Gangavathi Taluka Level Dasara Games tomorrow

ಗಂಗಾವತಿ: ಆಗಸ್ಟ್-೨೪ ರವಿವಾರದಂದು (ನಾಳೆ) ಶ್ರೀ ಚನ್ನಬಸವಸ್ವಾಮಿ ತಾಲ್ಲೂಕು ಕ್ರೀಡಾಂಗಣ ಗಂಗಾವತಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಗಂಗಾವತಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ-೨೦೨೫ ನಡೆಯಲಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾಧಿಕಾರಿಯಾದ ಯಂಕಪ್ಪ ತಳವಾರ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕ್ರೀಡಾಕೂಟವು ವಿರೋಧ ಪಕ್ಷದ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರೆಡ್ಡಿಯವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಮಾನ್ಯ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ನೆರವೇರಿಸಲಿದ್ದಾರೆ. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಗಂಗಾವತಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿಯವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದರಾದ ರಾಜಶೇಖರ ಹಿಟ್ನಾಳ, ವಿಧಾನಪರಿಷತ್ ಸದಸ್ಯರುಗಳಾದ ಶಶಿಲ್ ಬಿ. ನಮೋಶಿ, ಡಾ|| ಚಂದ್ರಶೇಖರ ಬಿ. ಪಾಟೀಲ್, ಶರಣಗೌಡ ಪಾಟೀಲ್ ಬಯ್ಯಾಪುರ, ಶ್ರೀಮತಿ ಹೇಮಲತಾ ನಾಯಕ, ಗಂಗಾವತಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಹೀರಾಬಾಯಿ ನಾಗರಾಜ, ತಹಶೀಲ್ದಾರರಾದ ಎಸ್. ರವಿ ಅಂಗಡಿ, ಗಂಗಾವತಿ ಡಿ.ವೈ.ಎಸ್.ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ರಾಮರೆಡ್ಡಿ ಪಾಟೀಲ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ ಜಾಬಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಬಿ. ನಟೇಶ್, ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ ಸಿಂಗನಾಳ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎ. ಬಸವರಾಜ, ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀಮತಿ ಎಂ. ಸರಸ್ವತಿ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು ಆಗಸ್ಟ್-೨೩ ರೊಳಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಯಂಕಪ್ಪ ತಳವಾರ ದೈ.ಶಿ. ಮೊ: ೯೪೪೯೯೨೦೦೯೪, ಶಿವಕಾಂತ ತಳವಾರ, ದೈ.ಶಿ ಮೊ: ೯೯೧೬೭೯೯೪೮೨, ನಾಗರಾಜ ಟಿ. ದೈ.ಶಿ. ಮೊ: ೯೭೩೧೨೯೩೩೦೫, ವಿಠ್ಠಪ್ಪ ನುಗ್ಲಿ ದೈ.ಶಿ ಮೊ: ೯೯೬೪೨೭೯೯೫೭, ಪಾಮಣ್ಣ ದೈ.ಶಿ ಮೊ: ೯೯೬೪೬೭೨೦೪೬, ಶ್ರೀಧರ ಎನ್. ದೈ.ಶಿ ಮೊ: ೯೯೭೨೬೪೩೧೮೧ ಅಥವಾ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕ ಕ್ರೀಡಾ ಇಲಾಖೆ ಕಛೇರಿಗೆ ಸಂಪರ್ಕಿಸುವAತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಪಟುಗಳು ಈ ಕೆಳಗಿನ ಲಿಂಕ್ ಅಥವಾ ಕಿಖ ಕೋಡ್ ಮುಖಾಂತರ ಜಾಯಿನ್ ಆಗಲು ಸೂಚಿಸಿದೆ
.https://dasaracmcup-2025.etrpindia.com/KA-sports/applicationForm/personal