Invitation leaflet released for the 158th Jayanti program of Lim Hanagal Kumara Shivayogi

ಸೆ. 10 ರಿಂದ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ
ಕುಮಾರಶಿವಯೋಗಿಗಳ ಜಯಂತಿ; ನೂರಾರು ಶ್ರೀಗಳ ಮಹಾ ಸಂಗಮ. ವೀರಶೈವ ಲಿಂಗಾಯತ ಮಹಾಸಭಾತಾಲೂಕಾಧ್ಯಕ್ಷ ಎಚ್.ಗಿರಿಗೌಡ ಸುದ್ದಿಗೋಷ್ಠಿ
ಗಂಗಾವತಿ:06 ಶಿವಯೋಗ ಮಂದಿರದ ಸಂಸ್ಥಾಪಕ ಲಿಂ.ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158ನೇ ಜಯಂತಿ ಮಹೋತ್ಸವವನ್ನು ಸೆ. 10 ರಿಂದ 11 ದಿನಗಳ ವರೆಗೆ ಗಂಗಾವತಿ ನಗರದಲ್ಲಿ ಅದ್ಧೂರಿ ಆಚರಿಸಲಾಗುವುದು. ಶಿವಯೋಗ ಮಂದಿರದಲ್ಲಿ ಅಭ್ಯಾಸ ಮಾಡಿರುವ, ನಾಡಿನ ನಾನ ಭಾಗದ ಸುಮಾರು 150ಕ್ಕೂ ಹೆಚ್ಚು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್.ಗಿರಿಗೌಡ ಹೇಳಿದರು.
ನಗರದ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ಕಾರ್ಯಕ್ರಮದ ಆಹ್ವಾನದ ಕರ ಪತ್ರ ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಸೆ.10 ರಿಂದ ಕುಮಾರ ಶಿವಯೋಗಿಗಳ ಜೀವನದರ್ಶನ ಪ್ರವಚನ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ನಡೆಯಲಿದೆ. ಸೆ. 11 ರಿಂದ ಸೆ.19ರ ವೇರೆಗೆ ಪ್ರತಿ ದಿನ ಗಂಗಾವತಿಯ ವಿವಿಧ ವಾರ್ಡ್ ನಲ್ಲಿ ಬೆಳಗ್ಗೆ 5.30ರಿಂದ 7 ಗಂಟೆ ವರೆಗೆ, ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 8.30ರಿಂದ 12.30ರ ವರೆಗೆ ಸದ್ಭಾವನಾ ಪಾದಯಾತ್ರೆ ನಡೆಯಲಿದೆ. ಈ ವೇಳೆ ಶ್ರೀಗಳು ಜನರಿಂದ ದುಶ್ಚಟಗಳನ್ನು ಭಿಕ್ಷೆ ರೂಪದಲ್ಲಿ ಜೋಳಿಗೆಗೆ ಹಾಕಿಸಿಕೊಂಡು, ರುದ್ರಾಕ್ಷಿ ಹಾಕುವ ಮೂಲಕ ಸದ್ಗುಣಗಳ ದೀಕ್ಷೆ ನೀಡಲಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಯಾತ್ರೆ ನಡೆಯುವ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಹಿನ್ನೆಲೆ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ. ನಾನಾ ಸಮಿತಿ ರಚಿಸಿ, ಕೆಲಸ ಹಂಚಿಕೆ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪಾದಯಾತ್ರೆಗೆ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಮೊಲದ ದಿನವೇ ಸುಮಾರು 50 ಸ್ವಾಮೀಜಿಗಳು ಗಂಗಾವತಿಗೆ ಬರಲಿದ್ದಾರೆ. ಕೊನೆ ದಿನದ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಶ್ರೀಗಳು ಆಗಮಿಸಲಿದ್ದಾರೆ. ಈ ಹಿನ್ನೆಲೆ ಮಲ್ಲಿಕಾರ್ಜುನ ಮಠದಲ್ಲಿ ಸುಮಾರು 60 ಜನ ಶ್ರೀಗಳಿಗೆ ವಸತಿ, ಪ್ರಸಾದ ಮತ್ತು ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಮುದೇನೂರು ಮಾತನಾಡಿ, ಸೆ. 10 ರಂದು ಬೆಳಗ್ಗೆ 10ಕ್ಕೆ ಸುಮಾರು 50 ಶ್ರೀಗಳ ಪುರ ಪ್ರವೇಶ ಆಗಲಿದೆ. ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಮುಂದಿನಿಂದ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಅಖಿಲ ಭಾತರ ವೀರಶೈವ ಮಹಾಸಭಾ ಹಾಗೂ ಜಯಂತ್ಯುತ್ಸವ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆಯರು ಈಗಾಗಲೇ ರುದ್ರಾಕ್ಷಿ ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಭಾವನಾ ಯಾತ್ರೆಯಲ್ಲಿ ಶ್ರೀಗಳು ಗ್ರಾಮಸ್ಥರಿಗೆ ರುದ್ರಾಕ್ಷಿ ಧಾರಣೆ ಮಾಡುತ್ತಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಸೇರಿ ಪ್ರಮುಖ ಗಣ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ನಿಕಟಪೂರ್ವ ತಾಲೂಕಾಧ್ಯಕ್ಷ ಅಶೋಕಸ್ವಾಮಿ ಹೇರೂರು,ಮಾಜಿ ಕಾಡಾ ಅಧ್ಯಕ್ಷ ಬಿ.ಹೆಚ್.ಎಂ. ತಿಪ್ಪೇರುದ್ರಸ್ವಾಮಿ ವಕೀಲರು, ವಿರೂಪಾಕ್ಷಪ್ಪ ಸಿಂಗನಾಳ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್ ಮಾತನಾಡಿದರು. ಮಹಾಸಭಾ ಮುಖಂಡರಾದ ಮನೋಹರಗೌಡ ಹೇರೂರು, ಜಿ.ಶ್ರೀಧರ, ಮಹಾಂತೇಶ ಶಾಸ್ತ್ರಿಮಠ, ಸಂದ್ಯಾ ಹೇರೂರು, ಮಹಿಳಾ ಘಟಕದ ಕಾರ್ಯದರ್ಶಿ ಶಿಲ್ಪ ಶ್ರೀನಿವಾಸ, ಕವಿತಾ ಗುರುಮೂರ್ತಿ, ಮಹಾಂತಾ ಪಾಟೀಲ್, ಯುವ ಘಟಕದ ಅಧ್ಯಕ್ಷ ಶರಣಬಸವ ಹುಲಿಹೈದರ, ಸಂಗಯ್ಯಸ್ವಾಮಿ ಸಂಶಿಮಠ, ಮಹಾಂತಗೌಡ ಇದ್ದರು.
