Breaking News

ದೇಶದ ಐಕ್ಯತೆಗೆ ಬಸವಣ್ಣನವರ ತತ್ವಗಳೇ ಪೂರಕ ಅದರಿಂದ ಭಾರತ ದೇಶ ಇನ್ನು ಮುಂದೆ ಬಸವಭಾರತವಾಗಬೇಕು

Basavanna's principles are essential for the unity of the country, henceforth India should become Basavanna Bharat.

20250901 213245 Collage7545654135725960236 769x1024

ಡಾ.ಗಂಗಾದೇವಿ ಮಾತಾಜಿ.

ಜಾಹೀರಾತು

ಪ್ರಪಂಚದ ಅತ್ಯಂತ ಪ್ರಾಚೀನ ನಗರ ಎಂದು ಕರೆಯಿಸಿಕೊಳ್ಳುವ ವಾರಣಾಸಿ ನಗರದ ಬನಾರಸ ಹಿಂದು ವಿಶ್ವವಿದ್ಯಾಲಯದ ಆವರಣದ ಕೆ ಎನ್ ಉಡುಪ ಆಡಿಟೋರಿಯಂ ನಲ್ಲಿ ದಿ.31.08.2025 ರಂದು ನಡೆಯುತ್ತಿರುವ ಐತಿಹಾಸಿಕ ಮೊಟ್ಟಮೊದಲನೆಯ ಬಸವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಬೆಳಗ್ಗೆ 6 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಪ್ರಾರಂಭವಾಗಿ ಬೆ.9.30ಕ್ಕೆ ವೇದಿಕೆಯ ಕಾರ್ಯಕ್ರಮಗಳು ಪ್ರಾರಂಭವಾದವು,
ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನ ಬಸವ ಧರ್ಮ ಪೀಠ ಕೂಡಲಸಂಗಮದ ಮಹಾಜಗದ್ಗುರು ಪೂಜ್ಯಡಾ.ಗಂಗಾದೇವಿ ಮಾತಾಜಿಯವರು ಹಾಗೂ ಸದ್ಗುರು ಬಸವಯೋಗಿ ಸ್ವಾಮೀಜಿಯವರು ವಹಿಸಿದ್ದರು,

Screenshot 2025 09 01 21 35 36 10 6012fa4d4ddec268fc5c7112cbb265e75815719984363833878 735x1024

ಕಾರ್ಯಕ್ರಮದ ಪ್ರಾರಂಭದಲ್ಲಿ ಗುರು ಬಸವ ಪೂಜೆಯನ್ನು ಶರಣ ಯು.ಪರಮೇಶ್ವರಪ್ಪ, ಪ್ರೊಫೆಸರ ಬನಾರಸ್ ಹಿಂದು ಯುನಿವರ್ಸಿಟಿ ವಾರಣಾಸಿ ಹಾಗೂ ಕೌಷಿಕಾ ರಾಜಶೇಖರ ಹೆಸರಾಂತ ದಂತ ವೈದ್ಯರು ವಾರಣಾಸಿ ಮತ್ತು ಕುಶಾಲರಾವ ಪಾಟೀಲ ಅದ್ಯಕ್ಷರು ಲಿಂಗಾಯತ ಸಮಾಜ ಬೀದರ, ಮಲ್ಲಿಕಾರ್ಜುನಪ್ಪ ಕಲವಾ ಬಸವ ಸಂಕ್ಷೇಮ ಸಂಪಾದಕರು ಹಾಗೂ ಡಾ ಶರಣಪ್ಪ ಅದ್ಯಕ್ಷರು ರಾಷ್ಟ್ರೀಯ ಬಸವದಳ ಜಹಿರಾಬಾದ ನೆರವೇರಿಸಿದರು,

ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನ ತೆಲಂಗಾಣ ರಾಜ್ಯ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಶರಣ ಶಂಕರ ಪಾಟೀಲ ಹಾಗೂ ಈಶ್ವರ ಕೊರ್ಲಹಳ್ಳಿ , ಅದ್ಯಕ್ಷರು ಕರ್ನಾಟಕ ರಾಜ್ಯ ಲಿಂಗಾಯತ ಧರ್ಮ ಮಹಾಸಭೆ. ಇವರುಗಳು ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಡಾ.ಕೌಷಿಕಾ ರಾಜಶೇಖರ, ಡಾ.ಯು.ಪರಮೇಶ್ವರಪ್ಪ
ಡಾ ಶರಣಪ್ಪ ಶರಣ ಕುಶಾಲರಾವ್ ಪಾಟೀಲ ಲಿಂಗಾಯತ ಸಮಾಜ ಬೀದರ ವೇದಿಕೆಯಲ್ಲಿದ್ದರು,

