Woman missing: Request for assistance in finding her

ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮದ ನಿವಾಸಿ 30 ವರ್ಷದ ಸಂಗೀತಾ ಗಂಡ ಶಿವಶರಣಪ್ಪ ನಾಯಕ ಎಂಬ ಮಹಿಳೆ 2025ರ ಆಗಸ್ಟ್ 13 ರಿಂದ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಂಗೀತಾ ಗಂಡ ಶಿವಶರಣಪ್ಪ ನಾಯಕ ಎಂಬ ಮಹಿಳೆಯು ಆ. 13ರಂದು ಬೆಳಿಗ್ಗೆ 8.45 ಗಂಟೆಯ ಸುಮಾರಿಗೆ ಮನೆಯಿಂದ ಹೋದವಳು ಈ ವರೆಗೂ ಪತ್ತೆಯಾಗಿರುವುದಿಲ್ಲ ಎಂದು ಕುಟುಂಬಸ್ಥರು ದೂರು ನೀಡಿದ್ದು, ಈ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:200/2025, ಕಲಂ 00ಎಂಪಿ ಭಾರತೀಯ ನ್ಯಾಯ ಸಂಹಿತೆ-2023 ಮಹಿಳೆ ಕಾಣೆ ರೀತ್ಯ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯು 5 ಅಡಿ ಎತ್ತರ, ದುಂಡು ಮುಖ, ಕೆಂಪು ಮೈ ಬಣ್ಣ, ಸಾದಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಬಿಳಿ ಬಣ್ಣದ ಹೂವಿನ ಮತ್ತು ಕಾಫಿ ಬಣ್ಣದ ಚೂಡಿದಾರ ವೇಲು ಧರಿಸಿದ್ದಳು. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಈ ಚಹರೆಯ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕುಷ್ಟಗಿ ಪೋಲಿಸ್ ಠಾಣೆ ಸಿ.ಪಿ.ಐ ದೂ.ಸಂ: 9480803732, ಕುಷ್ಟಗಿ ಪೋಲಿಸ್ ಠಾಣೆ ಪಿ.ಎಸ್.ಐ ದೂ.ಸಂ: 9480803757, ಗಂಗಾವತಿ ಡಿ.ಎಸ್.ಪಿ ದೂ.ಸಂ: 9480803721 ಹಾಗೂ ಕೊಪ್ಪಳ ಎಸ್‌ಪಿ ಕಛೇರಿ ಸಂಖ್ಯೆ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಕುಷ್ಟಗಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
****