There is no shortage of talent in Kalyan Karnataka - Dhanraj E.
ಗಂಗಾವತಿ:ಇತಿಹಾಸವನ್ನು ಅವಲೋಕಿಸಿದರೆ ಕರ್ನಾಟಕದ ಪ್ರತಿಭೆಗಳೆಲ್ಲಾ ಆಗಿಹೋಗಿದ್ದು ಕಲ್ಯಾಣ ಕರ್ನಾಟಕದಲ್ಲಿ ಅದು ಶಿಕ್ಷಣ, ಸಾಹಿತ್ಯ, ಧರ್ಮ,ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅನುಪಮವಾದ ಸಾಧನೆ ಇಲ್ಲಿಯೇ ಆಗಿದೆ ಉದಾ ವಚನ ಮತ್ತು ದಾಸ ಸಾಹಿತ್ಯ. 17 ನೇ ಶತಮಾನದಿಂದ ಇಲ್ಲಿ ಸಾಂಸ್ಕೃತಿಕ ಅವನತಿ ಪ್ರಾರಂಭವಾಯಿತು. ಅದರ ಪರಿಣಾಮ ಇಂದಿಗೂ ನಾವು ಹಿಂದುಳಿದಿದ್ದೆವೆ ಎಂಬ ಭಾವನೆಯಲ್ಲಿ ನಮ್ಮ ನೈಜ ಪ್ರತಿಭೆಯನ್ನು ಕಂಡುಕೊಳ್ಳಲು ವಿಫಲರಾಗಿದ್ದೆವೆ ಆ ಭಾವನೆಯನ್ನು ಕೈಬಿಟ್ಟು ಪ್ರಯತ್ನಶೀಲರಾದರೇ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದು ಚಿಂತಕ , ಶಿಕ್ಷಣ ತಜ್ಞ ಈ ಧನರಾಜ್ ಅಭಿಪ್ರಾಯ ಪಟ್ಟರು. ಅವರು ಇಂದು ಜರುಗಿದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವ ಸ್ವಾಮಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2015- 26 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ, ಕ್ರೀಡೆ ,ಸಾಂಸ್ಕೃತಿಕ, ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು .ಮುಂದುವರೆದು ಮಹಿಳಾ ಮಹಾವಿದ್ಯಾಲಯ 30 ವರ್ಷಗಳಿಂದ ತನ್ನ ಬೋಧನಾ ಗುಣಮಟ್ಟ ,ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಯನ್ನ ಮೆರೆಯುತ್ತಾ ಕಲ್ಯಾಣ ಕರ್ನಾಟಕದ ಶ್ರೇಷ್ಠ ಮಹಿಳಾ ಕಾಲೇಜುಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಧನರಾಜ್ ಅವರಿಗೆ ಅವರ ಸಾಧನೆಗಾಗಿ ಸಂಘದ ವತಿಯಿಂದ ಕೊಟ್ಟೂರೇಶ್ವರ ಸಮಾಜ ಸೇವಾ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು .ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ. ಕೊಟ್ಟೂರು ಮಹಾಸ್ವಾಮಿಗಳು ಮಾತನಾಡುತ್ತಾ ವಿದ್ಯಾರ್ಥಿನಿಯರು ಅಧ್ಯಯನದಲ್ಲಿ ಶ್ರದ್ಧೆಯನ್ನು ಅಳವಡಿಸಿಕೊಂಡು ನಿರಂತರವಾಗಿ ಪ್ರಯತ್ನಶೀಲರಾಗಬೇಕು ಮಹಿಳಾ ಕಾಲೇಜು ರ್ಯಾಂಕುಗಳ ಕಾಲೇಜು ಎಂದೇ ಪ್ರಸಿದ್ಧವಾಗಿದೆ ಆ ಪರಂಪರೆಯನ್ನ ಉಳಿಸಿ ಬೆಳೆಸಿಕೊಂಡು ಹೋಗಲು ಕರೆ ನೀಡಿದರು ಮತ್ತು ಮಹಿಳಾ ಕಾಲೇಜನ್ನು ನಮ್ಮ ಭಾಗದ ಉತ್ತಮ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದ್ದೇವೆ ಎಂದು ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಕರೆ ನೀಡಿದರು . ಸಂಸ್ತೆಯ ನಿರ್ದೇಶಕರು ಮತ್ತು ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಮಾತನಾಡಿ ಮಹಿಳಾ ಕಾಲೇಜು ನಮ್ಮ ಭಾಗದದಲ್ಲಿ ಆರಂಭದಿಂದಲೂ ತನ್ನ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಅದು ಮಹಿಳಾ ಶಿಕ್ಷಣದಲ್ಲಿ ತನ್ನದೇ ಆದ ಚಾಕು ಮೂಡಿಸಿದೆ ಅದರ ಈ ಸಾಧನೆಯನ್ನ ಪ್ರಸ್ತುತ ವಿದ್ಯಾರ್ಥಿನಿಯರು ಮುಂದುವರಿಸಿಕೊಂಡು ಹೋಗಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಗುಲಾಬಿ ನೀಡಿ ಸ್ವಾಗತಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಉಪಾಧ್ಯಕ್ಷರಾದ ಕೆ ಚನ್ನಬಸಯ್ಯಸ್ವಾಮಿಯವರು ವಹಿಸಿ ವಿದ್ಯಾರ್ಥಿನಿಯರು ಸಾಧಿಸಿದ ಯಶಸ್ಸು ಕೇವಲ ಅವರಿಗೆ ಅಷ್ಟೇ ಅಲ್ಲ ಅದು ಕುಟುಂಬ ಮತ್ತು ರಾಷ್ಟ್ರಕ್ಕೆ ಸಲ್ಲುತ್ತದೆ ಎಂದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶರಣಗೌಡ ಮಾಲಿ ಪಾಟೀಲರು ಕಾಲೇಜು ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಸಹಕಾರ್ಯದರ್ಶಿಗಳಾದ ಮತ್ತು ಹೆಚ್.ಎಂ. ಮಂಜುನಾಥ, ವಕೀಲರು , ನಿರ್ದೇಶಕರಾದ ರಾಚಯ್ಯ ಸ್ವಾಮಿ ಹುಚ್ಚೇಶ್ವರಮಠ ಪ್ರಾಚಾರ್ಯ ಡಾ. ಶರಣ ಬಸಪ್ಪ ಕೋಲ್ಕಾರ್, ಜಿ ಎಚ್ ಎನ್ .ಕಾಲೇಜು ಪ್ರಾಚಾರ್ಯ ಜಿ .ಬಸವರಾಜ್ ಅಯೋಧ್ಯ .ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರಿ ಶ್ರೀದೇವಿ, ಸಹ ಕಾರ್ಯದರ್ಶಿ ಶಫೀನ್ ಅಂಜುಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರೊ. ಶಿವಮ್ಮ ಪ್ರಕಾಶ, ಡಾ. ಶಾರದಾ ಪಾಟೀಲ್, ಡಾ. ಅರ್ಚನಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು

Kalyanasiri Kannada News Live 24×7 | News Karnataka