ಅತಿಥಿಗಳಾದ

ಮಲ್ಲಿಕಾರ್ಜುನಪ್ಪ ಕಲವಾ ಅವರು
ತೆಲಗು ಭಾಷೆಯಲ್ಲಿ ಮಾತನಾಡುತ್ತಾ

ಯುಗಕ್ಕೊಬ್ಬರು ಧರ್ಮ ಸಂಸ್ಕಾರವನ್ನ ನೀಡಲು ಯುಗಪುರುಷರು ಉದಯಿಸುವಂತೆ ಈ ಯುಗಕ್ಕೆ ಗುರು ಬಸವಣ್ಣನವರು ಯುಗಪುರುಷರಾಗಿ ಅವತರಿಸಿದ್ದಾರೆ ಸಮಸಮಾಜದ ಕನಸಷ್ಟೆ ಅಲ್ಲದೇ ಮಹಿಳೆಯರ ಹಕ್ಕಿನ ಬಗ್ಗೆಯೂ ಪ್ರಸ್ತಾಪಿಸಿದ ಜಗತ್ತಿನ ಮೊಟ್ಟ ಮೊದಲ ದಾರ್ಶನಿಕ ಗುರು ಬಸವಣ್ಣನವರಾಗಿದ್ದಾರೆ ಎಂದರು , ನೆರೆ ಕೆನ್ನೆಗೆ ತೆರೆಗಲ್ಲಕೆ ಶರೀರ ಗೂಡು ಹೋಗದ ಮುನ್ನ ಎನ್ನುವ ಗುರು ಬಸವಣ್ಣನವರವಚನವನ್ನ ಉದಾಹರಿಸುತ್ತ ಸಮಯದ ಸದುಪಯೋಗದ ಬಗ್ಗೆ ಅದ್ಯತ್ಮದ ಚಿಂತನೆಯ ಬಗ್ಗೆ ಮಾತನಾಡಿದರು.

ಅನಿಲ ಕುಮಾರ ಪಾಟೀಲ ಮಾತನಾಡುತ್ತ

ಪೂಜ್ಯ ಮತಾಜಿಯವರ ಕನಸನ್ನು ಪೂರ್ಣಗೊಳಿಸಲು ಪೂಜ್ಯ ಗಂಗಾಮಾತಾಜಿಯವರು ಬಂದಿದ್ದಾರೆ ಅವರ ಕೈ ಬಲಪಡಿಸುವ ಕೆಲಸವಾಗ ಬೇಕು.
ಮುಂದಿನ ದಿನಮಾನದಲ್ಲಿ
ಹನ್ನೆರಡು ಜೋರ್ತಿಲಿಂಗಗಳ ಸ್ಥಳಗಳಲ್ಲೂ ಬಸವಧರ್ಮ ಸಮ್ಮೇಳನಗಳು ನಡೆಸಬೇಕು ಎನ್ನುವ ಇಚ್ಚೆಯನ್ನ ವ್ಯಕ್ತಪಡಿಸಿದರು. ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕನಷ್ಷೇ ಅಲ್ಲದೇ ಇಡೀ ಪ್ರಪಂಚದ ನಾಯಕನಾಗ ಬೇಕು ಎಂದರು.
ಕಾಯಕದಿಂದ ಬಂದ ಸಂಪೂರ್ಣ ಹಣವನ್ನ ಬಸವಣ್ಣನವರ ಸೇವೆಗಾಗಿ ನಾನು ಸದಾ ಸಿದ್ದನಿದ್ದೇನೆ ಎಂದರು.

ದಿವ್ಯ ಸಾನಿದ್ಯವನ್ನ ವಹಿಸಿದ್ದ ಬಸವ ಧರ್ಮ ಪೀಠದ ಪೂಜ್ಯರಾದ ಮಾತೆ ಗಂಗಾದೇವಿ ಮಾತಾಜಿಯವರ ತಮ್ನ ಆಶೀರ್ವಚನ ನೀಡಿದರು

