Zilla Pancha Sena organizational meeting in Koppal

ಕೊಪ್ಪಳ-02 ನಗರದ ಪ್ರವಾಸಿ ಮಂದಿರದಲ್ಲಿ ಇಂದು ಕೊಪ್ಪಳ ಜಿಲ್ಲಾ ಪಂಚ ಸೇನಾ ನೂತನ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಇವರ ಅಧ್ಯಕ್ಷತೆಯಲ್ಲಿ ಸಂಘಟನಾತ್ಮಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು ನಂತರ ವಿಶ್ವನಾಥ ಮರಿಬಸಪ್ಪನವರ ಮಾತನಾಡಿ ನಮ್ಮ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರುಗಳು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ಸಲಹೆಯಂತೆ ನಮ್ಮ ಜಿಲ್ಲೆಯಲ್ಲಿ ಪಂಚ ಸೇನಾ ಸಂಘಟನೆಯನ್ನು ಎಲ್ಲಾ ಏಳು ತಾಲೂಕ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಮಾಜದ ಹಿರಿಯರು ಹಾಗೂ ಯುವಕರ ಸಲಹೆಯನ್ನು ಪಡೆದು ಪಂಚ ಸೇನಾ ಸಂಘಟನೆಯನ್ನು ಅತ್ಯಂತ ಬಲಿಷ್ಠವಾಗಿ ಸಂಘಟಿಸುತ್ತೇನೆ ಎಂದವರು ಹೇಳಿದರು. 2 ಎ ಮೀಸಲಾತಿಗಾಗಿ ನಮ್ಮ ಪೂಜ್ಯರು ಕೂಡಲಸಂಗಮದಿಂದ ರಾಜ್ಯದ ರಾಜಧಾನಿ ಬೆಂಗಳೂರಿನವರೆಗೆ ಸುಮಾರು 750 ಕಿಮೀ ಪಾದಯಾತ್ರೆ ಮಾಡಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ಹಗಲಿರಳು ಶ್ರಮಿಸುತ್ತಿರುವ ಪೂಜ್ಯರು ಇವರೆಂದು ಹೇಳಿದರು. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿ ನಮ್ಮ ಪಂಚಮಸಾಲಿ ಸಮಾಜದ ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದರು. ಈ ಸಂದರ್ಭದಲ್ಲಿ ಪಂಚಸೇನಾ ಜಿಲ್ಲಾ ಉಪಾಧ್ಯಕ್ಷ ಬಸವರಾಜ, ಪ್ರಧಾನ ಕಾರ್ಯದರ್ಶಿ ಮಾಂತೇಶ ನೆಲಾಗಣಿ, ಪಂಚ ಸೇನಾ ರಾಜ್ಯ ಸದಸ್ಯ ಶಿವಶರಣಪ್ಪ ಶಿವಪೂಜಿ ತಿಮ್ಮಾಪುರ,ಕುಕನೂರ ತಾಲೂಕ ಪಂಚ ಸೇನಾ ಅಧ್ಯಕ್ಷ ಪ್ರಭು ಹಳ್ಳಿ, ಕುಷ್ಟಗಿ ತಾಲೂಕ ಪಂಚ ಸೇನಾ ಅಧ್ಯಕ್ಷ ಪ್ರಭುಗೌಡ್ರ ಪೊಲೀಸ ಪಾಟೀಲ, ಕಾರಟಗಿ ತಾಲೂಕ ಪಂಚಸೇನಾ ಅಧ್ಯಕ್ಷ ವೀರೇಶ, ಶರಣಪ್ಪ ಹ್ಯಾಟಿ ಮಂಗಳೂರು,ಶರಣಪ್ಪ ಬೂದಗುಂಪಿ, ಗುರುರಾಜ ಇಲಕಲ್ಲ, ಕಲ್ಯಾಣ ಕರ್ನಾಟಕ ಮಾಧ್ಯಮ ವಕ್ತಾರ ರವೀಂದ್ರನಾಥ ಕೊಟ್ರಪ್ಪ ತೋಟದ ಕಾರ್ಯಕ್ರಮದ ಸ್ವಾಗತ ನಿರ್ವಹಣೆ ಮಾಡಿದರು.