Bangalore's Kumbh Mela Cultural Academy. Punyakoti award to Shivakumar Malipatil.
ಗಂಗಾವತಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಶಿವಕುಮಾರ ಮಾಲಿಪಾಟೀಲ್ ಅವರಿಗೆ ಆಗಸ್ಟ್-೨೮ ಗುರುವಾರ ಲಯನ್ಸ್ ಕ್ಲಬ್‌ನಲ್ಲಿ ಪುಣ್ಯಕೋಟಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಶೇಖರ್ ತೆಗ್ಗಿ ಅವರು ತಿಳಿಸಿದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಡಾ. ಶಿವಕುಮಾರ ಮಾಲಿಪಾಟೀಲ್ ಅವರು ವೃತ್ತಿಯಲ್ಲಿ ಒಬ್ಬ ವೈದ್ಯರಾಗಿ ಸಾಹಿತಿಗಳಾಗಿ, ಸಮಾಜ ಸೇವಕರಾಗಿ ಸಾಕಷ್ಟು ಸೇವೆಗಳನ್ನು ಸಲ್ಲಿಸುತ್ತಾ ಜನಾನುರಾಗಿಯಾಗಿದ್ದಾರೆ. ಇವರಿಗೆ ಸನ್ಮಾನಿಸಿ ಅಭಿನಂದಿಸುವುದು ನಮ್ಮ ಅಕಾಡೆಮಿಯ ಹೆಬ್ಬಯಕೆಯಾಗಿತ್ತು. ಅಂದರೆ ಈ ದಿನ ಅವರಿಗೆ ಪುಣ್ಯಕೋಟಿ ಪ್ರಶಸ್ತಿ ಪ್ರದಾನ ಮಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಡಕಿಯ ವಡಕೆಪ್ಪ ತಾತನವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಬಸವರಾಜ ಮೇಟಿ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಿವಕುಮಾರ ಮಾಲಿಪಾಟೀಲ್ ಅವರು, ನಾನು ಸುಮಾರು ೨೦೦೦ನೇ ಇಸ್ವಿಯಲ್ಲಿ ಲಯನ್ಸ್ ಕ್ಲಬ್ ಸದಸ್ಯನಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಅಂದಿನಿAದ ಪರಿಸರ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ನಗರದ ಸ್ವಚ್ಛತೆ ಕುರಿತಂತೆ ಹಲವಾರು ಸೇವಾ ಕಾರ್ಯಗಳಲ್ಲಿ ನಾನು ತೊಡಗಿಕೊಂಡಿದ್ದು, ಗಂಗಾವತಿ ಒಂದು ಮಾದರಿ ನಗರವಾಗಿ ಅಭಿವೃದ್ಧಿಯಾಗಬೇಕೆನ್ನುವುದು ನನ್ನ ಒತ್ತಾಸೆಯಾಗಿದೆ, ಆ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಕೈಜೋಡಿಸಬೇಕೆಂದರು. ನನ್ನ ಈ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಹ್ಲಾದ ಕುಲಕರ್ಣಿ, ಚಿದಾನಂದ ಕೀರ್ತಿ, ದಶರಥ ಪಿ., ರಮೇಶ ಕೋಟಿ, ಹೆಚ್. ಮಲ್ಲಿಕಾರ್ಜುನ, ಸಿಂಗಾಪುರ ಭೀಮರಾಯ ನಾಯಕ್, ಶಿವಕುಮಾರ ಹಾದಿಮನಿ, ಪ್ರಕಾಶರೆಡ್ಡಿ, ಆರ್. ಚನ್ನಬಸವ, ಆರತಿ ಮಂಜುನಾಥ ಸೇರಿದಂತೆ ಇತರರು ಪಾಲ್ಗೊಂಡಿದ್ದರು.