Special puja program at Vinayaka temple a success: Sharanabasappa, President

ಗಂಗಾವತಿ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಶ್ರೀ ಜ್ಞಾನಸಿದ್ದಿ ವಿನಾಯಕ ದೇವಸ್ಥಾನದ ನಾಲ್ಕನೆಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ದಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಮತ್ತು ಮಹಾ ಅನ್ನಪ್ರಸಾದದೊಂದಿಗೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಶರಣಬಸಪ್ಪ ಸೇರಿದಂತೆ ಅಲ್ಲಿನ ವಾಹನ ಚಾಲಕರು ಮತ್ತು ಮಾಲೀಕರು ಸದಸ್ಯರುಗಳು ಹೇಳಿದರು.ಈ ಕಾರ್ಯಕ್ರಮದಲ್ಲಿ ಸುಳೇಕಲ್ ಬೃಹನ್ ಮಠದ ಶ್ರೀ ವೇದಮೂರ್ತಿ ಭುವನೇಶ್ವರ ತಾತನವರು ಮಾತನಾಡಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಮೊದಲು ಗಣಪತಿಗೆ ಮೊದಲನೇ ಪೂಜೆ ಸಲ್ಲುತ್ತದೆ. ಸರ್ವ ವಿಜ್ಞಗಳನ್ನು ನಿವಾರಣೆ ಮಾಡುವ ಗಣಪತಿಯನ್ನು ಪೂಜಿಸುವುದರಿಂದ ಸಂಕಷ್ಟಗಳು ದೂರವಾಗುತ್ತವೆ. ಅದೇ ರೀತಿಯಾಗಿ ಈ ಹಿಂದೆ ಈ ಜಾಗವು ಬಹಳ ಗಲಿಜನಿಂದ ಕೂಡಿದಂತ ತಾಣವಾಗಿತ್ತು. ಗಣಪತಿ ಪ್ರತಿಷ್ಠಾಪನೆ ನಂತರ ಈ ಜಾಗವೂ ಬಹಳ ಸುಂದರವಾಗಿದೆ ಎಂದು ಹೇಳಿದರು. ನಾಲ್ಕನೇ ವರ್ಷದ ಶ್ರೀ ಜ್ಞಾನ ಸಿದ್ದಿ ವಿನಾಯಕನ ದೇವಸ್ಥಾನಕ್ಕೆ ಶ್ರಮಪಟ್ಟಂತ ಶರಣಬಸಪ್ಪ ಮತ್ತು ಅವರ ಸರ್ವ ಸದಸ್ಯರಿಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು. ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ ಶ್ರೀ ಜ್ಞಾನ ಸಿದ್ದಿ ವಿನಾಯಕನ ದೇವಸ್ಥಾನ ಶಾಲಾ ಕಾಲೇಜು ಆವರಣದಲ್ಲಿ ನಿರ್ಮಾಣಗೊಂಡಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಆ ವಿನಾಯಕ ಒಳಿತು ಮಾಡಲಿ.ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಾರ್ಜನೆ ಶಕ್ತಿ ಕೊಡಲಿ ಎಂದು ಹೇಳಿದರು. ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ಪೂಜೆಗೆ ಮೊದಲು ಗಣಪತಿ ಮುಖ್ಯ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಗಣಪತಿ ಮುಖ್ಯ. ಸರ್ವ ವಿಘ್ನಗಳಿಗೂ ಶ್ರೀ ಜ್ಞಾನಸುದ್ದಿ ವಿನಾಯಕ ಬಹಳ ಮುಖ್ಯ ಅದೇ ರೀತಿಯಾಗಿ ಶರಣಬಸಪ್ಪ ಮತ್ತು ಅವರ ಸಂಘದ ಸರ್ವ ಸದಸ್ಯರಿಗೂ ವಿನಾಯಕ ಒಳಿತವನ್ನು ಮಾಡಲಿ ಎಂದು ಹೇಳಿದರು. ನಂತರ ಸಾವಿರಾರು ಜನರು ಶ್ರೀ ಜ್ಞಾನ ಸಿದ್ದಿ ವಿನಾಯಕನ ಆಶೀರ್ವಾದವನ್ನು ಪಡೆದು ಮಹಾ ಅನ್ನಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಶಿವಕುಮಾರ ಮಾಲಿಪಾಟೀಲ್. ವಾಹನ ಚಾಲಕ ಮತ್ತು ಮಾಲಕರಾದಾ ಪ್ರವೀಣ. ಮಾಂತೇಶ. ಯುನೂಸ್. ವೀರೇಶ. ಅಶೋಕ. ರಾಜು.ಸಂತೋಷ. ಕುಂಬಾರ ಬಸವರಾಜ.ಹರೀಶ. ಹುಮ್ಮರ್ ಸಾಬ್. ರಫಿ.ಸೇರಿದಂತೆ ಸಾರ್ವಜನಿಕರು ಮತ್ತು ಗಜೇಂದ್ರಗಡದ ಅಡುಗೆ ತಯಾರಕರು ಮಹಾಪ್ರಸಾದವನ್ನು ಸ್ವೀಕರಿಸಿ ಶ್ರೀ ಜ್ಞಾನ ಸಿದ್ದಿ ವಿನಾಯಕನ ಕೃಪೆಗೆ ಪಾತ್ರರಾದರು.