ಕಾಲ ಜ್ಞಾನ ವಚನ ಸಾಹಿತ್ಯದಲ್ಲಿ ಉಲ್ಲೇಖವಿರುವ ಎಣ್ಣೆ ಕಾವೇರಿ ನದಿಯ ತಟದಲ್ಲಿ ಗುರು ಚೆನ್ನಬಸವಣ್ಣನವರು ಮರೆಯುತ್ತಾರೆ ಎನ್ನುವ ವಚನ ಆಶಯದೊಂದಿಗೆ
ಊಟಿಯಿಂದ ಪ್ರಾರಂಭವಾಗಿ ಇಂದು ವಿಶ್ವ ಪ್ರಸಿದ್ದ ಕಾಶಿನಗರದಲ್ಲಿ ಎಂಟನೆಯ ಬಸವಧರ್ಮ ಸಮ್ಮೇಳನ ಹೇಗೆ ವಿಷೇಶವಾಗಿ ನಡೆದುಕೊಂಡು ಬಂದವು ಎಂದು ಪರಿಪರಿಯಾಗಿ ವಿವರಿಸಿದರು.
ಜಗತ್ತಿನಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಬೇಕಾದರೆ ಗುರು ಬಸವ ಸಂದೇಶದ ಅತ್ಯಗತ್ತತೆಯ ಬಗ್ಗೆ ವಿವರಿಸುತ್ತ
ಬಸವ ಸಂಸ್ಕೃತಿಯು ದೇಶ ವ್ಯಾಪಿಯಾಗಿ ಪಸರಿಸ ಬೇಕು ಎಂದರು.

1924 ರಲ್ಲಿ ನಡೆದ ಬೆಳಗಾವಿಯ ಕಾಂಗ್ರೇಸ್ ಅಧಿವೇಶನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಗುರು ಬಸವಣ್ಣನವರು ಬಗ್ಗೆ ನುಡುದ ಮಾತುಗಳನ್ನ ಪೂಜ್ಯರು ಉಲ್ಲೆಖಿಸಿದರು.

ದೇಶದ ಐಕ್ಯತೆಗೆ ಬಸವಣ್ಣನವರ ತತ್ವಗಳೇ ಪೂರಕ ಅದರಿಂದ ಭಾರತ ದೇಶ ಇನ್ನು ಮುಂದೆ ಬಸವಭಾರತವಾಗಬೇಕು ಎಂದರು.

ಬೆಂಗಳೂರಿನಲ್ಲಿ ಅಕ್ಟೊಬರ್ 5 ರಂದು ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶರಣ ವೃಂದಕ್ಕೆ ಕರೆ ಕೊಟ್ಟರು.

ಪರಮಪೂಜ್ಯ ಮಾತಾಜಿಯವರು ರಚಿಸಿದ ಕಲ್ಯಾಣ ಕರೆದಿದೆ ಕಲ್ಯಾಣ ಗೀತಯನ್ನ ಶರಣೆ
ವಿಜಯಲಕ್ಷ್ಮಿ ಲಿಂಗಾಯತ ಅವರು ಗಾಯನ ಹಾಗೂ ಶಾಂತಕ್ಕ ಅದ್ಯಕ್ಷರು ಮಹಿಳಾ ಗಣ ಇವರು ಬಸವನ ಬೆಳಕೆ ಎಲ್ಲಾಡಿ ಬಂದೆ ಗೀತೆಯನ್ನ ಹಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಯು ಪರಮೇಶ್ವರಪ್ಪ ಪ್ರೊಫೆಸರ ಮೆಡಿಸಿನ್ ಬಿ ಹೆಚ್ ಯು ವಾರಣಾಸಿ., ಅವರು ಮಾತನಾಡುತ್ತ

