MLA Gali Janardhana Reddy participated in the Eid Milad celebration procession and extended greetings to Muslim brothers and sist
ಗಂಗಾವತಿ ನಗರದಲ್ಲಿ ಜರುಗಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ಜಯಂತಿಯ ಈದ್ ಮಿಲಾದ್ ಹಬ್ಬದ ಆಚರಣೆಯ ಮೆರವಣಿಗೆಯಲ್ಲಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ಭಾಗಿಯಾಗಿ ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ತಿಳಿಸಿ, ಸಿಹಿ ಹಂಚಿದರು.
ಮೆರವಣಿಗೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ ಅವರನ್ನು ಭೇಟಿ ಮಾಡಿದರು, “ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಯಾವುದೇ ಆಹಿತಕರ ಘಟನೆಗಳು ಜರುಗದಂತೆ ಕಾಳಜಿ ವಹಿಸಿ ಖುದ್ದಾಗಿ ಅವರೇ ಉಪಸ್ಥಿತಿಯಲಿದ್ದು ಭದ್ರತೆ ನೀಡಿರುವುದಕ್ಕಾಗಿ ನನ್ನ ಧನ್ಯವಾದಗಳು” ಎಂದು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಮೌಲಾಸಾಬ್, ಮೆಹಫುಜ್ ಅಲಿಖಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹುಸ್ಮಾನ್, ಜಬ್ಬರ್ ಬಿಚ್ಚುಗತ್ತಿ, ಫಾರೂಕ್, ರಾಜ್ ಮಹಮದ್, ಮುಸ್ತಾಖ್ ಆಲಿ, ಬಿಲ್ಡರ್ ಮೆಹಬೂಬ್, ಸೈಯದ್ ಆಲಿ, ಜಿಲಾನ್ ಪಾಷಾ ಖಾದ್ರಿ, ಸೈಯದ್ ಹುಸೇನ್ ಭಾಷಾ, ರಫೀಕ್, ಶಫಿ, ಬುಲೆಟ್ ಸಲೀಂ, ಝುಬೇರ್, ಬಿಜೆಪಿಯ ನಗರಮಂಡಲ ಅಧ್ಯಕ್ಷರಾದ ಚಂದ್ರು ಹೀರೂರು, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಮನೋಹರ ಗೌಡ ಹೇರೂರು, ಚನ್ನವೀರನ ಗೌಡ್ರು, ದುರ್ಗಪ್ಪ ದಳಪತಿ, ವೀರೇಶ್ ಸೂಳೆಕಲ್, ಉಪಸ್ಥಿತರಿದ್ದರು.