R. Channabasava demands appropriate action against doctors who snatched journalist's mobile phone and abused him with abusive words while he was covering news

ಗಂಗಾವತಿ : ನಗರದ ಕನಕಗಿರಿ ರಸ್ತೆಯ ಇರುವ ವಿವೇಕಾನಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲ್ಬಾಗದ ಕಟ್ಟಡದ ಕಾಮಗಾರಿಯು ನಡೆಯುತ್ತಿದ್ದು ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಯಾವುದೇ ತರಹದ ಸುರಕ್ಷತೆ ಇಲ್ಲದೆ ಕೆಲಸಗಳು ನಡೆಸುತ್ತಿದ್ದಾರೆ.
ಈ ಆಸ್ಪತ್ರೆಯ ಕೆಲಸಗಳು ನಡೆಯುತ್ತಿರುವಾಗಲೇ ಇತ್ತ ಇನ್ನೊಂದು ಕಡೆ ಹೊರಗಿಂದ ಬರುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಅದು ಹೇಗೆ ಅಂದರೆ ಕಾಮಗಾರಿಯ ಸಾಕಷ್ಟು ಧೂಳು ತುಂಬಿದ, ದವಾಖಾನೆಯಾಗಿದೆ ಇಲ್ಲಿ ಹೆಚ್ಚಾಗಿ ಈ ಆಸ್ಪತ್ರೆಗೆ ಡೆಲಿವರಿ ಪೇಷಂಟ್ ಬರುತ್ತದೆ. ಇಷ್ಟೊಂದು ಧೂಳು ತುಂಬಿದ ದವಾಖಾನೆಯಲ್ಲಿ ಚಿಕಿತ್ಸೆ ಪಡಲಿಕ್ಕೆ ಬರುವಂತಹ ರೋಗಿಗಳ ಸ್ಥಿತಿ ಏನಾಗಬಹುದು ಮತ್ತು ಇದರ ಬಗ್ಗೆ ಪ್ರಶ್ನೆ ಮಾಡಲು ಹೋದ ಸಂದರ್ಭದಲ್ಲಿ ಪತ್ರಕರ್ತ ಮಂಜುನಾಥ ಆರತಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಫೋನ್ ಮತ್ತು ಐಡಿ ಕಾರ್ಡ್ ಕಿತ್ತುಹೆಸೆದ ಘಟನೆ ನಡೆದಿದೆ. ಈರೀತಿ ಪತ್ರಕರ್ತ ಮೇಲೆ ಮೇಲಿಂದ ಮೇಲೆ ನಡೆಯುತ್ತಲಿದೆ.
ಆದ್ದರಿಂದ ಜಿಲ್ಲಾ ಆಡಳಿತ ವೈದ್ಯಧಿಕಾರಿಗಳಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ಆರ್ ಚನ್ನಬಸವ ಚಲವಾದಿ. ಅವರು ಈ ಘಟನೆಗೆ ಕಾರಣರಾದ ಆಸ್ಪತ್ರೆಯ ಮುಖ್ಯಸ್ಥರ ಮೇಲೆ ಮತ್ತು ಮೊಬೈಲ್ ಕಸಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಶ್ರೀನಿವಾಸ್ , ಹೇ ನೀನು ಯಾರೋ ಲೇ ಇದನೆಲ್ಲ ಕೇಳೋಕೆ ನೀನ್ಯಾರು, ಎಂದು ಏಕವಚನದಲ್ಲಿ ನಿಂದಿಸಿದ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಡಿ ಹೆಚ್ಚು ಓ ಅವರಿಗೆ ಒತ್ತಾಯಿಸುತ್ತೇವೆ.
ಈ ಆಸ್ಪತ್ರೆಯಲ್ಲಿ ಸರಿಯಾಗಿ ಸ್ವಚ್ಛತೆ ಕುಡಿಯಲು ಯೋಗ್ಯ ಇಲ್ಲದ ನೀರು, ಅಲ್ಲೇ ನಡೆಯುತ್ತಿರುವ ಎಲೆಕ್ಟ್ರಿಕ್ ಕೆಲಸಗಳು, ಗೋಡೆ ಕಟ್ಟುವ ಕೆಲಸ, ಕೊರೆಯುವ ಕೆಲಸ, ಇನ್ನೂ ಮುಂತಾದ ಕೆಲಸಗಳು ಬಾಕಿ ಇದ್ದರೂ ಸಹ ತರಾತುರಿಯಲ್ಲಿ ಕಟ್ಟಡ ಕಾಮಗಾರಿಗಳು ಸಾಗುತ್ತಿವೆ.
ಇವರ ಹಣದಾಸೆಗೆ ಇತ್ತಾ ರೋಗಿಗಳಿಗೆ ಅಲ್ಲೇ ಗ್ಲೋಕೋಸ್ ಹಾಕುತ್ತಾರೆ, ಅವರನ್ನು ಬೇರೆ ಕಡೆ ಚಿಕಿತ್ಸೆ ನೀಡದೆ ಧೂಳಿನಿಂದ ಕುಡಿದ ಹಾಲ್ ನಲ್ಲಿ ಇರಿಸಿದ್ದಾರೆ.ಇದರಿಂದ ಆನರೋಗ್ಯದಲ್ಲಿ ಇರುವ ರೋಗಿಗಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ, ಇದನ್ನೆಲ್ಲಾ ಕಂಡು ಪತ್ರಕರ್ತರೊಬ್ಬರು ವಿಚಾರಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ವೀಡಿಯೊ ಮಾಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ತಡೆದು ಏಕವಚನದಲ್ಲಿ ಮಾತನಾಡಿದ್ದಾರೆ.
ಇಂತಹ ವೈದ್ಯರು ಇನ್ನೂ ಬಡವರು,ದಲಿತರು, ಸಾರ್ವಜನಿಕರ ಮೇಲೆ ಇನ್ನೂ ಇಷ್ಟೊಂದು ದೌರ್ಜನ್ಯ ಪ್ರಕರಣಗಳು ನಡೆದಿರುವುದೆಂಬುದು ಎಂಬುದು ಅನುಮಾನಗಳು ಮೂಡುತ್ತವೆ ಆದ್ದರಿಂದ ಕೂಡಲೇ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳು ಈ ಆಸ್ಪತ್ರೆಗೆ ಬೇಟಿ ಕೊಟ್ಟು ಇಲ್ಲಿ ನಡೆಯುವಂತಹ ಕಾಮಗಾರಿ ನಿಲ್ಲಿಸಿ ಅಥವಾ ಈ ಆಸ್ಪತ್ರೆ ಇರುವಂತ ರೋಗಿಗಳನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ ಬೇರೆ ಕಡೆ ಸ್ಥಳಾಂತರಿಸಬೇಕು ಮತ್ತು ಪತ್ರಕರ್ತನ ನಿಂದಿಸಿದ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕೆ ಪ್ರಕಟನೆ ಮೂಲಕ ಒತ್ತಾಯಿಸಿ ದ್ದಾರೆ.