣ್ಯ ಅಧಿಕಾರಿ ಶ್ರೀ ಇಮ್ಮಡಿ ರವೀಂದ್ರನಾಥ್ ಯವರಿಗೆ ಸನ್ಮಾನಿಸ. ಗೌರವಿಸಲಾಯಿತು.

ಇವರ ಸಾಧನೆಗಳ ಸಂಕ್ಷಿಪತ್ತ ಪರಿಚಯ:- ಶ್ರೀ ಇಮ್ಮಡಿ ರವೀಂದ್ರನಾಥ್ ಬಳ್ಳಾರಿಸಮೀಪದ ಕುರುಗೋಡಿನಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದರು; ಬಿ.ಎಸ್ಸಿ ಪದವಿ ಪಡೆದ ನಂತರ, ರ್ನಾಟಕ ಅರಣ್ಯ ಇಲಾಖೆಗೆ ಸೇರಿದರು. ದರೋಜಿ ಕರಡಿ ಅಭಯಾರಣ್ಯದ ವಲಯ ಅರಣ್ಯ ಅಧಿಕಾರಿಯಾಗಿ .

- ಅವರು ಬಳ್ಳಾರಿ ನಗರದಲ್ಲಿ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ನಗರದ ರಸ್ತೆ ಬದಿಯಲ್ಲಿ ಸಾವಿರಾರು ಮರಗಳನ್ನು
ನೆಟ್ಟಿರುತ್ತಾರೆ. ಅವುಗಳೆಲ್ಲಾ ಈಗ ಹೆಮ್ಮರಗಳಾಗಿವೆ. ಅವರು ಹರಪನಹಳ್ಳಿ ತಾಲ್ಲೂಕಿನಲ್ಲಿ ೩,೫೦೦ ಎಕರೆ ಅತಿಕ್ರಮಣಗೊಂಡ
ಅರಣ್ಯ ಭೂಮಿಯನ್ನು ತೆರವುಗೊಳಿಸಿದರು ಮತ್ತು ೧೯೯೬ ರವರೆಗೆ ಸಂಪೂರ್ಣ ಭೂಮಿಯನ್ನು ಅರಣ್ಯೀಕರಣ ಮಾಡಿದರು. - ಹಡಗಲಿ ತಾಲ್ಲೂಕಿನಲ್ಲಿ ೧೦ ವರ್ಷಗಳ ಕಾಲ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ೨,೫೦೦ ಎಕರೆ
ಅತಿಕ್ರಮಣಗೊಂಡ ಅರಣ್ಯ ಭೂಮಿಯನ್ನು ತೆರವುಗೊಳಿಸಿದರು. ಅರಣ್ಯದಲ್ಲಿ ಯಾವುದೇ ಅತಿಕ್ರಮಣವಿಲ್ಲದ ತಾಲ್ಲೂಕು
ಹಡಗಲಿ- ರಾಜ್ಯದಲ್ಲಿ ಮೊದಲನೆಯದು. ಮೊದಲಘಟ್ಟ ಮತ್ತು ಬೆಟ್ಟದ ಮಲ್ಲೇಶ್ವರ ಪ್ರದೇಶಗಳ ಬಳಿಯ ತೆರವುಗೊಂಡ
ಭೂಮಿಯಲ್ಲಿ ಅವರು ಕಾಡನ್ನು ಬೆಳಿಸಿದ್ದಾರೆ. - ದರೋಜಿ ಕರಡಿ ಅಭಯಾರಣ್ಯದ ಉಸ್ತುವಾರಿ ವಹಿಸಿಕೊಂಡ ತಕ್ಷಣ, ಅವರು ೫೦೦ ಎಕರೆ ಅರಣ್ಯ ಭೂಮಿಯನ್ನು
ಅಭಯಾರಣ್ಯದ ಮಿತಿಗೆ ಸೇರಿಸಿದರು, ಹೀಗಾಗಿ ಪ್ರದೇಶವನ್ನು ವಿಸ್ತರಿಸಿದರು. ೨೦ ಪರಿಸರ ಅಭಿವೃದ್ಧಿ
ಸಮಿತಿಗಳನ್ನು
ರಚಿಸಲಾಯಿತು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸೌರ ಬೀದಿ ದೀಪಗಳನ್ನು ಸ್ಥಾಪಿಸಲಾಯಿತು, ಗ್ರಾಮಸ್ಥರಿಗೆ ಎಲ್‌ಪಿಜಿ ಅನಿಲ
ಸಂಪರ್ಕಗಳನ್ನು ಒದಗಿಸಲಾಯಿತು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ದನ ಮತ್ತು ಕುರಿಗಳಿಗೆ ಲಸಿಕೆ ಹಾಕಲಾಯಿತು, ಹಂಪಿ
ಸುತ್ತಮುತ್ತಲಿನಲ್ಲಿ ಸಂಭಾವ್ಯ ಧಾರ್ಮಿಕ ಬೇಟೆಯನ್ನು ತಡೆಗಟ್ಟುವಲ್ಲಿ ಪಾತ್ರ ವಹಿಸಿದ್ದಾರೆ.

