“Demand to take action against Kiran Kumar, a staff member who is acting carelessly during work.”

ಕೊಟ್ಟೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂರಾರು ಬಡ ರೋಗಿಗಳು ತಮ್ಮ ಆರೋಗ್ಯವನ್ನು ತೋರಿಸಿಕೊಳ್ಳಲು ಪ್ರತಿನಿತ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ಕಿರಣ್ ಕುಮಾರ್ ರೋಗಿಗಳ ಮೇಲೆ ಗದರಿಸುವುದು ಬೈಯುವುದು ಮತ್ತು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬಂದರೆ ಯಾವುದೇ ರೀತಿ ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರು ಆತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನ ಭಾನುವಾರದಂದು ಒಬ್ಬ ರೋಗಿಯು ತಮ್ಮ ಆರೋಗ್ಯ ತೋರಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಾರೆ ವೈದ್ಯರು ಬಿಪಿಯನ್ನು ಚೆಕ್ ಮಾಡಿಸುವಂತೆ ಹೇಳುತ್ತಾರೆ ಡಿಪಿ ಚೆಕ್ ಮಾಡಿಸಿಕೊಳ್ಳಲು ಸಿಬ್ಬಂದಿ ಕಿರಣ್ ಕುಮಾರ್ ಬಳಿ ಬಂದರೆ ನಾನು ಬಿಪಿ ಚೆಕ್ ಮಾಡುವುದಿಲ್ಲ ಯಾರಿಗೆ ಬೇಕಾದರೂ ಹೇಳಿ ನಾನು ಬಿಪಿ ಚೆಕ್ ಮಾಡುವುದಿಲ್ಲ ಎಂದು ಅಸಡ್ಯ ಉತ್ತರವನ್ನು ನೀಡುವುದಲ್ಲದೆ ಯಾವ ಅಧಿಕಾರಿಗಳಿಗಾದರೂ ಫೋನ್ ಮಾಡಿ ನಾನು ಮಾಡುವುದಿಲ್ಲ ಎಂದು ಹೇಳುತ್ತಾರೆ. ಸಿಬ್ಬಂದಿ ಕಿರಣ್ ಕುಮಾರ್ ಅವರ ವರ್ತನೆ ನೋಡಿ ನೋಡಿ ಸಾರ್ವಜನಿಕರು ಹಾಗೂ ರೋಗಿಗಳು ಅರೆ ಹುಚ್ಚನಂತೆ ಮಾತನಾಡುತ್ತಿದ್ದಾರೆ ಎಂದು ಕೂಡಲೇ ಮೇಲಾಧಿಕಾರಿಗಳು ಈತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮತ್ತು ಡಿಎಸ್ಎಸ್ ಸಂಘಟನೆಗಳು ಆಗ್ರಿಸಿದರು.