ಜಯಂತ್ಯುತ್ಸವದಲ್ಲಿ ಅಂಖಡ ಗಂಗಾವತಿ ತಾಲೂಕು ವ್ಯಾಪ್ತಿಯ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಕಳೆದ 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆ. 15ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ.
ವಿರೂಪಾಕ್ಷಪ್ಪ ಸಿಂಗನಾಳ
ಜಯಂತ್ಯುತ್ಸವದ ಭಾಗವಾಗಿ ಸೆ.11 ರಿಂದ ಗಂಗಾವತಿ ನಗರದ ವಿವಿಧ ವಾರ್ಡ್ ಹಾಗೂ ಗ್ರಾಮೀಣ ಭಾಗದಲ್ಲಿ ಸದ್ಭಾವನಾ ಯಾತ್ರೆ ನಡೆಯಲಿದೆ. ಯಾತ್ರೆ ನಡೆಯುವ ಪ್ರದೇಶದಲ್ಲಿ ಮಹಿಳಾ ಸಮಿತಿಯಿಂದ ರಂಗೋಲಿ ಹಾಕಿಸಿ, ಸ್ವಾಮೀಜಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಯಾತ್ರೆ ವೇಳೆ ಶ್ರೀಗಳು ರುದ್ರಾಕ್ಷಿ ಹಾಕುವ ಮೂಲಕ ದುಶ್ಚಟಗಳ ಭಿಕ್ಷೆ ಕೇಳುತ್ತಾರೆ. ಈ ಹಿನ್ನೆಲೆ ರುದ್ರಾಕ್ಷಿ ಪೂಣಿಸುವ ಕೆಲಸ ಈಗಾಗಲೆ ಶುರು ಮಾಡಿದ್ದೇವೆ.
– ನಂದಿನಿ ಮುದಗಲ್, ಮಹಿಳಾ ಘಟಕದ ಅಧ್ಯಕ್ಷೆ
ಜಯಂತ್ಯುತ್ಸವದ ಅಂಗವಾಗಿ ಕೊನೆ ದಿನ ನಡೆಯುವ ಶೋಭಾಯಾತ್ರೆ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಸ್ವಾಮೀಜಿಗಳು ಗಂಗಾವತಿಗೆ ಆಗಮಿಸಲಿದ್ದಾರೆ. ಮೊದಲ ದಿನವೇ ಸುಮಾರು 50 ಜನ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಸೆ. 10 ರಂದು ಶ್ರೀಗಳು ಪುರ ಪ್ರವೇಶ ಮಾಡಲಿದ್ದಾರೆ. ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಮುಂದೆ ಶ್ರೀಗಳನ್ನು ಸ್ವಾಗತಿಸಲಾಗುವುದು. ಹಂತ ಹಂತವಾಗಿ ಶ್ರೀಗಳ ಸಂಖ್ಯೆ ಹೆಚ್ಚಲಿದೆ.
ಅಶೋಕಸ್ವಾಮಿ ಹೇರೂರು, ನಿಕಟಪೂರ್ವ ಅಧ್ಯಕ್ಷರು
ಸುಮಾರು 9 ಸಾವಿರಕ್ಕೂ ಹೆಚ್ಚು ಸ್ವಾಮಿಗಳನ್ನು ತಯಾರಿ, ಕೇವಲ ರಾಜ್ಯ ಮಾತ್ರವಲ್ಲದೇ ದೇಶದ ನಾನಾ ಮಠಗಳಿಗೆ ಗುರುಗಳಾಗಿ ನೀಡಿದ ಶ್ರೇಯಸ್ಸು ಶಿವಯೋಗ ಮಂದಿರಕ್ಕೆ ಸಲ್ಲುತ್ತದೆ. ಜೊತೆ ಲಕ್ಷಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಕೆಎಲ್ಇ ಶಿಕ್ಷಣ ಸಂಸ್ಥೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ್ದು ಹಾನಗಲ್ಲ ಗುರುಕುಮಾರೇಶ್ವರ ಶಿವಾಚಾರ್ಯರು. ಇಂಥ ಮಹಾತ್ಮರ ಜಯಂತಿಯನ್ನು ಗಂಗಾವತಿಯಲ್ಲಿ ನಡೆಸುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಶಿವಯೋಗ ಮಂದಿರದಲ್ಲಿ ತಯಾರಿಸಲಾಗುವ ನೈಸರ್ಗಿಕ ವಿಭೂತಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
– ತಿಪ್ಪೇರುದ್ರಸ್ವಾಮಿ, ಮುಖಂಡರು