- ದರೋಜಿ ಕರಡಿ ದಾಮದ ಹೊರಗೂ ಮತ್ತು ಒಳಗು ನಡೆಯುತ್ತಿದ್ದ ಅನಧಿಕೃತ ಕಲ್ಲು ಕ್ವಾರಿಗಳನ್ನು ಸಂಪೂರ್ಣವಾಗಿ
ನಿಲ್ಲಿಸಿದರು. - ದರೋಡೆ ಕರಡಿ ದಾಮದಲ್ಲಿ ಹಾಗೂ ಸುತ್ತಮುತ್ತಲು ಗ್ರಾಮಗಳಲ್ಲಿ ನಡೆಯುತ್ತಿದ್ದ ಯುಗಾದಿ ಬೇಟೆಯನ್ನು ಸಂಪೂರ್ಣವಾಗಿ
ನಿಲ್ಲಿಸುವಲ್ಲಿ ಇವರ ಹಾಗೂ ಶ್ರೀ ಸಮದ್ ಕೊಟ್ಟೂರ್ ಮತ್ತು ಅವರ ತಂಡದ ಕೊಡುಗೆ ಅಪಾರವಾಗಿದೆ . - ದರೋಜಿ ಕರಡಿ ದಾಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ
- ಇವೆಲ್ಲ ಕಾರಣಗಳಿಂದಾಗಿ ಇವರಿಗೆ ಕಿರ್ಲೋಸ್ಕರ್ ಅಂತರಾಷ್ಟ್ರೀಯ ಪ್ರಶಸ್ತಿಯಾದ ವಸುಂದರ ಮಿತ್ರ ಸನ್ಮಾನಕ್ಕೆಭಾಜನರಾದರು.
- ನಿವೃತ್ತಿಯ ನಂತರ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಲ್ಲಿ ವ್ಯವಸ್ಥಾಪಕರಾಗಿ, ಕಮಲಾಪುರ, ಭೀಮೇಶ್ವರಿ, ದಾಂಡೇಲಿ,
ಮುಂತಾದ ಕಡೆ ಹತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಾ, ಅಲ್ಲಿನ ಪರಿಸರವನ್ನು ಹಸಿರುಗೊಳಿಸಿದ್ದಾರೆ. ೨೦೨೩ ರಲ್ಲಿ
ಉಪ ಪ್ರಾದೇಶಿಕ ವ್ಯವಸ್ಥಾಪಕರಾಗಿ ದಿ,೩೦.೦೬.೨೦೧೧ನಿವೃತ್ತರಾಗಿ ಅಲ್ಲಿಂದ ಬಿಡುಗಡೆ ಹೊಂದಿರುವ ಶ್ರೀಯುತರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ನಿವೃತ್ತ
ಜೀವನವನ್ನು ಮಕ್ಕಳು-ಮೊಮ್ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ಇವರಿಗೆ ಇನ್ನೂ ಹೆಚ್ಚು ಪುರಸ್ಕಾರಗಳು ಸಿಗಲಿ ಎಂದು ಶಿವಸಮಾಸಾಲಿ,ಶಿವಸಾಲಿ ಹಿರಿಯರು ಹಾರೈಸಿದ್ದಾರೆ.