ಇತ್ತೀಚಿಗೆ ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರು ಭಾರತದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಗುರು ಬಸವಣ್ಣನವರ ಅದ್ಯಯನ ಪೀಠ ಪ್ರಾರಂಭ ಮಾಡಬೇಕು ಎಂದು ಸುತ್ತೋಲೆಯನ್ನ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ ಎಂದರು ಮತ್ತು ಲಿಂಗಾಯತ ಧರ್ಮ ಸ್ವತಂತ್ರವಾದರೆ ಅದರಿಂದ ಲಿಂಗಾಯತರಿಗೆ ಎಷ್ಟೊಂದು ಉಪಯೋಗವಾಗಲಿದೆ ಎಂದು ಹೇಳಿದರು ಮತ್ತು ವಚನಗಳು ಈಗ ಸಾಕಷ್ಟು ಡಿಜಟೀಲೀಕರಣವಾಗಿದೆ ಅದರ ಸದುಪಯೋಗ ಮಾಡಿಕೊಳ್ಳ ಬೇಕೆಂದರು ಮತ್ತು ಕೇವಲ ಬಸವಣ್ಣನವರ ಬಗ್ಗೆ ಹೇಳುತ್ತ ಮತ್ತು ವಚನಗಳನ್ನ ಹೇಳುತ್ತ ಹೋದರೆ ಸಾಲದು ನಡೆಯಲ್ಲೂ ಆಚರಣೆಯನ್ನೂ ಮಾಡಬೇಕು ಎಂದರು , ಬನಾರಸ್ ಹಿಂದು ಯುನಿವರ್ಸಿಟಿಯಲ್ಲಿ ಇರುವ ಬರೋಡದ ಮಹಾರಾಜರಾದ ಸಯ್ಯಾಜಿರಾವ್ ಗಾಯಕವಾಡ ಅವರ ಗ್ರಂಥಾಲಯಕ್ಕೆ ತಪ್ಪದೇ ಭೇಟಿ ಕೊಡಿ ಎಂದು ಮನವಿ ಮಾಡಿದರು. ಮತ್ತು ಬಸವಣ್ಣನವರ ಚಿಕ್ಕ ಮೂರ್ತಿಗಳನ್ನ ಮಾಡಿ ಮನೆಮನೆಗೂ ತಲುಪಿಸುವ ಕಾರ್ಯವಾಗಬೇಕು ಎಂದರು

ಇನ್ನೋರ್ವ ಅಥಿತಿಗಳಾಗಿ ಆಗಮಿಸಿದ
ಕೌಷಿಕ ರಾಜಶೇಖರ ಮಾತನಾಡುತ್ತ ತಮಗಿರುವ ಬಸವಣ್ಣನವರ ಬಗ್ಗೆ ಇರುವ ಭಕ್ತಿಯನ್ನ ಹಂಚಿಕೊಂಡರು ಹಲವಾರು ವಚನಗಳನ್ನ ಓದಿಕೊಂಡಿದ್ದೇನೆ ಮತ್ತು ದಿನನಿತ್ಯ ಲಿಂಗಪೂಜೆ ಮಾಡುತ್ತೇನೆ ಎಂದರು,ಹಾಗೂ
ಬಸವಣ್ಣನವರ ಆಶೀರ್ವಾದದಿಂದ ಹೇಗೆ ನಾನು ಎಂಬಿಬಿಎಸ್ ಸೀಟು ಪಡೆದೆ ಎಂದು ವಿವರಿಸಿದರು.

ಸ್ವಾಗತವನ್ನ ಶರಣ ರವಿಶಂಕರ ಬಳ್ಳಾರಿ ಪ್ರಾಸ್ತಾವಿಕ ನುಡಿಗಳನ್ನ ಶರಣ ಚಂದ್ರಮೌಳಿ ಅವರ ನೆಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗೌರ್ವಾನಿತರಾಗಿ ಆಗಮಿಸಿದ,
ಶರಣರಾದ
ಅನಿಲ ಕುಮಾರ ಪಾಟೀಲ,ಚಂದ್ರಮೌಳಿ, ವೀರಣ್ಣ ಕೊರ್ಲಹಳ್ಳಿ, ದೇವಿಕಾ ಶರಣಪ್ಪ,ನಂದಕುಮಾರ ಕೊಲತಪಳ್ಳಿ ಅಶೋಕ ಕುಮಾರ , ಡಾ.ಶರಣಪ್ಪ,, ಶಿವಕುಮಾರ ಪಟ್ನೆ, ಪ್ರಕಾಶ ಜೀರ್ಗೆ ಶಾಂತಮ್ಮ ಮಹಿಳ ಅದ್ಯಕ್ಷರು ರಾಬದ. ಶೊಭಾತಾಯಿ, ಸುನಿತಾತಾಯಿ ಇನ್ನೂ ನೂರಾರು ಸಂಖ್ಯೆಯಲ್ಲಿ ಶರಣರು ಭಾಗವಹಿಸಿದರು.

About Mallikarjun

Check Also

screenshot 2025 10 16 19 20 27 64 e307a3f9df9f380ebaf106e1dc980bb6.jpg

ಸರ್ವೋದಯ ಪಕ್ಷದ ಕಾರ್ಯಾಧ್ಯಕ್ಷರಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇಮಕ

MLA Darshan Puttannaiah appointed as Sarvodaya Party working president ಬೆಂಗಳೂರು,ಅ.೧೬;ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಮೈಸೂರಿನ ಕರುಣಾಕರ.ಬಿ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.